ದೇಶದಲ್ಲಿ ಇಳಿಕೆಯತ್ತ ಕೊರೋನಾ ಸೋಂಕು: ಮಿಶ್ರಾ ಕೊಟ್ಟ ಸಿಹಿಸುದ್ದಿ!

By Suvarna NewsFirst Published Apr 25, 2020, 12:29 PM IST
Highlights

ದೇಶದಲ್ಲಿ ಇಳಿಕೆಯತ್ತ ಕೊರೋನಾ ಸೋಂಕು| 5 ಲಕ್ಷ ಟೆಸ್ಟ್‌ ನಡೆಸಿದಾಗ 20000 ಮಂದಿಗೆ ವೈರಸ್‌| ಇಟಲಿಯಲ್ಲಿ 1 ಲಕ್ಷ, ಅಮೆರಿಕದಲ್ಲಿ 80000 ಪತ್ತೆ

ನವದೆಹಲಿ(ಏ.25): ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಹೆಚ್ಚಳ ಆಗುತ್ತಿದ್ದರೂ, ಸೋಂಕಿತರ ಸಂಖ್ಯೆ ದಿಢೀರನೆ ಏರಿಕೆ ಆಗುತ್ತಿಲ್ಲ. ಇದು ಸೋಂಕಿನ ಪ್ರಮಾಣ ಇಳಿಕೆಯತ್ತ ಸಾಗುತ್ತಿರುವುದರ ಸೂಚನೆ ಆಗಿದೆ. ಮಾ.23ರಿಂದ ಏ.22ರ ಅವಧಿಯಲ್ಲಿ 5 ಲಕ್ಷ ಜನರನ್ನು ಕೊರೋನಾ ಪರೀಕ್ಷೆಗೆ ಗುರಿಪಡಿಸಲಾಗಿದೆ.

ಕಳೆದ 30 ದಿನಗಳಲ್ಲಿ ಪರೀಕ್ಷೆಯನ್ನು 33 ಪಟ್ಟು ಹೆಚ್ಚಿಸಲಾಗಿದೆ. ಆದಾಗ್ಯೂ ಸೊಂಕು ದೃಢಪಟ್ಟಪ್ರಕರಣಗಳ ಏರಿಕೆ ಪ್ರಮಾಣ ಶೇ.4.5ರಲ್ಲೇ ಮುಂದುವರಿದಿದೆ ಎಂದು ಕೊರೋನಾ ಪರೀಕ್ಷೆ ಮತ್ತು ಆರೋಗ್ಯ ಮೂಲ ಸೌಕರ್ಯ ಸಮಿತಿಯ ಮುಖ್ಯಸ್ಥ ಸಿ.ಕೆ. ಮಿಶ್ರಾ ಮಾಹಿತಿ ನೀಡಿದ್ದಾರೆ.

ದೇಶದ ಜನಕ್ಕೆ ತುಸು ನೆಮ್ಮದಿ: ಲಾಕ್‌ಡೌನ್‌ನಿಂದ ತಪ್ಪಿದ ಭಾರೀ ಅಪಾಯ!

ಇದೇ ವೇಳೆ ಲಾಕ್‌ಡೌನ್‌ನ ಕೊನೆಯ ದಿನವಾದ ಮೇ 3ರಂದು ಕೊರೋನಾ ವೈರಸ್‌ ಹರಡುವಿಕೆ ಪ್ರಮಾಣ ತುತ್ತ ತುದಿಯನ್ನು ತಲುಪಲಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ, ಭಾರತದಲ್ಲಿ ಕೊರೋನಾ ಎಂದು ತುತ್ತತುದಿಯನ್ನು ಮುಟ್ಟಲಿದೆ ಎಂದು ಹೇಳುವುದು ಕಷ್ಟ. ಆದರೆ, ಭಾರತದಲ್ಲಿ ಸೋಂಕು ಏರಿಕೆ ಪ್ರಮಾಣ ಸ್ಥಿರವಾಗಿದೆ. ಅಮೆರಿಕದಲ್ಲಿ ಮಾ.26ರಂದು 5 ಲಕ್ಷ ಜನರನ್ನು ಪರೀಕ್ಷೆ ಮಾಡಿದ ವೇಳೆ 80 ಸಾವಿರ ಪ್ರಕರಣಗಳು ದಾಖಲಾಗಿದ್ದವು. ಇಟಲಿಯಲ್ಲಿ 5 ಲಕ್ಷಕ್ಕೆ 1 ಲಕ್ಷ ಪ್ರಕರಣಗಳು ದಾಖಲಾಗಿವೆ. ಆದರೆ, ಭಾರತದಲ್ಲಿ 5 ಲಕ್ಷಕ್ಕೆ 20 ಸಾವಿರ ಪ್ರಕರಣಗಳಷ್ಟೇ ದಾಖಲಾಗಿವೆ ಎಂದು ಹೇಳಿದ್ದಾರೆ.

ಮಳೆಗಾಲದಲ್ಲಿ ಮತ್ತೆ ವೈರಸ್‌ ಹೆಚ್ಚಬಹುದು: ವಿಜ್ಞಾನಿಗಳು

ದೇಶದಲ್ಲಿ ಕೊರೋನಾ ವೈರಸ್‌ ಹರಡುವ ವೇಗ ಕಡಿಮೆಯಾಗಿದ್ದು, ಲಾಕ್‌ಡೌನ್‌ ಮುಗಿದ ನಂತರ ಇನ್ನಷ್ಟುಕಡಿಮೆಯಾಗಬಹುದು. ಆದರೆ, ಮಳೆಗಾಲ ಆರಂಭವಾದ ನಂತರ ಮತ್ತೆ ವೈರಸ್ಸಿನ ಎರಡನೇ ಅಲೆ ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Fact Check: ತಳ್ಳುಗಾಡಿಯ ಮೇಲೆ ಹಣ್ಣು ಮಾರುವವ ಮೂತ್ರ ಸುರಿದಿದ್ದು ನಿಜಾನಾ?

ಲಾಕ್‌ಡೌನ್‌ ತೆರವುಗೊಳಿಸಿದ ನಂತರ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಆಗ ವೈರಸ್‌ ಎಷ್ಟು ವೇಗವಾಗಿ ಹರಡುತ್ತದೆ ಎಂಬುದರ ಮೇಲೆ ಕೊರೋನಾ ಎರಡನೇ ಹಂತದಲ್ಲಿ ದೇಶಕ್ಕೆ ಅಪ್ಪಳಿಸುವುದು ಯಾವಾಗ ಎಂಬುದು ನಿಂತಿದೆ. ಅಂದಾಜಿನ ಪ್ರಕಾರ ಜುಲೈ ಕೊನೆ ಅಥವಾ ಆಗಸ್ಟ್‌ನಲ್ಲಿ ಕೊರೋನಾ ವೈರಸ್‌ ಮರುಕಳಿಸಬಹುದು ಎಂದು ಶಿವ ನಾಡಾರ್‌ ವಿವಿ ಗಣಿತ ವಿಭಾಗದ ಪ್ರೊಫೆಸರ್‌ ಸಮಿತ್‌ ಭಟ್ಟಾಚಾರ್ಯ ಹೇಳಿದ್ದಾರೆ. ಬೆಂಗಳೂರಿನ ಐಐಎಸ್‌ಸಿ ವಿಜ್ಞಾನಿ ರಾಜೇಶ್‌ ಸುಂದರೇಶನ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!