Latest Videos

Corbevax Vaccine ಭಾರತದ ಕೋರ್ಬೆವ್ಯಾಕ್ಸ್ ಲಸಿಕೆ ತುರ್ತು ಬಳಕೆಗೆ ಅನುಮತಿ, 12 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್

By Suvarna NewsFirst Published Feb 21, 2022, 6:53 PM IST
Highlights
  • 12 ರಿಂದ 18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಲಸಿಕೆ
  • ಬಳಕೆಗೆ ಅನುಮತಿ ನೀಡಿದ ಭಾರತದ ಡ್ರಗ್ ಕಂಟ್ರೋಲರ್ ಜನರಲ್
  • ಕೊರೋನಾ ಹೋರಾಟದಲ್ಲಿ ಭಾರತ್ತೆ ಮತ್ತೊಂದು ಗೆಲುವು
     

ನವದೆಹಲಿ(ಫೆ.21): ಕೊರೋನಾ(Coronavirus) ವಿರುದ್ಧದ ಹೋರಾಟದಲ್ಲಿ ಭಾರತ ಇತರ ಎಲ್ಲಾ ದೇಶಗಳಿಗಿಂತ ಮುಂಚೂಣಿಯಲ್ಲಿದೆ. ಈಗಾಗಲೇ ಶೇಕಡಾ 80ಕ್ಕಿಂತ ಹೆಚ್ಚು ಮಂದಿಗ ಭಾರತ(India) ಎರಡು ಡೋಸ್ ಲಸಿಕೆ ನೀಡಿದೆ. ಇನ್ನು ಮಕ್ಕಳಿಗೂ(Childrens) ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಇದರ ನಡುವೆ 12 ರಿಂದ 18 ವರ್ಷ ಮಕ್ಕಳಿಗೆ ಭಾರತದ ಕೋರ್ಬೆವ್ಯಾಕ್ಸ್ ಲಸಿಕೆ(corbevax vaccine) ತುರ್ತು ಬಳಕೆಗೆ ಭಾರತದ ಡ್ರಗ್ ಕಂಟ್ರೋಲ್ ಜನರಲ್(DCGI) ಅನುಮತಿ ನೀಡಿದೆ.

ಹೈದರಾಬಾದ್‌ನ ಬಯೋಲಾಜಿಕಲ್ ಇ(Biological E) ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಸಿ ಲಸಿಕೆ ಇದಾಗಿದೆ. ಇತ್ತೀಚೆಗೆ DCGI ಬಯೋಲಾಜಿಕಲ್ ಇ ಸಂಸ್ಥೆ ಫೆಬ್ರವರಿ 7 ರಂದು ಅನುಮತಿ ಅರ್ಜಿ ಸಲ್ಲಿಕೆ ಮಾಡಿದ್ದರು .ಇದೀಗ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಫಲಿತಾಂಶ ಸೇರಿದಂತೆ ಹಲವು ದಾಖಲೆಗಳನ್ನು ಆಧರಿಸಿ ಇದೀಗ DCGI ತುರ್ತು ಬಳಕೆಗೆ ಅನುಮತಿ ನೀಡಿದೆ.

Covid Vaccine: ರಾಜ್ಯದಲ್ಲಿಂದು 10 ಕೋಟಿ ಡೋಸ್‌ ಲಸಿಕೆ ಮೈಲಿಗಲ್ಲು: ದಕ್ಷಿಣದಲ್ಲೇ ನಂ.1!

ಕೊರೋನಾ ವಿರುದ್ದದ ಹೋರಾಟದಲ್ಲಿ ಭಾರತಕ್ಕೆ ಮತ್ತೊಂದು ಗೆಲುವು ಇದಾಗಿದೆ. DCGI ಅನುಮತಿಯಿಂದ ಇದೀಗ ಭಾರತ ಕೊರೋನಾ ವಿರುದ್ಧ ಮತ್ತಷ್ಟು ಶಕ್ತವಾಗಿ ಹೋರಾಡಲು ಸಾಧ್ಯವಾಗಲಿದೆ. ಇಷ್ಟೇ ಅಲ್ಲ ಕೊರೋನಾಗೆ ಅಂತ್ಯ ಹಾಡಲು ನೆರವಾಗಲಿದೆ ಎಂದು ಬಯೋಲಾಜಿಕಲ್ ಇ ಕಂಪನಿ ಹೇಳಿದೆ.

ಬಯೋಲಾಜಿಕಲ್ ಇ ಸಂಸ್ಥೆಯ ಕೋರ್ಬೆವ್ಯಾಕ್ಸ್ ಲಸಿಕೆ ಆರ್‌ಬಿಡಿ ಪ್ರೊಟಿನ್ ಉಪ ಯುನಿಟ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಮಕ್ಕಳಲ್ಲಿ ಕೊರೋನಾ ತಡೆಗಟಲ್ಲ, ಹಾಗೂ ದೇಶ ನಿರೋಧಕ ಶಕ್ತಿ ಹೆಚ್ಚಿಸಲು ಪರಿಣಾಮಕಾರಿಯಾಗಿದೆ. ಪ್ರಾಯಾಗಿಕ ಪರೀಕ್ಷೆಯಲ್ಲಿ ಕೊರೋನಾ ಸೋಂಕಿನ ವಿರುದ್ಧ ಉತ್ತಮ ಫಲಿತಾಂಶ ನೀಡಿದೆ. ಹೀಗಾಗಿ ಭಾರತದಲ್ಲಿ ಇದೀಗ ಮಕ್ಕಳಲ್ಲಿ ಕೊರೋನಾ ಆತಂಕವನ್ನು ಈ ಲಸಿಕೆ ದೂರ ಮಾಡಲಿದೆ ಎಂದು ಬಯೋಲಾಜಿಕಲ್ ಇ ಸಂಸ್ಥೆ ಹೇಳಿದೆ.

Covid-19 Vaccine: 3ನೇ ಡೋಸ್‌ಗೆ ಮುಂಚೂಣಿ ಕಾರ್ಯಕರ್ತರೇ ಹಿಂದೇಟು..!

ಶಾಲೆ, ಕಾಲೇಜಿಗೆ ತೆರಳುತ್ತಿರುವ ಮಕ್ಕಳ ಪೋಷಕರಲ್ಲಿ ಆತಂಕ ಇದ್ದೆ ಇದೆ. ಕೊರೋನಾ ವೈರಸ್ ಕಾರಣ ಮಕ್ಕಳು ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ಕೋರ್ಬೆವ್ಯಾಕ್ಸ್ ಲಸಿಕೆಯಿಂದ 12 ರಿಂದ 18 ವರ್ಷದ ಮಕ್ಕಳು ಶಾಲಾ ಕಾಲೇಜಿಗೆ ನಿರ್ಭೀತಿಯಿಂದ ಹಾಜರಾಗಲು ಸಾಧ್ಯವಾಗಲಿದೆ ಎಂದಿದೆ.

ಕೊರೋನಾ ಕಾರಣ ಈಗಷ್ಟೇ ಶಾಲಾ ಕಾಲೇಜುಗಳು ಆರಂಭಗೊಂಡಿದೆ. ಆದರೆ ಕ್ರೀಡಾ ಚಟುವಟಿಕೆ ಸೇರಿದಂತೆ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ.ಇದರಿಂದ ಮಕ್ಕಳ ಬೆಳವಣಿಗೆ ಮೇಲೆ ಅಡ್ಡಪರಿಣಾಮ ಬೀರಲಿದೆ. ಆದರೆ ಕೋರ್ಬೆವ್ಯಾಕ್ಸ್ ಲಸಿಕೆಯಿಂದ ಭಾರತ ಸಂಪೂರ್ಣವಾಗಿ ಕೊರೋನಾವನ್ನು ಹೊಡೆದೋಡಿಸಲಿದೆ ಎಂದು ಬಯೋಲಾಜಿಕಲ್ ಸಂಸ್ಥೆ ಹೇಳಿದೆ.

18 ವರ್ಷದ ಮೇಲ್ಪಟ್ಟವರಿಗೆ ಕೋರ್ಬೆವ್ಯಾಕ್ಸ್ ಲಸಿಕೆ ತುರ್ತು ಬಳಕಿಗೆ ಭಾರತದ ಡ್ರಗ್ ಕಂಟ್ರೋಲರ್ ಜನರಲ್ ಡಿಸೆಂಬರ್ 2021ರಲ್ಲಿ ಅನುಮತಿ ನೀಡಿತ್ತು. ಇದೀಗ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲ ಅನುಮತಿ ಸಿಕ್ಕಿದೆ.

ಶೀಘ್ರದಲ್ಲೇ 12 ರಿಂದ 18 ವರ್ಷದ ಮಕ್ಕಳಿಗೆ ಸರ್ಕಾರದಿಂದ ಲಸಿಕೆ
ಸದ್ಯ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಕೋರ್ಬೆವ್ಯಾಕ್ಸ್ ಲಸಿಕೆಗೆ ಅನುಮತಿ ಸಿಕ್ಕಿರುವ ಕಾರಣ ಶೀಘ್ರದಲ್ಲೇ ಸರ್ಕಾರ 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭಿಸಲಿದೆ. ಈ ಹಿಂದಿನ ಎಲ್ಲಾ ಅಭಿಯಾನಗಳಂತೆ ಕೋರ್ಬೆವ್ಯಾಕ್ಸ್ ಲಸಿಕೆಯೂ ಉಚಿತವಾಗಿ ವಿತರಿಸುವ ಸಾಧ್ಯತೆ ಇದೆ.

click me!