ದೇಶದಲ್ಲಿ 70000 ಗಡಿ ದಾಟಿದ ಸೋಂಕು, ಒಂದೇ ದಿನ ದಾಖಲೆಯ 174 ಸಾವು!

By Kannadaprabha NewsFirst Published May 12, 2020, 9:02 AM IST
Highlights

70000 ಗಡಿ ದಾಟಿದ ಸೋಂಕು| 2500 ಮಂದಿಗೆ ನಿನ್ನೆ ಕೊರೋನಾ ದೃಢ| ಒಂದೇ ದಿನ ದಾಖಲೆಯ 174 ಸಾವು

ನವದೆಹಲಿ(ಮೇ.12): ಲಾಕ್‌ಡೌನ್‌ ಸಡಿಲಗೊಂಡ ಬಳಿಕ ಕೊರೋನಾ ವೈರಸ್‌ ಹಾವಳಿ ಅಧಿಕವಾಗಿದ್ದು, ಸೋಮವಾರ ಮತ್ತೆ ಹೊಸದಾಗಿ 2541 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 70 ಸಾವಿರದ ಗಡಿ ದಾಟಿ 70480ಕ್ಕೆ ಹೆಚ್ಚಳಗೊಂಡಿದೆ. ಭಾನುವಾರ 5426 ಮಂದಿಯಲ್ಲಿ ಕೊರೋನಾ ಕಂಡುಬಂದಿತ್ತು. ಅದಕ್ಕೆ ಹೋಲಿಸಿದರೆ ಸೋಮವಾರ ಹೊಸ ಸೋಂಕಿತರ ಸಂಖ್ಯೆ ಅರ್ಧಕ್ಕಿಂತ ಕಡಿಮೆಯಾಗಿದೆ ಎಂಬುದು ಸಮಾಧಾನಕರ ಸುದ್ದಿ.

ದೇವಸ್ಥಾನಗಳೇ ಮುಚ್ಚಿರುವಾಗ ಮದ್ಯ ಬೇಕಾ?

ಈ ನಡುವೆ, ಸೋಮವಾರ ಒಂದೇ ದಿನ ಕೊರೋನಾಗೆ ಬರೋಬ್ಬರಿ 174 ಮಂದಿ ಬಲಿಯಾಗಿದ್ದಾರೆ. ಇದು ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಸಾವಿನ ಪ್ರಮಾಣವಾಗಿದೆ. ಇದರೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 2217ಕ್ಕೇರಿಕೆಯಾಗಿದೆ. ಕೊರೋನಾದಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 22 ಸಾವಿರಕ್ಕೆ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಕೊರೋನಾ ತೀವ್ರತೆ ಕೊಂಚ ಕಡಿಮೆ!

ಸೋಮವಾರ ಪತ್ತೆಯಾಗಿರುವ ಪ್ರಕರಣಗಳ ಪೈಕಿ ಮಹಾರಾಷ್ಟ್ರದ ಕೊಡುಗೆಯೇ ಅರ್ಧದಷ್ಟಿದೆ. ಅಲ್ಲಿ ಒಂದೇ ದಿನ 1230 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 23401ಕ್ಕೆ ಹೆಚ್ಚಳವಾಗಿದೆ. 36 ಸಾವುಗಳು ಸಂಭವಿಸಿದ್ದು, ಮೃತರ ಸಂಖ್ಯೆ 868ಕ್ಕೆ ಹೆಚ್ಚಳವಾಗಿದೆ. ಈ ನಡುವೆ, ಅಹಮದಾಬಾದ್‌ನಲ್ಲಿ 268 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಸೋಂಕಿತರ ಸಂಖ್ಯೆ 6086ಕ್ಕೆ ಏರಿಕೆಯಾಗಿದೆ. 19 ಸಾವುಗಳು ಸಂಭವಿಸಿದ್ದು, ಕೊರೋನಾಗೆ ಬಲಿಯಾದವರ ಸಂಖ್ಯೆ 400ಕ್ಕೆ ತಲುಪಿದೆ.

click me!