ಕೊರೋನಾ ಗೆದ್ದ ಹಿರಿಯ 60 ರ ಜೋಡಿಗೆ ಮದುವೆ ಸಂಭ್ರಮ!

Published : Jun 05, 2020, 06:14 PM ISTUpdated : Jun 05, 2020, 06:58 PM IST
ಕೊರೋನಾ ಗೆದ್ದ ಹಿರಿಯ 60 ರ ಜೋಡಿಗೆ ಮದುವೆ ಸಂಭ್ರಮ!

ಸಾರಾಂಶ

ಕೊರೋನಾ ಪೀಡಿತ ಹಿರಿಯನ ದಂಪತಿಗಳು ಚೇತರಿಕೆ/ ಹೂಗುಚ್ಛ ನೀಡಿ ಬೀಳ್ಕೊಟ್ಟ ಆಸ್ಪತ್ರೆ ಸಿಬ್ಬಂದಿ/ ದಂಪತಿಯ ಮುಖದಲ್ಲಿ ಮದುವೆ ಕಾಲದ ಸಂಭ್ರಮ

ಭೋಪಾಲ್(ಜೂ.05)   ಕೊರೋನಾ ಗೆದ್ದ ಈ ಜೋಡಿ ಮತ್ತೊಮ್ಮೆ ಮದುವೆಯಾಗಿದ್ದಾರೆ!   ಇದು ನಮ್ಮ ಎರಡನೇ ಜೀವನ ಎಂದು 62  ವರ್ಷದ ವಧು ಹೇಳುವಾಗ ಆಕೆಯ ಕಣ್ಣಲ್ಲಿ ಹೊಳಪು.

ಹೌದು ಈ ಹಿರಿಯ ಜೀವಗಳಲ್ಲಿ ಅವರ ಮದುವೆ ಸಂಭ್ರಮದ ದಿನಗಳು ನೆನಪಾಗಿವೆ. ಅವರನ್ನು ಹೂಗಳಿಂದ ಸಿಂಗರಿಸಲಾಗಿದೆ. ಇದಕ್ಕೆ ಕಾರಣವನ್ನು ಹೇಳುತ್ತೇವೆ ಕೇಳಿ .

ದಾಮೋಹ್ ನ ರಾಸ್ಲಿಪುರ್ ಹಳ್ಳಿಗೆ ಗುರುಗ್ರಾಮಕ್ಕೆ ದಂಪತಿ ವಾಪಸ್ ಕಳೆದ ತಿಂಗಳು  ಆಗಿದ್ದಾರೆ.  20 ನರ ತಂಡದೊಂದಿಗೆ ವಾಪಸ್ ಆಗಿದ್ದಾರೆ.  ಮಹಿಳೆಗೆ ಮೇ 19 ರಂದು ಕೊರೋನಾ ಸೋಂಕು ದೃಢವಾಗಿತ್ತು.  ಇದಾದ ಮೇಲೆ ಮಹಿಳೆಯ ಇಡೀ ಕುಟುಂಬವನ್ನು ಸೋಂಕು ಆವರಿಸಿತ್ತು. 

ಇಂಗ್ಲೆಂಡಿನಲ್ಲಿ ಕೊರೋನಾ ಗೆದ್ದ ಬೆಳಗಾವಿ ದಂಪತಿ

ಕುಟುಂಬದ 13 ಜನರಿಗೆ ಕೋವಿಡ್ ತಗುಲಿತ್ತು. ಆಕೆಯ 64 ವರ್ಷದ ಗಂಡ ಕೊರೋನಾ ಪೀಡಿತನಾಗಿದ್ದ.

ಮಹಿಳೆ ಚಿಕಿತ್ಸೆಗೆ ಸ್ಪಂದಿಸಲು ಬಹಳ ಕಾಲ ತೆಗೆದುಕೊಂಡಳು. ಕುಟುಂಬದ ಹತ್ತು ಜನ ಕೆಲವೇ ದಿನಗಳ ಹಿಂದೆ ಡಿಸ್ಟಾರ್ಜ್ ಆದರು. ಅವರ ಬಾಳಿನಲ್ಲಿ ಇದೊಂದು ದೊಡ್ಡ ತಿರುವು ಎಂದು  ದಾಮೋಹ್ ಆಸ್ಪತ್ರೆಯ ವೈದ್ಯ ದಿವಾಕರ್ ಪಾಟೀಲ್ ಹೇಳುತ್ತಾರೆ. ಚೇತರಿಸಿಕೊಂಡ ದಂಪತಿಯನ್ನು ಆಸ್ಪತ್ರೆ ಸಿಬ್ಬಂದಿ ಹೂಗುಚ್ಛ ನೀಡಿ ಬೀಳ್ಕೊಟ್ಟರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಆರೋಪ ಸಾಬೀತು : ಪಾಕ್‌ ಐಎಸ್‌ಐ ಮಾಜಿ ಮುಖ್ಯಸ್ಥ ಹಮೀದ್‌ಗೆ 14 ವರ್ಷ ಜೈಲು