Assam Government Order: ಅಸ್ಸಾಂ ನಲ್ಲಿ ಸಚಿವರು ಇನ್ಮುಂದೆ ಬೇಕಾಬಿಟ್ಟಿ ಘೋಷಣೆ ಮಾಡುವಂತಿಲ್ಲ!

By Suvarna NewsFirst Published Jan 27, 2022, 11:11 PM IST
Highlights

ಅಸ್ಸಾ ಸಂಪುಟ ಸಭೆಯ ನಿರ್ಧಾರ
ಪೂರ್ವಾನುಮತಿ ಇಲ್ಲದೆ ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ
ರಾಜ್ಯದ ಹಣಕಾಸು ಸ್ಥಿತಿಗತಿ ಪರಿಶೀಲನೆ ಬಳಿಕವೇ ಹೊಸ ಯೋಜನೆ ಘೋಷಣೆ

ದಿಸ್ ಪುರ (ಜ. 27): ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ(Himanta Biswa Sarma) ಸೇರಿದಂತೆ ರಾಜ್ಯದ ಎಲ್ಲಾ ಸಚಿವರುಗಳು ಯಾವುದೇ ಪೂರ್ವ ಅನುಮತಿಯಿಲ್ಲದೆ ಹೊಸ ಯೋಜನೆಗಳನ್ನು ಘೋಷಣೆ ಮಾಡುವಂತಿಲ್ಲ. ರಾಜ್ಯದ ಹಣಕಾಸು ಸ್ಥಿತಿಗತಿಯ ಪರಿಶೀಲನೆಯ ಬಳಿಕವೇ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕು ಎಂದು ಅಸ್ಸಾಂ ಸರ್ಕಾರ (Assam Government) ಮಹತ್ವದ ನಿರ್ಧಾರ ಮಾಡಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ (Assam Cabinet Meeting)ಈ ನಿರ್ಧಾರವನ್ನು ಮಾಡಲಾಗಿದೆ. ಅಸ್ಸಾಂ ವಿಧಾನಸಭೆಯ ಬಜೆಟ್ (Budget Session of the Assam Legislative Assembly) ಅಧಿವೇಶನವು ಮಾರ್ಚ್ 14 ರಂದು ಪ್ರಾರಂಭವಾಗಲಿದ್ದು, 2022-23ನೇ ಹಣಕಾಸು (2022-23 fiscal)ವರ್ಷದ ರಾಜ್ಯದ ಹಣಕಾಸು ಹೇಳಿಕೆಯನ್ನು ಮಂಡಿಸಲು ಸಂಪುಟ ನಿರ್ಧರಿಸಿದೆ.

ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೊಸ ಯೋಜನೆಗಳನ್ನು ಘೋಷಿಸದಿರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಧಿಕೃತ ಪ್ರವಾಸಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸಮಯದಲ್ಲಿ, ಸಚಿವರು ಈಗಾಗಲೇ ಬಜೆಟ್‌ನ ಭಾಗವಾಗಿರುವ ಯೋಜನೆಗಳು ಅಥವಾ ಯಾವುದೇ ಇತರ ಸರ್ಕಾರದ ಘೋಷಣೆಗಳ ಬಗ್ಗೆ ಮಾತ್ರ ಮಾಹಿತಿಯನ್ನು ಒದಗಿಸುತ್ತಾರೆ ಎಂದು ಹಿಮಾಂತ ಬಿಸ್ವಾ ಶರ್ಮ ಅವರು ಟ್ವಿಟರ್ ನ ಮೂಲಕ ತಿಳಿಸಿದ್ದಾರೆ.

"ಆರ್ಥಿಕ ವಿವೇಕದ ಹಿತದೃಷ್ಟಿಯಿಂದ, ಸಿಎಂ ಮತ್ತು ಇತರ ಸಚಿವರು ಸಾಕಷ್ಟು ಹಣಕಾಸಿನ ಸಂಪನ್ಮೂಲಗಳ ಲಭ್ಯತೆಯನ್ನು ಪರಿಗಣಿಸದೆ ಯಾವುದೇ ಹೊಸ ಘೋಷಣೆಗಳನ್ನು ಮಾಡಬಾರದು. ಆದಾಗ್ಯೂ, ಇಲಾಖೆಗಳನ್ನು ಸಮಾಲೋಚಿಸಿದ ನಂತರ, ಸಮಾರಂಭದ ಸಮಯದಲ್ಲಿ ಮಾಡಿದ ವಿನಂತಿಯ ಪ್ರಕಾರ ಯೋಜನೆಗಳನ್ನು ತೆಗೆದುಕೊಳ್ಳಬಹುದು" ಎಂದು ಹೇಳಿದ್ದಾರೆ.
 

To end public inconvenience, we decided at the to reduce CM carcade size and stop halting traffic for long during CM's travel.
We also decided to stop felicitations for CM & Ministers at official meetings, besides deciding on civic polls, etc. pic.twitter.com/euOrBsDbrW

— Himanta Biswa Sarma (@himantabiswa)


ಮುಖ್ಯಮಂತ್ರಿ ಬೆಂಗಾವಲು ಪಡೆಯಲ್ಲಿ ಕೇವಲ 6 ಕಾರುಗಳು: ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೇಶಬ್ ಮಹಾಂತ (Health and Family Welfare Minister Keshab Mahanta), ಮುಖ್ಯಮಂತ್ರಿಗಳ ರಸ್ತೆ ಪ್ರಯಾಣದ ವೇಳೆ ಮುಂಚಿತವಾಗಿ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದರು. "ಅಗತ್ಯವಿದ್ದಲ್ಲಿ, ಎರಡು ನಿಮಿಷಗಳಿಗಿಂತ ಹೆಚ್ಚಿನ ಅವಧಿಯವರೆಗೆ ಸಂಚಾರವನ್ನು ತಡೆಯಬಹುದು. ಅಂತಹ ಸಂದರ್ಭಗಳಲ್ಲಿ, ಆಂಬ್ಯುಲೆನ್ಸ್‌ಗಳ ಚಲನೆಯು ಸಿಎಂ ಅವರ ಬೆಂಗಾವಲು ವಾಹನಗಳಿಂತ ಆದ್ಯತೆಯನ್ನು ಪಡೆಯುತ್ತದೆ ಮತ್ತು ಆಂಬ್ಯುಲೆನ್ಸ್ ಗಳನ್ನು ನಿಲ್ಲಿಸಲಾಗುವುದಿಲ್ಲ" ಎಂದು ಅವರು ಹೇಳಿದರು.

ದೇವಸ್ಥಾನದ 5 ಕಿ.ಮೀ ವ್ಯಾಪ್ತಿಯೊಳಗೆ ಗೋ ಮಾಂಸ ನಿಷೇಧ; ಸಂರಕ್ಷಣಾ ಮಸೂದೆ ಮಂಡನೆ
ಸಾರ್ವಜನಿಕ ಅನಾನುಕೂಲತೆಯನ್ನು ಕಡಿಮೆ ಮಾಡಲು, ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಗುವಾಹಟಿಯಲ್ಲಿ (Guwahati ) ಆರು ಕಾರುಗಳಿಗೆ ಉಳಿದೆಡೆ 12 ಕಾರುಗಳಿಗೆ ಮೀಸಲಾಗಿರುತ್ತದೆ. ಇವುಗಳಲ್ಲಿ ಎಸ್ಕಾರ್ಟ್ ಮತ್ತು ಪೈಲಟ್ ವಾಹನಗಳನ್ನು ಹೊರತುಪಡಿಸಿ ಇಷ್ಟು ಕಾರುಗಳು ಇರಲಿದೆ ಎಂದು ಮಹಾಂತ ತಿಳಿಸಿದ್ದಾರೆ.

ಪಿಎಂ ಮೋದಿ, ಸಿಎಂ ಹಿಮಂತ್‌ಗೆ ಪುಟ್ಟ ಮಕ್ಕಳ ಪತ್ರ: ಅದರಲ್ಲಿತ್ತು 'ಹಲ್ಲಿನ' ಗೋಳು!
ಸರ್ಕಾರಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಸನ್ಮಾನ ಮತ್ತು ಉಡುಗೊರೆಗಳನ್ನು ನೀಡುವ ಪದ್ಧತಿಯನ್ನು ನಿಲ್ಲಿಸಲಾಗುವುದು, ಆದರೆ ಭೇಟಿ ನೀಡುವ ಗಣ್ಯರಿಗೆ ಸರಿಯಾದ ಗೌರವವನ್ನು ಒದಗಿಸಲಾಗುವುದು ಎಂದು ಸಂಪುಟ ನಿರ್ಧರಿಸಿದೆ. ಮಾ.10ರೊಳಗೆ ನಗರಸಭೆ ಚುನಾವಣೆಯನ್ನು ನಿಗದಿಪಡಿಸಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಂಪುಟ ಮನವಿ ಮಾಡಿದೆ ಎಂದು ಮಹಾಂತ ಹೇಳಿದರು. ಅಲ್ಲದೆ, ಜಿಲ್ಲೆಗಳನ್ನು ರಚಿಸಿ ಅಧಿಸೂಚನೆ ಹೊರಡಿಸಿದ ದಿನದಂದು ಎಲ್ಲ ಜಿಲ್ಲೆಗಳು ಜಿಲ್ಲಾ ದಿನಾಚರಣೆಯನ್ನು ಆಚರಿಸಬೇಕು. ಸ್ಥಳೀಯರ ಸಹಭಾಗಿತ್ವದಲ್ಲಿ ಇದನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಹೇಳಿದರು. "ಅಧಿಸೂಚನೆ ಲಭ್ಯವಿಲ್ಲದಿದ್ದರೆ, ಮೊದಲ ಜಿಲ್ಲಾಧಿಕಾರಿಯ ಸೇರ್ಪಡೆ ದಿನಾಂಕವನ್ನು ಜಿಲ್ಲಾ ದಿನವಾಗಿ (District Day )ಆಚರಿಸಲಾಗುತ್ತದೆ" ಎಂದು ಮಹಾಂತ ಹೇಳಿದ್ದಾರೆ.

 

click me!