3ನೇ ಅಲೆ ಘನಘೋರ, ಸಂಪೂರ್ಣ ಲಾಕ್‌ಡೌನ್ ಕುರಿತು ಗಂಭೀರ ಚರ್ಚೆ!

Published : May 05, 2021, 06:13 PM IST
3ನೇ ಅಲೆ ಘನಘೋರ, ಸಂಪೂರ್ಣ ಲಾಕ್‌ಡೌನ್ ಕುರಿತು ಗಂಭೀರ ಚರ್ಚೆ!

ಸಾರಾಂಶ

3ನೇ ಅಲೆ ಕೊರೋನಾ ವೈರಸ್ ಎದುರಿಸುವುದು ಭಾರತಕ್ಕೆ ಅತ್ಯಂತ ಕಠಿಣ ಸವಾಲಾಗಿದೆ. ಕಾರಣ 2ನೇ ಅಲೆಗೆ ತತ್ತರಿಸುವ ದೇಶಕ್ಕೆ ಮತ್ತೊಂದು ವೈರಸ್ ದಾಳಿ ಸಂಪೂರ್ಣ ವ್ಯವಸ್ಥೆಯನ್ನೇ ಅಲ್ಲೋಲ ಕಲ್ಲೋಲ ಮಾಡಲಿದೆ. ಹೀಗಾಗಿ ತಜ್ಞರ ಸಲಹೆಯಂತೆ ಸಂಪೂರ್ಣ ಲಾಕ್‌ಡೌನ್ ಕುರಿತು ಕೇಂದ್ರ ಸರ್ಕಾರ ಚರ್ಚೆಗೆ ಮುಂದಾಗಿದೆ.

ನವದೆಹಲಿ(ಮೇ.05): ದೇಶಕ್ಕೆ ಎದುರಾಗಿರುವ ಕೊರೋನಾ ವೈರಸ್ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಇದರ ಬೆನ್ನಲ್ಲೇ 3ನೇ ಅಲೆ ಮತ್ತಷ್ಟು ಘನಘೋರ ಅನ್ನೋ ತಜ್ಞರ ವರದಿ ಮತ್ತಷ್ಟು ಆತಂಕ ತರುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ತಜ್ಞರ ಸಲಹೆಯಂತೆ ಸಂಪೂರ್ಣ ಲಾಕ್‌ಡೌನ್ ಕುರಿತು ಗಂಭೀರ ಚರ್ಚೆಗೆ ಮುಂದಾಗಿದೆ

ಸಮಯ ಪ್ರಜ್ಞೆ: 21 ಸೋಂಕಿತರ ಜೀವ ಉಳಿಸಿದ ವೈದ್ಯರು

ಕೊರೋನಾ 2ನೇ ಅಲೆಯಿಂದ ದೇಶ ತತ್ತರಿಸಿದೆ. ಇನ್ನೂ 3ನೇ ಅಲೆ ಯಾವಾಗ ಅಪ್ಪಳಿಸುತ್ತದೆ? ಅನ್ನೋದನ್ನು ಮೊದಲೇ  ಊಹಿಸಲು ಸಾಧ್ಯವಿಲ್ಲ. ಆದರೆ ದೇಶದ ಮುಂಬರುವ ಕೊರೋನಾ ಎಲ್ಲಾ ಅಲೆಗೆ ತಯಾರಾಗಿರಬೇಕು ಅನ್ನೋ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ದೇಶದಲ್ಲಿನ ಆರೋಗ್ಯ ವ್ಯವಸ್ಥೆ ಅಸಮತೋಲ, ಕೊರೋನಾ ಚೈನ್ ಬ್ರೇಕ್ ಮಾಡಲು ಸಂಪೂರ್ಣ ಲಾಕ್‌ಡೌನ್ ಅಗತ್ಯ ಎಂದು ಕೇಂದ್ರ ಸರ್ಕಾರದ ಉನ್ನತ ಸಲಹೆಗಾರ,  ವೈದ್ಯ ಕೆ ವಿಜಯರಾಘವನ್ ಸಲಹೆ ನೀಡಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ದೆಹಲಿಗೆ ಕೊರೋನಾ ವಾರಿಯರ್ಸ್

ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಮಾರ್ಗ ಕೇಂದ್ರದ ಅಂತಿಮ ಆಯ್ಕೆಯಾಗಿದೆ. ಇದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಹೊರತು ಪಡಿಸಿ ಉಳಿದೆಲ್ಲಾ ಮಾರ್ಗಗಳ ಮೂಲಕ ನಿಯಂತ್ರಣಕ್ಕೆ ಪ್ರಯತ್ನ ಮಾಡಲಿದೆ.

ಕಳೆದೆರಡು ವಾರದಿಂದ ದೇಶದಲ್ಲಿ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಬುಧವಾರ ಒಂದೇ ದಿನ 3.82 ಲಕ್ಷ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
India Latest News Live: ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20 - ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!