ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಿಂತು ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ಖತ್ರೋನ್ ಕೆ ಖಿಲಾಡಿ ಚಿತ್ರದ ತುಮ್ಸೆ ಬನಾ ಮೇರಾ ಜೀವನ್ ಹಾಡನ್ನು ತಮ್ಮ ಮಧುರವಾದ ಕಂಠದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದು, ಇವರ ಕಂಠಸಿರಿಗೆ ನೋಡುಗರು ತಲೆದೂಗುತ್ತಿದ್ದಾರೆ. ಹೌದು ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಮತ್ತು ಅದೃಷ್ಟವಶಾತ್, ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಈಗ ಒಬ್ಬ ವ್ಯಕ್ತಿಗೆ ಅವನ/ಅವಳ ಕೌಶಲ್ಯಗಳನ್ನು ಪ್ರದರ್ಶಿಸಲು ಸುಲಭ ವೇದಿಕೆ ಒದಗಿಸಿರುವುದರಿಂದ ನಮ್ಮ ಪ್ರತಿಭೆಗೆ ಅವಕಾಶ ಇಲ್ಲ ಎಂದು ನೊಂದುಕೊಳ್ಳುವ ಸನ್ನಿವೇಶವಿಲ್ಲ. ಪ್ರತಿಭೆ ಇದ್ದವರು ತಮಗೆ ತಾವೇ ವೇದಿಕೆಯೊದಗಿಸಿಕೊಳ್ಳಬಹುದು.
ಹಾಗಾಗಿಯೇ 30 ವರ್ಷದ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು, ಅವರ ಹಾಡುವ ಕೌಶಲ್ಯದಿಂದ ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ. ವೀಡಿಯೋದಲ್ಲಿ ಆ ವ್ಯಕ್ತಿ ರಸ್ತೆಯಲ್ಲಿ ನಿಂತು ಧರ್ಮೇಂದ್ರ ಅವರ ಖತ್ರೋನ್ ಕೆ ಖಿಲಾಡಿ ಚಿತ್ರದ 'ತುಮ್ಸೆ ಬನಾ ಮೇರಾ ಜೀವನ್' ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ವ್ಯಕ್ತಿ ಹಾಡುವುದನ್ನು ನೋಡಿ ರಸ್ತೆ ಬದಿ ನಡೆದು ಹೋಗುತ್ತಿರುವವರು ಕೂಡ ಕೆಲ ಕಾಲ ಅಲ್ಲೇ ನಿಂತು ಅವರ ಮಧುರ ಕಂಠವನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ಈ ವೀಡಿಯೊವನ್ನು 24LiveAssam ಹೆಸರಿನ ಸುದ್ದಿ ಚಾನೆಲೊಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋವನ್ನು ಇದುವರೆಗೆ ಫೇಸ್‌ಬುಕ್‌ನಲ್ಲಿ 9.9 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ಈ ಈ ವಿಡಿಯೋಗೆ 17,000 ಕ್ಕೂ ಹೆಚ್ಚು ಕಾಮೆಂಟ್ ಬಂದಿದೆ. ಈ ಹಾಡು ಹಾಡಿದ ವ್ಯಕ್ತಿ ಕೇವಲ ರೇಡಿಯೋ ಕೇಳುವ ಮೂಲಕ ಈ ಹಾಡುವುದನ್ನು ಕಲಿತಿದ್ದಾನೆ ಎಂದು ಹೇಳಲಾಗುತ್ತಿದೆ.
ಬಲೋಚಿ ಬೆಂಜೋ ವಾದ್ಯದಲ್ಲಿ 'ಆಯೇ ಹೋ ಮೇರಿ ಜಿಂದಗಿ' ಹಾಡು ನುಡಿಸಿದ ಪಾಕ್ ವೃದ್ಧ
ವೀಡಿಯೊ ಈಗ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಯುವಕನ ಪ್ರತಿಭೆಗೆ ಸಂಪೂರ್ಣ ವಿಸ್ಮಯರಾಗಿದ್ದಾರೆ. ಅನೇಕರು ಅವರನ್ನು ಈ ಹಾಡಿನ ಮೂಲ ಗಾಯಕ ಮೊಹಮ್ಮದ್ ಅಜೀಜ್ (Mohammed Aziz) ಅವರಿಗೆ ಹೋಲಿಕೆ ಮಾಡಿದರು. ಮತ್ತು ಇನ್ನು ಕೆಲವರು ಇವರಿಗೆ ಬಾಲಿವುಡ್ ಹಾಡುಗಳನ್ನು ಹಾಡಲು ಅವಕಾಶ ನೀಡಬೇಕು ಎಂದು ಹೇಳಿದರು.
ಚಿಟ್ಟಿ ಆಯಿ ಹೈ ಹಾಡಿದ ವೃದ್ಧ ದಂಪತಿ... ವೈರಲ್ ಆಯ್ತು ವಿಡಿಯೋ
ಅತ್ಯಂತ ಮಧುರವಾದ ಧ್ವನಿ ನಿಮ್ಮದಾಗಿದ್ದು ಮುಂದುವರಿಸಿ, ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಮಧುರವಾದ ಧ್ವನಿ. ದೇವರು ಈ ಸಜ್ಜನನನ್ನು ಆಶೀರ್ವದಿಸಲಿ ಎಂದು ಬರೆದಿದ್ದಾರೆ. ಅವರ ಧ್ವನಿಯು ಹಿನ್ನಲೆ ಗಾಯಕನಂತೆಯೇ ಅದ್ಭುತವಾಗಿದೆ. ಹಿನ್ನೆಲೆ ಸಂಗೀತದೊಂದಿಗೆ ಹಾಡಿದರೆ ಯಾರೂ ಈ ಧ್ವನಿಯನ್ನು ಮೀರಿಸಲು ಸಾಧ್ಯವಿಲ್ಲ. ನೀವು ಹಿನ್ನೆಲೆ ಗಾಯಕರಾಗಬೇಕೆಂದು ನಾನು ಬಯಸುತ್ತೇನೆ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಇಂಡೋ-ಫ್ರೆಂಚ್ ಜೋಡಿಯೊಂದು ಕಿಶೋರ್ ಕುಮಾರ್ ಅವರ ಫೇಮಸ್ ಹಾಡು 'ಸಾಮ್ನೆ ಯೇ ಕೌನ್ ಆಯಾ' ಹಾಡನ್ನು ಹಾಡಿದ್ದು, ಇದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಇಂಡೋ ಫ್ರೆಂಚ್ ಜೋಡಿಯಾದ ಮೇಘದತ್ ರಾಯ್ (Meghdut Roy Chowdhury) ಚೌಧರಿ ಮತ್ತು ಪಾಲಿನ್ ಲಾರಾವೊಯಿರ್ (Pauline Laravoire) ಅವರು ಕಿಶೋರ್ ಕುಮಾರ್ ಅವರ 'ಸಾಮ್ನೆ ಯೇ ಕೌನ್ ಆಯಾ' ಹಾಡನ್ನು ಸಖತ್ ಆಗಿ ಹಾಡಿದ್ದು, ನೆಟ್ಟಿಗರು ಈ ಜೋಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 31,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಕೋಲ್ಕತ್ತಾದ ಮೇಘದತ್ ರಾಯ್ ಚೌಧುರಿ ಮತ್ತು ಫ್ರಾನ್ಸ್‌ನ ಪಾಲಿನ್ ಲಾರಾವೊಯಿರ್ ತಮ್ಮ ಜೀವನವನ್ನು ಒಟ್ಟಿಗೆ ನಡೆಸುತ್ತಿದ್ದು, ಇವರಿಬ್ಬರು ಈ ಹಿಂದೆಯೂ ಹೀಗೆ ಹಲವು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ್ದರು. ಹಾಗೆಯೇ ಈ ಬಾರಿಯೂ ಕೂಡ ಜನವರಿ 9 ರಂದು ಮೇಘದತ್ ಮತ್ತು ಪಾಲಿನ್ ಇಬ್ಬರೂ 1972 ರ ಚಲನಚಿತ್ರ 'ಜವಾನಿ ದಿವಾನಿ'ಯಿಂದ ಎವರ್‌ಗ್ರೀನ್ ಹಾಡು ಕಿಶೋರ್ ಕುಮಾರ್ ಹಾಡಿದ ಸಾಮ್ನೆ ಯೇ ಕೌನ್ ಆಯಾ ಹಾಡನ್ನು ಹಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ