ಕರ್ನಾಟಕ ಸೇರಿ 7 ಸಿಎಂಗಳ ಜತೆ ಮೋದಿ ಸಭೆ!

Published : Sep 23, 2020, 07:58 AM ISTUpdated : Sep 23, 2020, 10:37 AM IST
ಕರ್ನಾಟಕ ಸೇರಿ 7 ಸಿಎಂಗಳ ಜತೆ ಮೋದಿ ಸಭೆ!

ಸಾರಾಂಶ

ಕರ್ನಾಟಕ ಸೇರಿ 7 ಸಿಎಂಗಳ ಜತೆ ಇಂದು ಮೋದಿ ಕೋವಿಡ್‌ ಸಭೆ| ಕೊರೋನಾ ನಿಗ್ರಹ ಕುರಿತು ಸಲಹೆ ನೀಡುವ ಸಂಭವ

ನವದೆಹಲಿ(ಸೆ.23): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅತಿ ಹೆಚ್ಚು ಕೇಸು ದಾಖಲಾಗುತ್ತಿರುವ ಕರ್ನಾಟಕ ಸೇರಿದಂತೆ 7 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಜೊತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಆನ್‌ಲೈನ್‌ ಸಭೆ ಹಮ್ಮಿಕೊಂಡಿದ್ದಾರೆ.

"

ಈ ಸಭೆಯಲ್ಲಿ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮಲು ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಬುಧವಾರದ ಸಭೆಯಲ್ಲಿ ಭಾಗಿಯಾಗಲಿರುವ ಇತರೆ ರಾಜ್ಯಗಳೆಂದರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್‌.

ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ!

ಈ 7 ರಾಜ್ಯಗಳು ದೇಶದಲ್ಲಿ ಈವರೆಗೆ ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ಶೇ.65.5, ಸಕ್ರಿಯ ಕೇಸಿನಲ್ಲಿ ಶೇ.63, ಸಾವಿನ ಪ್ರಮಾಣದಲ್ಲಿ ಶೇ. 177ರಷ್ಟುಪಾಲು ಹೊಂದಿವೆ. ಅದರಲ್ಲೂ ದೆಹಲಿ ಮತ್ತು ಪಂಜಾಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತೆ ಭಾರೀ ಪ್ರಮಾಣದಲ್ಲಿ ಹೊಸ ಕೇಸುಗಳು ಪತ್ತೆಯಾಗುತ್ತಿವೆ.

ಇನ್ನು ಮಹಾರಾಷ್ಟ್ರ, ದೆಹಲಿ ಮತ್ತು ಪಂಜಾಬ್‌ನಲ್ಲಿ ಸಾವಿನ ಪ್ರಮಾಣ ಶೇ.2ಕ್ಕಿಂತ ಹೆಚ್ಚಿದೆ. ಇನ್ನು ಉತ್ತರಪ್ರದೇಶ ಮತ್ತು ಪಂಜಾಬ್‌ ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಶೇಕಡಾವಾರು ಸೋಂಕಿತರ ಪ್ರಮಾಣ 8.52ರಷ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆದ್ಯತೆಯ ಮೇರೆಗೆ ಈ ರಾಜ್ಯಗಳ ಜೊತೆ ಸಭೆ ಆಯೋಜಿಸಿದೆ.

ವಿಧಾನಸೌಧ​ದಲ್ಲಿ ಕೊರೋನಾ ಪರೀಕ್ಷೆ: 110 ಮಂದಿಗೆ ಪಾಸಿಟಿವ್‌!

ಆರಂಭದಿಂದಲೂ ಕೇಂದ್ರ ಸರ್ಕಾರ ಕೋವಿಡ್‌ ನಿಗ್ರಹದಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ ಜೊತೆಗೂಡಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯಗಳಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆ, ಉನ್ನತೀಕರಣ, ಐಸಿಯುಲ್ಲಿ ಕಾರ್ಯನಿರ್ವಹಿಸುವ ವೈದ್ಯರ ನಿರ್ವಹಣೆ ಮೊದಲಾದ ವಿಷಯಗಳಲ್ಲಿ ಕೇಂದ್ರವು ಕಾಲಕಾಲಕ್ಕೆ ರಾಜ್ಯಗಳಿಗೆ ನೆರವು ನೀಡುತ್ತಲೇ ಬಂದಿದೆ. ಅಲ್ಲದೆ ಅಗತ್ಯ ಬಿದ್ದಾಗ ರಾಜ್ಯಗಳಿಗೆ ಉನ್ನತ ತಜ್ಞರ ತಂಡಗಳನ್ನು ರವಾನಿಸುವ ಮೂಲಕ ಪರಿಸ್ಥಿತಿ ನಿರ್ವಹಿಸಲು ನೆರವನ್ನೂ ನೀಡಿಕೊಂಡು ಬಂದಿದೆ.

ಇನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹಲವು ಸುತ್ತಿನಲ್ಲಿ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಆನ್‌ಲೈನ್‌ ಸಭೆ ನಡೆಸಿ ಅಹವಾಲು ಸ್ವೀಕರಿಸಿದ್ದಾರೆ, ಪರಿಸ್ಥಿತಿ ಪರಾಮರ್ಶಿಸಿದ್ದಾರೆ ಮತ್ತು ಸೂಕ್ತ ಸಲಹೆಗಳನ್ನೂ ನೀಡಿಕೊಂಡು ಬಂದಿದ್ದಾರೆ.

ಯಾವ ರಾಜ್ಯಗಳ ಸಭೆ?

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ದೆಹಲಿ, ಪಂಜಾಬ್‌.

ಈ ರಾಜ್ಯಗಳೇ ಏಕೆ?

ಈ 7 ರಾಜ್ಯಗಳು ಒಟ್ಟು ಸೋಂಕಿತರಲ್ಲಿ ಶೇ.65.5, ಸಕ್ರಿಯ ಕೇಸಲ್ಲಿ ಶೇ.63, ಸಾವಿನ ಪ್ರಮಾಣದಲ್ಲಿ ಶೇ. 177ರಷ್ಟುಪಾಲು ಹೊಂದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ