ನವದೆಹಲಿ(ಜೂ.01): ಕೊರೋನಾ ಚೀನಾ ಸೃಷ್ಟಿಸಿದ ವೈರಸ್ ಅನ್ನೋದಕ್ಕೆ ಹಲವು ದಾಖಲೆಗಳಿವೆ. ಆದರೆ ವುಹಾನ್ ಲ್ಯಾಬ್‌ನಿಂದ ವೈರಸ್ ವಿಶ್ವಕ್ಕೆ ಹರಡಿದೆ ಎಂದು ಖಚಿತವಾಗಿ ಹೇಳಲು ತನಿಖೆಗಳು ಪ್ರಗತಿಯಲ್ಲಿದೆ. ಇದು ಚೀನಾ ಕುತಂತ್ರ ಎಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಈಗಾಗಲೇ ಆರೋಪಿಸಿದೆ. ಇದೀಗ ಮತ್ತೆ ವೈರಸ್ ಹಿಂದೆ ಚೀನಾ ಕೈವಾಡ ಮತ್ತೆ ಚರ್ಚೆಯಾಗುತ್ತಿದೆ. ಈ ಚರ್ಚೆ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರ ಹೇಳಿಕೆ ವಿಶ್ವವನ್ನೇ ಹೊಸದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿದೆ.
ಭಾರತ ಬೆಂಬಲಿಸಿ ಆಸೀಸ್ ಕ್ರಿಕೆಟಿಗನ ಭಾವನಾತ್ಮಕ ಪತ್ರಕ್ಕೆ ಆನಂದ್ ಮಹೀಂದ್ರ ಧನ್ಯವಾದ
ಕೊರೋನಾ ವೈರಸ್ ಹುಟ್ಟಿನ ಹಿಂದಿನ ಸತ್ಯ ನಾವು ಎಂದಿಗೂ ತಿಳಿದುಕೊಳ್ಳದೇ ಇರಬಹುದು. ಆದರೆ ಜೈವಿಕ ಶಸ್ತ್ರಾಸ್ತ್ರ ಬಳಸಿ ನ್ಯೂಕ್ಲೀಯರ್ ದಾಳಿಗಿಂತ ಬಹುದೊಡ್ಡ ಅನಾಹುತವನ್ನು ಕೊರೋನಾ ಸೃಷ್ಟಿಸಿದೆ. ಹೀಗಾಗಿ ಪರಮಾಣು ಬಳಕೆಗೆ ಹಲವು ನಿರ್ಬಂಧ ಹಾಗೂ ಒಪ್ಪಂದ ಇರುವಂತೆ ಜಗತ್ತಿಗೆ ಈಗ ಜೈವಿಕ ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿ ಸಂಶೋಧನಾ ಪ್ರಸರಣ ನಿರ್ಬಂಧ ಒಪ್ಪಂದದ ಅಗತ್ಯವಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
We may never get to know the truth. But the reality is that just like the Nuclear Non-Proliferation Treaty, the world now probably needs a Biological Weapons & Hazardous Research Non-Proliferation Treaty. This virus has already caused more global damage than a nuclear weapon. https://t.co/Uid1U2ffwf
— anand mahindra (@anandmahindra)Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ
ವೈರಸ್ ಜೈವಿಕ ಅಸ್ತ್ರವನ್ನು ಹಿಡಿದು ವೇವಗವಾಗಿ ಓಡುತ್ತಿದ್ದ ವಿಶ್ವವನ್ನೇ ಕಣ್ಮುಚ್ಚಿ ತೆರೆಯೋದ್ರೊಳಗೆ ನಿಲ್ಲಿಸಿದ ಅಸ್ತ್ರ ಕೊರೋನಾ. ಇದು ವುಹಾನ್ ಲ್ಯಾಬ್‌ನಲ್ಲಿನ ಸಂಶೋಧನೆಯಲ್ಲಿ ಸೃಷ್ಟಿಸಿದ ವೈರಸ್, ಇದನ್ನು ಬೇಕಂತಲೇ ಅಥವಾ ನಿರ್ಲಕ್ಷ್ಯದಿಂದ ಹೊರಬಿಡಲಾಗಿದೆ. ಈ ಮೂಲಕ ವಿಶ್ವಕ್ಕೆ ಅಪಾಯವನ್ನು ಚೀನಾ ತಂದೊಡ್ಡಿದೆ ಎಂಬ ವಾದಗಳು ಬಲವಾಗುತ್ತಿದೆ. ಇದರ ಬೆನ್ನಲ್ಲೇ ಆನಂದ್ ಮಹೀಂದ್ರ ಹೇಳಿರುವ ಜೈವಿಕ ಅಸ್ತ್ರ ಆಲೋಚನೆ ಇದೀಗ ವಿಶ್ವದ ಚಿಂತನೆಯನ್ನೇ ಬದಲಿಸಿದೆ.
ಜೀನಾ ಜೈವಿಕ ಅಸ್ತ್ರ ಬಳಸಿ ತನ್ನ ಎದುರಾಳಿ ಸೇರಿದಂತೆ ಎಲ್ಲಾ ರಾಷ್ಟ್ರಗಳನ್ನು ಇಕ್ಕಟಿಗೆ ಸಿಲುಕಿಸಿದೆಯಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಈಗಾಗಲೇ ಈ ವೈರಸ್‌ನಿಂದ ಅಧೀಕೃತ 35.65 ಲಕ್ಷ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಭಾರತ, ಅಮೆರಿಕ ಸೇರಿದಂತೆ ಪ್ರಮುಖ ದೇಶಗಳ ಆರ್ಥಿಕತೆ ನೆಲಕಚ್ಚಿದೆ. ಜನರು ಈಗಲೂ ಪರದಾಡುತ್ತಿದ್ದಾರೆ.