ಅತ್ಯಂತ ಕಡಿಮೆ ವ್ಯಾಕ್ಸೀನ್ ವೇಸ್ಟೇಜ್ | ಕೇರಳ ಸಿಎಂ ಪಿಣರಾಯ್ ವಿಜಯನ್‌ಗೆ ಮೋದಿ ಮೆಚ್ಚುಗೆ
ನವದೆಹಲಿ(ಮೇ.05): ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ಕೇರಳ ಸರ್ಕಾರ ಮಾಡುತ್ತಿರುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಕೋವಿಡ್ -19 ವಿರುದ್ಧದ ಹೋರಾಟವನ್ನು ಬಲಪಡಿಸುವಾಗ ಇದು ಬಹಳ ಮುಖ್ಯ ವಿಚಾರ ಎಂದು ಹೇಳಿದ್ದಾರೆ.
ನಮ್ಮ ಆರೋಗ್ಯ ಕಾರ್ಯಕರ್ತರು ಮತ್ತು ದಾದಿಯರು ಲಸಿಕೆ ವ್ಯರ್ಥವನ್ನು ಕಡಿಮೆ ಮಾಡುವಲ್ಲಿ ಒಂದು ಉದಾಹರಣೆಯನ್ನು ನೀಡುತ್ತಿರುವುದು ಖುಷಿಯ ವಿಚಾರ. COVID-19 ವಿರುದ್ಧದ ಹೋರಾಟವನ್ನು ಬಲಪಡಿಸುವಲ್ಲಿ ಲಸಿಕೆ ವ್ಯರ್ಥವನ್ನು ಕಡಿಮೆ ಮಾಡುವುದು ಮುಖ್ಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
undefined
ಕೊರೋನಾ ರೂಲ್ಸ್ ಫಾಲೋ ಮಾಡಿದ ನವಜೋಡಿಗಾಗಿ ಪೊಲೀಸರ ಹುಡುಕಾಟ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದಲ್ಲಿ ಕೊರೋನವೈರಸ್ ಲಸಿಕೆ ವ್ಯರ್ಥವಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. "ಕೇರಳವು ಕೇಂದ್ರ ಸರ್ಕಾರದಿಂದ 73,38,806 ಡೋಸ್ ಲಸಿಕೆಗಳನ್ನು ಪಡೆದಿದೆ. ನಾವು 74,26,164 ಡೋಸ್‌ಗಳನ್ನು ಒದಗಿಸಿದ್ದೇವೆ. ಪ್ರತಿ ಬಾಟಲಿಯಲ್ಲಿ ವ್ಯರ್ಥವಾಗುವ ಅಂಶವಾಗಿ ಲಭ್ಯವಿರುವ ಹೆಚ್ಚುವರಿ ಪ್ರಮಾಣವನ್ನು ಸಹ ಬಳಸುತ್ತಿದ್ದೇವೆ. ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ದಾದಿಯರು ಹೆಚ್ಚು ದಕ್ಷರಾಗಿದ್ದಾರೆ. ಅವರು ನಮ್ಮ ಮೆಚ್ಚುಗೆಗೆ ಸಂಪೂರ್ಣ ಅರ್ಹರು ಎಂದು ವಿಜಯನ್ ಟ್ವೀಟ್ ಮಾಡಿದ್ದಾರೆ.
Good to see our healthcare workers and nurses set an example in reducing vaccine wastage.
Reducing vaccine wastage is important in strengthening the fight against COVID-19. https://t.co/xod0lomGDb
ಕೇಂದ್ರವು ಈವರೆಗೆ 17.02 ಕೋಟಿ COVID-19 ಲಸಿಕೆ ಪ್ರಮಾಣವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಮುಂದಿನ ಮೂರು ದಿನಗಳಲ್ಲಿ 36 ಲಕ್ಷಕ್ಕೂ ಹೆಚ್ಚು ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.