
ನವದೆಹಲಿ(ಫೆ.21): ಹೊಸ ವರ್ಷ ಆರಂಭದಲ್ಲೇ ಭಾರಿ ಆತಂಕಕ್ಕೆ ಕಾರಣವಾಗಿದ್ದ ಕೊರೋನಾ ವೈರಸ್(Coronavirus), ಓಮಿಕ್ರಾನ್ ವೈರಸ್(Omicron Virus) ಆರ್ಭಟ ಇದೀಗ ಕಡಿಮೆಯಾಗುತ್ತಿದೆ. ದೇಶದಲ್ಲಿ ಕೊರೋನಾ ಪ್ರಕರಣ ಕಳೆದ 15 ದಿನಗಳಿಂದ ಗಣನೀಯ ಇಳಿಕೆಯಾಗಿದೆ. ಸದ್ಯ ಭಾರತದಲ್ಲಿ(India) ಕೊರೋನಾ ಪಾಸಿಟಿವಿ ರೇಟ್ ಶೇಕಡಾ 1.92ಕ್ಕೆ ಇಳಿಕೆಯಾಗಿದೆ.
ದೇಶದ ಕಳೆದ 24 ಗಂಟೆಯಲ್ಲಿ 16,051 ಕೊರೋನಾ ವೈರಸ್ ಕೊರೋನಾ ವೈರಸ್ ಪ್ರಕರಣ ದಾಖಲಾಗಿದೆ. ಈ ಮೂಲಕ ಒಟ್ಟು ಕೊರೋನಾ ವೈರಸ್ ಪ್ರಕರಣ ಸಂಖ್ಯೆ 4,28,38,524ಕ್ಕೇರಿದೆ. ಇನ್ನು ಸಕ್ರಿಯ ಕೊರೋನಾ ಪ್ರಕರಣ ಸಂಖ್ಯೆ 2,02,131ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಬ್ರಿಟನ್ ರಾಣಿ ಎಲಿಜಬೆತ್‌ಗೆ ಕೊರೋನಾ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ ಮೋದಿ!
ಕಳೆದ 24 ಗಂಟೆಯಲ್ಲಿ ಕೊರೋನಾದಿಂದ ದೇಶದಲ್ಲಿ 206 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೋನಾ ವೈರಸ್‌ಗೆ ಮಡಿದವರ ಸಂಖ್ಯೆ 5,12,109ಕ್ಕೆ ಏರಿಕೆಯಾಗಿದೆ. ಕಳೆದ 15 ದಿನಗಳಿಂದ ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆ ವರದಿಯಾಗಿದೆ.ಪ್ರತಿ ದಿನ ಪ್ರಕರಣ ಸಂಖ್ಯೆ ಇಳಿಕೆಯಾಗಿದೆ.
ಒಟ್ಟು ಪ್ರಕರಣ ಸಂಖ್ಯೆಯಲ್ಲಿ ಸಕ್ರಿಯ ಕೊರೋನಾ ಪ್ರಕರಣ ಸಂಖ್ಯೆ ಶೇಕಡಾ 0.47 ಕ್ಕೆ ಇಳಿಕೆಯಾಗಿದೆ. ಇನ್ನು ಕೊರೋನಾದಿಂದ ಗುಣಮುಖರಾಗುವ ಸಂಖ್ಯೆ ಶೇಕಡಾ 98.33ಕ್ಕೆ ಏರಿಕೆಯಾಗಿದೆ. ಪ್ರತಿ ದಿನದ ಕೊರೋನಾ ಪಾಸಿಟಿವಿಟಿ ರೇಟ್ ಸರಾಸರಿ ಶೇಕಡಾ 1.93ಕ್ಕೆ ಇಳಿಕೆಯಾಗಿದೆ.
Covid Vaccine: ರಾಜ್ಯದಲ್ಲಿಂದು 10 ಕೋಟಿ ಡೋಸ್ ಲಸಿಕೆ ಮೈಲಿಗಲ್ಲು: ದಕ್ಷಿಣದಲ್ಲೇ ನಂ.1!
2021ರ ಡಿಸೆಂಬರ್ ತಿಂಗಳಿನಿಂದ ಭಾರತದಲ್ಲಿ ಕೊರೋನಾ ವೈರಸ್ ಹೆಚ್ಚಳ ಜೊತೆಗೆ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿತ್ತು. ಪರಿಣಾಮ ದೇಶದ ಬಹುತೇಕ ರಾಜ್ಯಗಳು ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, 50,50 ರೂಲ್ಸ್ ಸೇರಿದಂತೆ ಹಲವು ಕೋವಿಡ್ ನಿಯಮಗಳನ್ನು ಜಾರಿಗೆ ತಂದಿದೆ. ಇದೀಗ ಬಹುತೇಕ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣದಲ್ಲಿರುವ ಕಾರಣ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗಿದೆ.
ಹೊಸ ವರ್ಷದ ಆರಂಭದಲ್ಲಿ ಕೊರೋನಾ ವೈರಸ್ ಹಾಗೂ ಓಮಿಕ್ರಾನ ಪ್ರಕರಣ ಗಣನೀಯ ಹೆಚ್ಚಳವಾಗಿತ್ತು. ತಜ್ಞರ ವರದಿ ಪ್ರಕಾರ ಫೆಬ್ರವರಿ ಮಧ್ಯ ಭಾಗದಲ್ಲಿ ಕೊರೋನಾ ಇಳಿಕೆಯಾಗಲಿದೆ ಎಂದು ವರದಿ ನೀಡಿದ್ದರು. ತಜ್ಞರ ವರದಿಯಂತೆ ಇದೀಗ ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿನ ಕೊರೋನಾ ಲಸಿಕೆ ಅಭಿಯಾನ.
ದೇಶದಲ್ಲಿ ಈಗಾಗಲೇ 175.46 ಕೋಟಿ ಲಸಿಕೆ ನೀಡಲಾಗಿದೆ. 2021ರ ಡಿಸೆಂಬರ್ 19 ಕ್ಕೆ 100 ಕೋಟಿ ಡೂಸ್ ನೀಡಲಾಗಿತ್ತು. ಇದೀಗ ದೇಶದಲ್ಲಿ ಎರಡೂ ಡೋಸ್ ನೀಡಿದವರ ಸಂಖ್ಯೆ ಶೇಕಡಾ 80 ದಾಟಿದೆ. ಮಕ್ಕಳಿಗೂ ಲಸಿಕೆ ನೀಡಲಾಗುತ್ತಿದೆ. ಲಸಿಕೆಯಿಂದ ಭಾರತದಲ್ಲಿ ಕೊರೋನಾ 3ನೇ ಅಲೆ ಯಾವುದೇ ಗಂಭೀರ ಅಪಾಯ ಸೃಷ್ಟಿಸಿಲ್ಲ. ಎರಡನೇ ಅಲೆಯಲ್ಲಿ ಉದ್ಭವಿಸಿದ ಆತಂಕ, ಸಂಕಷ್ಟ ಈ ಬಾರಿ ಇರಲಿಲ್ಲ. ಇತರ ದೇಶಗಳಲ್ಲಿ ಲಸಿಕೆ ಸಮರ್ಪಕವಾಗಿ ಪೂರೈಕೆಯಾಗುತಿಲ್ಲ, ವಿತರಣೆಯಾಗುತ್ತಿಲ್ಲ ಅನ್ನೋ ಆರೋಪಗಳು ಕೇಳಿಬರುತ್ತಲೇ ಇದೆ. ಆದರೆ ಭಾರತದಲ್ಲಿ ಅರ್ಹರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಸದ್ಯ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಸಾಕಷ್ಟು ಲಸಿಕೆ ಲಭ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ