
ನವದೆಹಲಿ(ಏ.17):ನಿನ್ನೆ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮನ್ ಜಯಂತಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ವೇಳೆ ಪೊಲೀಸರು ಮಧ್ಯಪ್ರವೇಶಿಸದೇ ಇದ್ದಿದ್ದರೆ ಇನ್ನಷ್ಟು ಮಂದಿ ಗಾಯಗೊಳ್ಳುತ್ತಿದ್ದರು ಎಂದು ಜಹಾಂಗೀರ್‌ಪುರಿ ಹಿಂಸಾಚಾರದ ವೇಳೆ ಗುಂಡು ತಗುಲಿದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಎರಡೂ ಕಡೆಯ ನಡುವೆ ಪೊಲೀಸರು ಮಧ್ಯ ಪ್ರವೇಶಿಸದೇ ಇದ್ದಲ್ಲಿ ಇನ್ನೂ ಅನೇಕ ಜನರು ಗಾಯಗೊಳ್ಳುತ್ತಿದ್ದರು ಎಂದು ಶನಿವಾರ ಜಹಾಂಗೀರ್ಪುರಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಮೇದಾ ಲಾಲ್ ಮೀನಾ (Meda Lal Meena) ಹೇಳಿದ್ದಾರೆ.
1993 ರಿಂದಲೂ ದೆಹಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ 50 ವರ್ಷದ ಮೀನಾ ಅವರು ಶನಿವಾರ ಸಂಜೆ ಜಹಂಗೀರ್‌ಪುರಿ (Jahangirpuri) ಪ್ರದೇಶದಲ್ಲಿ ನಡೆದ ಶೋಭಾ ಯಾತ್ರೆಯ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಗಾಯಗೊಂಡ ಏಳು ಪೊಲೀಸ್ ಸಿಬ್ಬಂದಿಯಲ್ಲಿ ಒಬ್ಬರಾಗಿದ್ದಾರೆ. ಅವರ ಎಡ ಮುಂಗೈಗೆ ಗುಂಡು ತಗುಲಿದೆ. ಸಂಜೆ 4.30ರ ಸುಮಾರಿಗೆ ಪ್ರಾರಂಭವಾದ ಶೋಭಾಯಾತ್ರೆಯೂ ಜೈ ಶ್ರೀ ರಾಮ್ (Jai Shri Ram) ಘೋಷಣೆಗಳೊಂದಿಗೆ ಜಹಾಂಗೀರ್‌ಪುರಿಯ ಇತರ ಬ್ಲಾಕ್‌ಗಳಲ್ಲಿ ಸಾಗಿ ಬಂದು ಸಂಜೆ 6 ಗಂಟೆ ಸುಮಾರಿಗೆ ಸಿ ಬ್ಲಾಕ್ ಮಸೀದಿ ಬಳಿ ತಲುಪಿದೆ. ಈ ವೇಳೆ ನಾನು ಹಿಂದೆ ಇದ್ದೆ. ಆದ್ದರಿಂದ ಕಾರಣ ಏನು ಎಂದು ನನಗೆ ತಿಳಿದಿಲ್ಲ, ಆದರೆ ನಂತರ ಮುಖಾಮುಖಿ ಮತ್ತು ಹೊಡೆದಾಟ ನಡೆಯಿತು. ಹಿಂದೆ ಇದ್ದ ನಮ್ಮ ಪೊಲೀಸರು ಮುಂದೆ ಬಂದು ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಬೇರ್ಪಡಿಸಿದರು ಎಂದು ಅವರು ಹೇಳಿದರು.
Jahangirpuri Violence ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಪುಷ್ಪಾ ಸಿನಿಮಾ ಸಿಗ್ನೆಚರ್ ಸ್ಟೈಲ್ ಮಾಡಿದ ಆರೋಪಿ!
ನಂತರ ಯಾತ್ರೆಯಲ್ಲಿದ್ದ ಜನರನ್ನು ಜಿ ಬ್ಲಾಕ್‌ಗೆ ಸ್ಥಳಾಂತರಿಸಲಾಯಿತು ಮತ್ತು ಸಿ ಬ್ಲಾಕ್‌ನ ನಿವಾಸಿಗಳನ್ನು ಅವರಿದ್ದ ಬದಿಯಲ್ಲಿಯೇ ಇರಿಸಲಾಯಿತು. ಪೊಲೀಸರು ಮಧ್ಯದಲ್ಲಿ ಕುಶಾಲ್ ಚೌಕ್‌ನಲ್ಲಿ (Kushal Chowk) ನಿಂತರು. ಇದು ಮತ್ತೆ ಶಾಂತಿಯುತವಾಯಿತು, ಆದರೆ ಸುಮಾರು 10 ನಿಮಿಷಗಳ ನಂತರ, ಜನರು ಕತ್ತಿಗಳು ಮತ್ತು ರಾಡ್‌ಗಳೊಂದಿಗೆ ಧಾವಿಸಿದರು ಮತ್ತು ಕಲ್ಲು ತೂರಾಟ (stone pelting)ಪ್ರಾರಂಭವಾಯಿತು. ಸುಮಾರು 8-10 ಸುತ್ತು ಗುಂಡು ಹಾರಿಸಲಾಯಿತು ಮತ್ತು ನಾನು ಗಾಯಗೊಂಡಿದ್ದೇನೆ ಎಂದು ಅವರು ಹೇಳಿದರು.
ಶನಿವಾರ ಹೊರಡಲಾಗಿದ್ದ ಮೂರನೇ ಯಾತ್ರೆ ಇದಾಗಿದ್ದು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅಲ್ಲಿಯೇ ಇದ್ದೆ. ಪೊಲೀಸರು ತಮ್ಮನ್ನು ಮಧ್ಯದಲ್ಲಿ ಇರಿಸದಿದ್ದರೆ, ಹೆಚ್ಚಿನ ಜನರು ಗಾಯಗೊಳ್ಳುತ್ತಿದ್ದರು. ಯಾರೂ ಯಾರಿಂದಲೂ ಕಡಿಮೆ ಇರಲಿಲ್ಲ ಎಂದು ಅವರು ಹೇಳಿದರು.ಈ ಗಲಭೆ ನಡೆಸಿದ ಆರೋಪದ ಮೇಲೆ 14 ಜನರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಒಬ್ಬ ಈ ಹಿಂದೊಮ್ಮೆ ಹಲ್ಲೆ ಮತ್ತು ಜೂಜಾಟದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಎಂದು ದೆಹಲಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
Jahangirpuri Violence: ದೆಹಲಿಯಯಲ್ಲಿ ಶೋಭಾಯಾತ್ರೆ ವೇಳೆ ದುಷ್ಕೃತ್ಯ: ಹನುಮ ಜಯಂತಿ ಯಾತ್ರೆಗೆ ಕಲ್ಲೇಟು
ಇನ್‌ಸ್ಪೆಕ್ಟರ್ ರಾಜೀವ್ ರಂಜನ್ ಸಿಂಗ್ ನೀಡಿದ ದೂರಿನ ಆಧಾರದ ಮೇಲೆ ಜಹಾಂಗೀರ್‌ಪುರಿ ಪೊಲೀಸ್ ಠಾಣೆಯಲ್ಲಿ ಶನಿವಾರ ರಾತ್ರಿ 11.40 ರ ಸುಮಾರಿಗೆ ದಾಖಲಾಗಿರುವ ಪ್ರಕರಣದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಹೀಗೆ ಹೇಳುತ್ತದೆ: “ಇದು ಹನುಮ ಜಯಂತಿಯನ್ನು ಆಚರಿಸಲು ಶಾಂತಿಯುತ ಶೋಭಾ ಯಾತ್ರೆ ಮೆರವಣಿಗೆಯಾಗಿತ್ತು, ಆದರೆ ಸಂಜೆ 6 ಗಂಟೆಗೆ, ಅವರು ಸಿ-ಬ್ಲಾಕ್‌ನಲ್ಲಿರುವ ಮಸೀದಿಯ ಹೊರಗೆ ತಲುಪಿದಾಗ, ಎಂಡಿ ಅನ್ಸಾರ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ನಾಲ್ಕೈದು ಸಹಚರರೊಂದಿಗೆ ಬಂದು ಶೋಭಾ ಯಾತ್ರೆಯಲ್ಲಿ ತೊಡಗಿದ್ದ ಜನರೊಂದಿಗೆ ಜಗಳವಾಡಲು ಪ್ರಾರಂಭಿಸಿದನು. ವಾದವು ಉಲ್ಬಣಗೊಂಡಿತು ಮತ್ತು ಎರಡೂ ಕಡೆಯಿಂದ ಕಲ್ಲು ತೂರಾಟ ಪ್ರಾರಂಭವಾಯಿತು ಮತ್ತು ಕಾಲ್ತುಳಿತ ಪ್ರಾರಂಭವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ