50 ಸಾವಿರ ಸೋಂಕಿತರಿಂದ ತುಳುಕುತ್ತಿರುವ ಮುಂಬೈನಿಂದ ಬಂತು ಗುಡ್‌ನ್ಯೂಸ್!

By Suvarna NewsFirst Published Jun 5, 2020, 9:24 PM IST
Highlights

ಕೊರೋನಾ ವೈರಸ್‌ ಭೀಕರತೆ ಹಾಗೂ ಗರಿಷ್ಠ ಸೋಂಕಿತರಿರುವ ನಗರ ಮುಂಬೈ. ವಾಣಿಜ್ಯ ನಗರಿಯಲ್ಲೀಗ ಸೋಂಕಿತರ ಸಂಖ್ಯೆ 50 ಸಾವಿರ ಗಡಿ ಸನಿಹದಲ್ಲಿದೆ. ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಬ್ಬರಿಸಿದ ಕೊರೋನಾ ವೈರಸ್ ಜೂನ್ ತಿಂಗಳಲ್ಲಿ ಹೇಗಿದೆ? ಈ ಕುರಿತ ವರದಿ ಇಲ್ಲಿದೆ.

ಮುಂಬೈ(ಜೂ.05):  ಕೊರೋನಾ ಆರ್ಭಟಕ್ಕೆ ಮುಂಬೈ ಮಹಾನಗರಿ ನಲುಗಿದೆ. ಮುಂಬೈನ ಗಲ್ಲಿ ಗಲ್ಲಿಯಲ್ಲೂ ಕೊರೋನಾ ವಕ್ಕರಿಸಿದೆ. ಮುಂಬೈನಿಂದ ಕರ್ನಾಟಕಕ್ಕೆ ಆಗಮಿಸುವ ಶೇಕಡಾ 90 ರಷ್ಟು ಮಂದಿಗೆ ಕೊರೋನಾ ವೈರಸ್ ತಗುಲಿದೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಲು ಮುಂಬೈ ನಂಟು ಕೂಡ ಕಾರಣವಾಗಿದೆ. ಕೊರೋನಾ ಹಾಟ್‌ಸ್ಪಾಟ್ ಆಗಿರುವ ಮುಂಬೈನಲ್ಲಿ ಸೋಂಕಿತರ ಸಂಖ್ಯೆ 44,704

ವಿಮಾನ ಮೂಲಕ 177 ಯುವತಿಯರ ತವರುನಾಡಿಗೆ ಕಳಿಸಿದ ಸೂದ್‌!

ಮುಂಬೈನಲ್ಲಿ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ಕೊರೋನಾ ವೈರಸ್ ಇದೀಗ ಕ್ಷೀಣವಾಗುತ್ತಿದೆ. ಜೂನ್ ತಿಂಗಳಿಂದ ಮುಂಬೈನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಅನ್ನೋದೇ ಸಮಾಧಾನಕರ. ಜೂನ್ ತಿಂಗಳಲ್ಲಿ ಪ್ರತಿ ದಿನ ಕೊರೋನಾ ಸೋಂಕಿತರ ಸಂಖ್ಯೆ ಶೇಕಡಾ 8 ರಿಂದ 3.6ಕ್ಕೆ ಇಳಿದಿದೆ ಎಂದು ಬೃಹತ್ ಮುಂಬೈ ಕಾರ್ಪೋರೇಶನ್ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಮಿಕರಿಗೆ ಆಹಾರ ತಯಾರಿಸಿದ 99 ವರ್ಷದ ಅಜ್ಜಿ; ಹೃದಯಸ್ಪರ್ಶಿ ಘಟನೆ ವೈರಲ್!.

ಮುಂಬೈನಲ್ಲಿ  ಜೂನ್ 2 ರ ವೇಳೆ 2.08 ಲಕ್ಷ ಮಂದಿಗೆ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಇದರಲ್ಲಿ 20.18 ಶೇಕಡಾ ಮಂದಿಗೆ ಕೊರೋನಾ ವೈರಸ್ ತಗುಲಿರುವುದು ಖಚಿತವಾಗಿದೆ. ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು ಇದೀಗ 19 ದಿನ ತೆಗೆದುಕೊಳ್ಳುತ್ತಿದೆ. ಮೇ. 22 ರಂದು ಮುಂಬೈನಲ್ಲಿ ಒಂದೇ ದಿನ  1,739 ಕೇಸ್ ಪತ್ತೆಯಾಗಿತ್ತು. ಇದುವರೆಗೆ ಮುಂಬೈನಲ್ಲಿ  1,465 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.

click me!