ಕೊರೋನಾ 2ನೇ ಅಲೆ ಆರಂಭಗೊಂಡಿದೆ. ಹಲವು ರಾಜ್ಯಗಳು ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸುತ್ತಿದೆ. ಮೊದಲ ಹಂತದ ಲಾಕ್‌ಡೌನ್, ಸೀಲ್‌ಡೌನ್ ಬಳಿಕ ಇದೀಗ 2ನೇ ಹಂತದ ಲಾಕ್‌ಡೌನ್ ಜಾರಿಯಾಗುತ್ತಿದೆ. ಮಹಾರಾಷ್ಟ್ರ ಇದೀಗ 1 ವಾರ್ ಲಾಕ್‌ಡೌನ್ ಜಾರಿ ಮಾಡಿದೆ.
ಮುಂಬೈ(ಫೆ.21): ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ವೈರಸ್ ಪ್ರಕರಣ ಏರಿಕೆಯಾಗುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮೀತಿ ಮೀರುತ್ತಿದೆ. ವೈರಸ್ ನಿಯಂತ್ರಿಸಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದೀಗ ಮಹಾರಾಷ್ಟ್ರ ಸರ್ಕಾರ ಅಮರಾವತಿ ಜಿಲ್ಲೆಯಲ್ಲಿ 1 ವಾರ ಲಾಕ್‌ಡೌನ್ ಜಾರಿಗೊಳಿಸಿದೆ.
ಕೊರೋನಾ 2ನೇ ಅಲೆ; ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ!
undefined
ಅಗತ್ಯ ವಸ್ತುಗಳ ಸೇವೆ ಹೊರತು ಪಡಿಸಿ ಇನ್ಯಾ ಸೇವೆಯೂ ಅಮರಾವತಿ ಜಿಲ್ಲೆಯಲ್ಲಿ ಇರುವುದಿಲ್ಲ. ಲಾಕ್‌ಡೌನ್ ನಿಯಮಗಳನ್ನು ಜನರು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಕ್ಯಾಬಿನೆಟ್ ಮಿನಿಸ್ಟರ್ ಯಶೋಮತಿ ಠಾಕೂರ್ ಹೇಳಿದ್ದಾರೆ. ನಿಯಮ ಹಾಗೂ ಮಾರ್ಗಸೂಚಿ ನಿರ್ಲಕ್ಷ್ಯಿಸಿದರೆ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಕಾರಣ, ಇತ್ತ ಕರ್ನಾಟಕದಲ್ಲೂ ಕೊರೋನಾ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವವರಿಗೆ RT-PCR ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಇನ್ನು ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೂ ಪರೀಕ್ಷೆ ಕಡ್ಡಾಯ ಮಾಡಲಾಗಿದೆ
ಬೆಳಗಾವಿ: ಮತ್ತೆ ಸವದತ್ತಿ ಯಲ್ಲಮ್ಮ ದರ್ಶನ ಬಂದ್..!
ಅಮರಾವತಿ ಜಿಲ್ಲಿ ಸಂಪೂರ್ಣ ಲಾಕ್‌ಡೌನ್ ಆಗಿದ್ದರೆ, ಇತ್ತ ಪುಣೆಯಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ತುರ್ತು ಹಾಗೂ ಅಗತ್ಯ ಸೇವೆ ಹೊರತು ಪಡಿಸಿ ಇನ್ಯಾವುದೇ ಕಾರಣಕ್ಕೂ ಹೊರಗೆ ಬರುವಂತಿಲ್ಲ.
ಪುಣೆಯಲ್ಲಿನ ಶಾಲಾ-ಕಾಲೇಜು, ಕೋಚಿಂಗ್ ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಫೆಬ್ರವರಿ 28ರ ವರೆಗೆ ಮುಚ್ಚಲಾಗಿದೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ಸಚಿವ ಅಜಿತ್ ಪವಾರ್ ನಡೆಸಿದ ಮಹತ್ವದ ಸಭೆ ಬಳಿಕ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೊನಾ ಕೇಸ್: ಆರೋಗ್ಯ ಸಚಿವರಿಂದ ಸುದ್ಧಿಗೋಷ್ಠಿ
ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಶುಚಿತ್ವ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಈ ಮೂಲಕ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ದೂರ ಇರಿ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.