
ನವದೆಹಲಿ (ಜ. 28): ಸತತ 3ನೇ ದಿನವಾದ ದೇಶದಲ್ಲಿ 3 ಲಕ್ಷಕ್ಕಿಂತ ಕಡಿಮೆ ಕೇಸು ದಾಖಲಾಗಿದ್ದು, ಗುರುವಾರ 2,86,384 ಕೊರೋನಾ ಕೇಸು ದೃಢಪಟ್ಟಿದು, 573 ಮಂದಿ ಬಲಿಯಾಗಿದ್ದಾರೆ. ಚೇತರಿಕೆ ಪ್ರಮಾಣ ಹೆಚ್ಚಿರುವ ಹಿನ್ನೆಲೆಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 22,02,472ಕ್ಕೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.19.59ಕ್ಕೆ ಜಿಗಿದಿದ್ದು, ವಾರದ ಪಾಸಿಟಿವಿಟಿ ದರ ಶೇ.17.75ಕ್ಕೆ ತಲುಪಿದೆ. ಇದೇ ವೇಳೆ ಕೊರೋನಾ ತಡೆಗಾಗಿ ಲಸಿಕೆ ಅಭಿಯಾನಕ್ಕೆ ಚುರುಕು ನೀಡಿರುವ ಕೇಂದ್ರ ಸರ್ಕಾರ ಈವರೆಗೆ 163.84 ಕೋಟಿ ಡೋಸ್‌ಗಳನ್ನು ನೀಡಿದೆ.
ಲತಾರಿಗೆ ಅಳವಡಿಸಿದ್ದ ವೆಂಟಿಲೇಟರ್ ತೆಗೆದು ಆರೋಗ್ಯ ತಪಾಸಣೆ
ನವದೆಹಲಿ: ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೃತಕ ಉಸಿರಾಟಕ್ಕಾಗಿ ಅಳವಡಿಸಿದ ವೆಂಟಿಲೇಟರ್‌ನ್ನು ಪ್ರಯೋಗಾರ್ಥವಾಗಿ ಗುರುವಾರ ಬೆಳಿಗ್ಗೆ ತೆಗೆದುಹಾಕಲಾಗಿದೆ. ಆದರೂ ಲತಾ ಈಗಲೂ ಐಸಿಯುನಲ್ಲಿ ತಜ್ಞರ ವೈದ್ಯರ ತಂಡದ ನಿಗಾದಲ್ಲೇ ಇರಲಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 92 ವರ್ಷದ ಲತಾರಿಗೆ ಕೋವಿಡ್ ಸೋಂಕು ತಗುಲಿದ ಕಾರಣ ಜನವರಿ ತಿಂಗಳ ಆರಂಭದಲ್ಲೇ ಮುಂಬೈಯ ಬ್ರಿಜ್ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿತ್ತು.
ವಿದೇಶಾಂಗ ಸಚಿವ ಜೈಶಂಕರ್‌ಗೆ ಕೊರೋನಾ ದೃಢ
ನವದೆಹಲಿ: ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್‌ಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಗುರುವಾರ ಬೆಳಿಗ್ಗೆ ಫ್ರೆಂಚ್ ವಿದೇಶಾಂಗ ಸಚಿವ ಜೀನ್-ಯ್ವೆಸ್ ಲೆ ಡ್ರಿಯನ್ ಅವರೊಂದಿಗೆ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೀಗಾಗಿ ಕೂಡಲೇ ತಮ್ಮ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ 51739 ಹೊಸ ಕೋವಿಡ್ ಕೇಸು
ತಿರುವನಂತಪುರ: ಕೇರಳದಲ್ಲಿ ಗುರುವಾರ 51,739 ಹೊಸ ಕೋವಿಡ್ ಪ್ರಕರಣ ದೃಢಪಟ್ಟಿದ್ದು, 68 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ 3,09,489 ಸಕ್ರಿಯ ಕೋವಿಡ್ ಸೋಂಕಿತರು ರಾಜ್ಯದಲ್ಲಿದ್ದಾರೆ. ಆದರೆ ಕೇವಲ ಶೇ.3.6 ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. 11,227 ಜನರು ವಿವಿಧ ಆಸ್ಪತ್ರೆಗಳಲ್ಲಿ ಐಸೋಲೇಶನ್‌ನಲ್ಲಿದ್ದಾರೆ. ಗುರುವಾರ 42,653 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
Government Employees ರಾಜ್ಯ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಸ್
ತಮಿಳ್ನಾಡು, ದಿಲ್ಲಿಯಲ್ಲಿ ಕೋವಿಡ್ ನಿರ್ಬಂಧ ಮತ್ತಷ್ಟುಸಡಿಲಕ್ಕೆ ನಿರ್ಧಾರ
ನವದೆಹಲಿ/ಚೆನ್ನೈ: ದೆಹಲಿ ಮತ್ತು ತಮಿಳುನಾಡು ಸರ್ಕಾರಗಳು ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟುಸಡಿಲ ಮಾಡಲು ನಿರ್ಧರಿಸಿವೆ. ದಿಲ್ಲಿಯಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆಯಲಾಗಿದ್ದು, ರಾತ್ರಿ ಕರ್ಫ್ಯೂ ಮುಂದುವರೆಯಲಿದೆ. ರೆಸ್ಟೋರೆಂಟ್, ಬಾರ್, ಸಿನಿಮಾ ಹಾಲ್‌ಗಳನ್ನು ಒಟ್ಟು ಸಾಮರ್ಥ್ಯದ ಶೇ.50ರಷ್ಟುಜನರೊಂದಿಗೆ ನಿರ್ವಹಿಸಲು ಅನುಮತಿ ನೀಡಲಾಗಿದೆ. ಆದರೆ ಶಾಲಾ-ಕಾಲೇಜುಗಳು ಸದ್ಯ ಆರಂಭವಾಗದು. ಇನ್ನು ತಮಿಳ್ನಾಡಲ್ಲಿ ಭಾನುವಾರದ ಲಾಕ್ಡೌನ್, ರಾತ್ರಿ ಕರ್ಫ್ಯೂ ಹಿಂದಕ್ಕೆ ಪಡೆಯಲಾಗಿದೆ. ಫೆ.1ರಿಂದ ಶಾಲಾ ಕಾಲೇಜು ಆರಂಭಕ್ಕೆ ನಿರ್ಧರಿಸಲಾಗಿದೆ. ರೆಸ್ಟೋರೆಂಟ್, ಬಾರ್, ಸಿನಿಮಾ ಹಾಲ್ ಒಟ್ಟು ಸಾಮರ್ಥ್ಯದ ಶೇ.50ರಷ್ಟುಜನರೊಂದಿಗೆ ಕಾರ್ಯನಿರ್ವಹಿಸಲಿವೆ.
Corona Update ಕರ್ನಾಟಕದಲ್ಲಿ ಕೊರೋನಾ ಇಳಿಕೆ, ಆದ್ರೂ ಶುರುವಾಯ್ತು ಮತ್ತೊಂದು ಆತಂಕ
ಕೋಲಾರದಲ್ಲಿ 81 ಮಕ್ಕಳಿಗೆ ಸೋಂಕು ದೃಢ
ಕೋಲಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದು ಗುರುವಾರ 81 ಮಂದಿ ಮಕ್ಕಳಲ್ಲಿ ಕೊರೋನ ಪಾಸಿಟೀವ್ ಹಾಗು 20 ಶಿಕ್ಷಕರಲ್ಲಿ ಕೊರೋನ ಪಾಸಿಟೀವ್ ಕಂಡುಬಂದಿದೆ. ಹಾಗು 18 ವರ್ಷ ಮೇಲ್ಪಟ್ಟವರಲ್ಲಿ 572 ಸಕ್ರಿಯ ಪ್ರಕರಣಗಳು ಗುರುವಾರ ಕಂಡುಬಂದಿವೆ. ಮಕ್ಕಳಲ್ಲಿ ಗುರುವಾರ ಕಾಣಿಸಿಕೊಂಡಿರುವ ಪ್ರಕರಣಗಳ ತಾಲ್ಲೂಕುವಾರು ಬಂಗಾರಪೇಟೆ 13, ಕೆಜಿಎಫ್ 10, ಕೋಲಾರ 9, ಮಾಲೂರು 8, ಮುಳಬಾಗಿಲು 47, ಶ್ರೀನಿವಾಸಪುರ 7, ಒಟ್ಟು 89 ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯ 20 ಶಿಕ್ಷಕರಲ್ಲಿ ಕೊರೋನ ಪಾಸಿಟೀವ್ ಕಂಡು ಬಂದಿದೆ. ಗುರುವಾರ 18 ವರ್ಷ ಮೇಲ್ಪಟ್ಟವರಲ್ಲಿ 572 ಪ್ರಕರಣಗಳು ಕಂಡು ಬಂದಿದ್ದವು, ತಾಲ್ಲೂಕುವಾರು ಕೋಲಾರ 139, ಮಾಲೂರು 84, ಬಂಗಾರಪೇಟೆ 83, ಕೆಜಿಎಫ್ 83, ಮುಳಬಾಗಿಲು 103, ಶ್ರೀನಿವಾಸಪುರ 82 ಪ್ರಕರಣಗಳು ಕಂಡುಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ