
ನವದೆಹಲಿ(ಮೇ.05): ಒಪ್ಪಂದ ಪ್ರಕಾರ ಫ್ರಾನ್ಸ್‌ನಿಂದ ಭಾರತ ಅತ್ಯಾಧುನಿಕ ರಾಫೆಲ್ ಯುದ್ಧವಿಮಾನ ಖರೀದಿಸಿದೆ. ಬರೋಬ್ಬರಿ 59,000 ಕೋಟಿ ರೂಪಾಯಿ ಒಪ್ಪಂದ ಇದಾಗಿದೆ. ಫ್ರಾನ್ಸ್ ಹಂತ ಹಂತವಾಗಿ ಭಾರತಕ್ಕೆ ರಾಫೆಲ್ ಯುದ್ಧವಿಮಾನ ಒದಗಿಸುತ್ತಿದೆ. ಎಪ್ರಿಲ್ ತಿಂಗಳ ಆರಂಭದಲ್ಲಿ 3 ರಾಫೆಲ್ ಯುದ್ಧವಿಮಾನ ಪೂರೈಕೆ ಮಾಡಿದ್ದ ಫ್ರಾನ್ಸ್ ಇದೀಗ ಮತ್ತೆ 3 ಯುದ್ದವಿಮಾನವನ್ನು ಭಾರತಕ್ಕೆ ನೀಡಿದೆ.
ರಾಫೆಲ್ ಯುದ್ಧ ವಿಮಾನ ಒಪ್ಪಂದ: ಭ್ರಷ್ಟಾಚಾರ ಆರೋಪ ತಿರಸ್ಕರಿಸಿದ ದಸಾಲ್ಟ್ ಏವಿಯೇಶನ್!.
ಫ್ರಾನ್ಸ್‌ನ ಮೆರಿಗ್ನಾಕ್ ವಾಯುನೆಲೆಯಿಂದ ಭಾರತದ ಅಂಬಾಲಾ ವಾಯುನೆಲೆಗೆ ರಾಫೆಲ್ ಯುದ್ದವಿಮಾನ ಆಗಮಿಸಲಿದೆ. ಭಾರತದ ಪೈಲೈಟ್ ರಾಫೆಲ್ ಯುದ್ಧವಿಮಾನ ಜೊತೆ ಹಾರಾಟಾ ಆರಂಭಿಸಿದ್ದಾರೆ. ನಾನ್ ಸ್ಟಾಪ್ ಹಾರಾಟ ಇದಾಗಿದ್ದು ನೇರವಾಗಿ ಭಾರತದ ವಾಯುನೆಲೆಗೆ ರಾಫೆಲ್ ಯುದ್ಧವಿಮಾನ ಆಗಮಿಸಲಿದೆ.
ಯುನೈಟೆಡ್ ಅರಬ್ ಎಮಿರೈಟ್ಸ್ ಹಾರಾಟದ ವೇಳೆ ಇಂಧನ ತುಂಬಲಿದೆ. ಈ ಮೂಲಕ ಇಂಧನಕ್ಕಾಗಿ ರಾಫೆಲ್ ಯಾವುದೇ ವಾಯು ನೆಲೆಯಲ್ಲಿ ನಿಲ್ಲಿಸದೆ ನಾನ್ ಸ್ಟಾಪ್ ಹಾರಾಟ ನಡೆಸಲಿದೆ. ಈ ಮೂರು ಯುದ್ಧವಿಮಾನಗಳಿಂದ ಭಾರತದ ರಾಫೆಲ್ ಸಂಖ್ಯೆ 20 ಕ್ಕೇರಿದೆ.
ಕೊರೋನಾ ವೈರಸ್ ಕಾರಣ ಕ್ವಾರಂಟೈನ್ ಸೇರಿದಂತೆ ಹಲವು ಸುರಕ್ಷತಾ ನಿಯಮಗಳನ್ನು ಭಾರತೀಯ ಪೈಲೆಟ್‌ಗಳು ಪಾಲಿಸಬೇಕಿದೆ. ಹೀಗಾಗಿ ಇನ್ನು 15 ದಿನದಲ್ಲಿ ಭಾರತದ ವಾಯುನೆಲೆಗೆ ರಾಫೆಲ್ ಯುದ್ಧವಿಮಾನ ತಲುಪಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ