ದೇವಸ್ಥಾನಗಳೇ ಮುಚ್ಚಿರುವಾಗ ಮದ್ಯ ಬೇಕಾ?
ದೇವಸ್ಥಾನಗಳೇ ಮುಚ್ಚಿರುವಾಗ ಮದ್ಯ ಬೇಕಾ?| ಲಾಕ್‌ಡೌನ್ ನಡುವೆಯೂ ಮದ್ಯದಂಗಡಿ ತೆರೆದಿರುವುದಕ್ಕೆ ಸರ್ಕಾರದ ಅಂಗ ಸಂಸ್ಥೆಯಿಂದಲೇ ಆಕ್ಷೇಪ| ಮದ್ಯ ಮಾರಾಟ ಆರಂಭದಿಂದ ಕೌಟುಂಬಿಕ ಸಮಸ್ಯೆ ಹೆಚ್ಚಾಗಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಇನ್ನಷ್ಟು ಸಮಸ್ಯೆ
ಬೆಂಗಳೂರು(ಮೇ.12): ಲಾಕ್‌ಡೌನ್ ನಡುವೆಯೂ ಮದ್ಯದಂಗಡಿ ತೆರೆದಿರುವುದಕ್ಕೆ ಸರ್ಕಾರದ ಅಂಗ ಸಂಸ್ಥೆಯಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಮದ್ಯ ಮಾರಾಟ ಆರಂಭದಿಂದ ಕೌಟುಂಬಿಕ ಸಮಸ್ಯೆ ಹೆಚ್ಚಾಗಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ಮಹಿಳೆಯರು ಇನ್ನಷ್ಟುಸಮಸ್ಯೆ ಎದುರಿಸುವಂತಾಗಿದೆ. ದೇವಸ್ಥಾನಗಳೇ ಬಾಗಿಲು ಮುಚ್ಚಿರುವಾಗ ಮದ್ಯದಂಗಡಿ ಬೇಕಾ ಎಂದು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಟಿ.ವೆಂಕಟಲಕ್ಷ್ಮೇ ಬಸವಲಿಂಗರಾಜು ಪ್ರಶ್ನಿಸಿದ್ದಾರೆ.
ಗೋಳು ಕೇಳುವವರಿಲ್ಲ, ಕರ್ನಾಟಕದಲ್ಲಿ ಮದ್ಯ ಮಾರಾಟ ಬಂದ್!?
ರಾಜ್ಯದಲ್ಲಿ ಈಗಾಗಲೇ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯ ಮಾರಾಟದಿಂದ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕೌಟುಂಬಿಕ ಸಲಹಾ ಕೇಂದ್ರಗಳಿಗೆ ಬರುತ್ತಿರುವ ಕರೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಸಮಾಜ ಕಲ್ಯಾಣ ಮಂಡಳಿಗೆ ಬರುವ ದೂರುಗಳನ್ನು ಗಮನಿಸಿದಾಗ ಆತಂಕವಾಗುತ್ತಿದೆ. ಈವರೆಗೆ ಸಾವಿರಾರು ಕರೆಗಳು ಬಂದಿವೆ. ಸಮಸ್ಯೆಯಲ್ಲಿರುವವರಿಗೆ ದೂರವಾಣಿ ಮೂಲಕ ಆಪ್ತಸಮಾಲೋಚನೆ ನೀಡಲಾಗಿದೆ. ಪರಿಸ್ಥಿತಿ ಕೈಮೀರುತ್ತಿರುವಾಗ ಮದ್ಯ ಮಾರಾಟ ಸರಿಯಲ್ಲ. ಹೀಗಾಗಿ ಕೂಡಲೇ ಸರ್ಕಾರ ಮದ್ಯದಂಗಡಿ ಮುಚ್ಚಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಗೋಳು ಕೇಳುವವರಿಲ್ಲ, ಕರ್ನಾಟಕದಲ್ಲಿ ಮದ್ಯ ಮಾರಾಟ ಬಂದ್!?
ಕೋರೊನಾ ನಿಯಂತ್ರಣಕ್ಕೆ ಕೋರೊನಾ ವಾರಿಯರ್ಸ್ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ, ಸರ್ಕಾರದ ಬೊಕ್ಕಸ ಹೆಚ್ಚಿಸುವುದಕ್ಕಾಗಿ ಕುಟುಂಬಗಳನ್ನು ಬೀದಿಗೆ ತಳ್ಳಲು ಮುಂದಾಗಿರುವುದು ಯಾವ ನ್ಯಾಯ? ಮದ್ಯ ಮಾರಾಟದಿಂದ ಈಗಾಗಲೇ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಇನ್ನಷ್ಟುತೊಂದರೆಯಾಗಿದೆ. ದೇವಸ್ಥಾನಗಳೇ ಮುಚ್ಚಿರುವ ಈ ಕಾಲದಲ್ಲಿ ಮದ್ಯದಂಗಡಿ ಬೇಕಾ ಎಂದು ಪ್ರಶ್ನಿಸಿದ್ದಾರೆ.