ಕೊರೋನಾ ಲಸಿಕೆ ಹೆಸರಲ್ಲಿ ಹೊಸ ದಂಧೆ ಶುರು!

By Kannadaprabha NewsFirst Published Dec 26, 2020, 10:11 AM IST
Highlights

500 ರೂ. ಕೊಟ್ಟು ನೋಂದಣಿ ಮಾಡಿಸಿಕೊಲ್ಳಬೇಕಂತೆ, ಫೋನ್ ಮಾಡಿ ಸುಲಿಗೆ, ಮಧ್ಯ ಪ್ರದೇಶದಲ್ಲಿ ಮೊದಲ ಪ್ರಕರಣ ದಾಖಲು.

ಭೋಪಾಲ್‌(ಡಿ.26): ದೇಶದಲ್ಲಿ ಕೊರೋನಾ ವೈರಸ್‌ ಲಸಿಕೆ ಅಭಿಯಾನಕ್ಕೆ ಕ್ಷಣಗಣನೆ ಆರಂಭವಾಗಿರುವಾಗಿರುವಾಗಲೇ, ಮಧ್ಯಪ್ರದೇಶದಲ್ಲಿ ಕೊರೋನಾ ಲಸಿಕೆಗೆ ಸಂಬಂಧಿಸಿದ ದಂಧೆಯೊಂದು ಸದ್ದಿಲ್ಲದೆ ಹಬ್ಬುತ್ತಿದೆ.

ಮೊದಲ ಹಂತದಲ್ಲೇ ಕೊರೋನಾ ಲಸಿಕೆ ಪಡೆಯಲು 500 ರು. ಪಾವತಿಸಿ ನೋಂದಣಿ ಮಾಡಿಕೊಳ್ಳಿ ಎಂಬ ಕರೆಗಳು ಬರುತ್ತಿವೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಮಧ್ಯಪ್ರದೇಶದ ಪೊಲೀಸ್‌ ಇಲಾಖೆಯ ಸೈಬರ್‌ ಘಟಕ ಸಲಹೆ ನೀಡಿದೆ. ಇಂಥ ವಂಚನೆ ಕುರಿತಾಗಿ ಭೋಪಾಲ್‌ನಲ್ಲಿ ಮೊದಲ ಕೇಸ್‌ ದಾಖಲಾಗಿದೆ.

ಗ್ರಾಪಂ 2ನೇ ಹಂತದ ಸಮರ: ಇಂದು ಮನೆಮನೆ ಪ್ರಚಾರ ಕಸರತ್ತು

ಜನರಿಗೆ ಕರೆ ಮಾಡುವ ದಂಧೆಕೋರರು ತಮ್ಮನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಎಂದು ಪರಿಚಯಿಸಿಕೊಳ್ಳುತ್ತಾರೆ. ಆ ನಂತರ ಮೊದಲ ಹಂತದಲ್ಲಿ ಲಸಿಕೆ ಪಡೆದು ಕೊರೋನಾದಿಂದ ಪಾರಾಗಲು ಆ್ಯಪ್‌ ಡೌನ್‌ಲೋಡ್‌ ಅಥವಾ ಒಟಿಪಿ ಮೂಲಕ ನೋಂದಾಯಿಸಿಕೊಳ್ಳಿ ಎಂದು ಜನರಿಗೆ ಪುಸಲಾಯಿಸುತ್ತಾರೆ.

ಹರಾರ‍ಯಣ, ಹೈದರಾಬಾದ್‌ ಮತ್ತು ತೆಲಂಗಾಣ ಸೇರಿದಂತೆ ಇನ್ನಿತರ ಕಡೆಗಳಿಂದಲೂ ಈ ದಂಧೆಕೋರರು ಜನರಿಗೆ ಲಸಿಕೆ ಆಮಿಷವೊಡ್ಡಿ, ವಂಚನೆ ಎಸಗುತ್ತಿದ್ದಾರೆ. ಹೀಗಾಗಿ ಇಂಥ ಬಣ್ಣದ ಮಾತುಗಳಿಗೆ ಮರಳಾಗಿ ಮೋಸದ ಜಾಲಕ್ಕೆ ಸಿಲುಕದಿರಿ ಎಂದು ಪೊಲೀಸ್‌ ಅಧಿಕಾರಿ ಕೋರಿಕೊಂಡಿದ್ದಾರೆ.

click me!