
ಪುಣೆ( ಜ. 12) ಸಂಸ್ಕೃತ ಶ್ಲೋಕದೊಂದಿಗೆ ಕೊರೋನಾ ಲಸಿಕೆ ಗುರಿ ತಲುಪಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ಎಂದಾದರೂ ಕರೆಯಿರಿ.. ಕೋವ್ಯಾಕ್ಸಿನ್ ಎಂದಾದರೂ ಕರೆಯಿರಿ... ನಿಮ್ಮ ಆಯ್ಕೆಗೆ ಬಿಟ್ಟಿದ್ದು.
'ಸರ್ವೇ ಸಂತು ನಿರಾಮಯಃ' (ಎಲ್ಲರೂ ಸುಖವಾಗಿರಬೇಕು, ಎಲ್ಲರೂ ನೆಮ್ಮದಿಯಾಗಿರಬೇಕು); ಇದು ನಮ್ಮ ಋಷಿಮುನಿಗಳ ಕನಸು. ಇದನ್ನು ನನಸಾಗಿಸುವುದು ನಮ್ಮೆಲ್ಲರ ಹೊಣೆ ಎಂಂತೆ ಲಸಿಕೆಗಳನ್ನು ಸರಬರಾಜು ಮಾಡುವ ಬಾಕ್ಸ್ ಗಳ ಮೇಲೆ ಶ್ಲೋಕ ಬರೆದು ಸಂದೇಶ ನೀಡಲಾಗಿದೆ.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಯೋಧರಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಈಗಾಗಲೇ ತಿಳಿಸಲಾಗಿದೆ. ಡ್ರೈ ರನ್ ಮುಗಿದ ನಂತರದಲ್ಲಿ ಜನವರಿ 16 ರಿಂದ ಲಸಿಕೆ ನೀಡಿಕೆ ಶುರುವಾಗಲಿದೆ. ಪುಣೆಯ ಸೆರುಮ್ ಇಸ್ಟಿಟ್ಯೂಟ್ ನಿಂದ ದೇಶದ ಮೂಲೆ ಮೂಲೆಗೆ ಮಂಗಳವಾರ ಲಸಿಕೆ ಕಳುಹಿಸಿಕೊಡಲಾಗಿದೆ.
ಕರ್ನಾಟಕಕ್ಕೆ ಬಂತು ಲಸಿಕೆ.. ಇದು ಮದ್ದಲ್ಲ..ಭರವಸೆ
ಒಂಭತ್ತು ವಿಮಾನಗಳಲ್ಲಿ ಹದಿಮೂರು ನಗರಗಳಿಗೆ ಲಸಿಕೆ ರವಾನೆಯಾಗಿದೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದು ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೋ ವಿಮಾನಗಳು ಮಾರಕ ರೋಗದ ಔಷಧಿ ಹೊತ್ತು ಸಾಗಿವೆ ಎಂದು ತಿಳಿಸಿದ್ದಾರೆ.
56.5 ಲಕ್ಷ ಲಸಿಕೆ ದೆಹಲಿ, ಚೆನ್ನೈ, ಕೋಲ್ಕತ್ತಾ, ಗುಹವಾಟಿ, ಶಿಲ್ಲಾಂಗ್, ಅಹಮದಾಬಾದ್, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಪಾಟ್ನಾ, ಬೆಂಗಳೂರು, ಲಕ್ನೋ, ಮತ್ತು ಚಂಡೀಘಡಕ್ಕೆ ಲಸಿಕೆ ರವಾನೆಯಾಗಿದೆ.
ಯಾವ ನಗರಕಲ್ಕೆ ಎಷ್ಟು ಲಸಿಕೆ?
* ರಾಷ್ಟ್ರ ರಾಜಧಾನಿ ನವದೆಹಲಿಗೆ Kovishield ನ 34 ಬಾಕ್ಸ್ ಗಳು ತಲುಪಿವೆ. . 1008 ಕೆಜಿ ಇದರ ತೂಕ.
* ಗುಜರಾತ್ ಗೆ 2.76 ಲಕ್ಷ ಡೋಸ್ ಲಸಿಕೆ ತಲುಪಿದ್ದು ಅಹಮದಾಬಾದ್, ಗಾಂಧಿನಗರ ಮತ್ತು ಭವನಗರಕ್ಕೆ ಸಿಗಲಿವೆ. ಜನವರಿ 16 ರಿಂದ 287 ಕೇಂದ್ರಗಳಲ್ಲಿ ಲಸಿಕೆ ನೀಡಿಕೆ ಶುರುವಾಗಲಿದೆ.
* ಕೊರೋನಾದಿಂದ ತತ್ತರಿಸಿ ಹೋಗಿದ್ದ ತಮಿಳುನಾಡಿಗೆ 5.56 ಲಕ್ಷ ಡೋಸ್ ಲಸಿಕೆ ತಲುಪಿದೆ. ಚೆನ್ನೈನಿಂದ ಹತ್ತು ಪ್ರಾದೇಶಿಕ ಕೇಂದ್ರಗಳಿಗೆ ಲಸಿಕೆ ವಿತರಣೆಯಾಗಲಿದೆ.
* ಕೋಲ್ಕತ್ತಾಕ್ಕೆ ಮೊದಲ ಹಂತವಾಗಿ 689,000 ಡೋಸ್ ಲಸಿಕೆ ಸಿಕ್ಕಿದ್ದು 941 ಕೇಂದ್ರಗಳ ಮೂಲಕ ಅಗತ್ಯವಿರುವವರಿಗೆ ದೊರೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ