ಚಿದು ಬಂಧಿಸಲು ಗೋಡೆ ಹಾರಿದ್ದ ಅಧಿಕಾರಿಗೆ ಪದಕ!

By Kannadaprabha News  |  First Published Jan 26, 2020, 9:10 AM IST

ಚಿದು ಬಂಧಿಸಲು ಗೋಡೆ ಹಾರಿದ್ದ ಅಧಿಕಾರಿ ಸೇರಿ 28 ಸಿಬಿಐ ಅಧಿಕಾರಿಗಳಿಗೆ ಪದಕ| ಬಹುಕೋಟಿ ಐಎನ್‌ಎಕ್ಸ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ


ನವದೆಹಲಿ[ಜ.26]: ಬಹುಕೋಟಿ ಐಎನ್‌ಎಕ್ಸ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಲು ಅವರ ಮನೆಯ ಗೋಡೆ ಹಾರಿದ್ದ ಸಿಬಿಐ ಅಧಿಕಾರಿ ಆರ್‌. ಪಾರ್ಥಸಾರಥಿ ಸೇರಿದಂತೆ ಒಟ್ಟಾರೆ 28 ಮಂದಿ ಸಿಬಿಐ ಅಧಿಕಾರಿಗಳು ರಾಷ್ಟ್ರಪತಿ ಹಾಗೂ ಪೊಲೀಸ್‌ ಪದಕಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.

INX ಹಗರಣ ಬೆನ್ನಲ್ಲೇ ಚಿದು ಕೊರಳಿಗೆ ಏರ್‌ ಇಂಡಿಯಾ ಕುಣಿಕೆ?

Tap to resize

Latest Videos

undefined

ಐಎನ್‌ಎಕ್ಸ್‌ ಕೇಸ್‌ನಲ್ಲಿ ಚಿದಂಬರಂ ಅವರ ನಿವಾಸದ ಕಾಂಪೌಂಡ್‌ ಅನ್ನು ಜಿಗಿದು, ಚಿದಂಬರಂ ಅವರನ್ನು ಬಂಧಿಸಿದ ಖ್ಯಾತಿಯ ಪಾರ್ಥಸಾರಥಿ ಸೇರಿ ಇತರ 6 ಹಿರಿಯ ಅಧಿಕಾರಿಗಳಿಗೆ ರಾಷ್ಟ್ರಪತಿಯವರ ಪೊಲೀಸ್‌ ಪದಕ ಹಾಗೂ ಇತರ 21 ಅಧಿಕಾರಿಗಳು ಪೊಲೀಸ್‌ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಅಲ್ಲದೆ, ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್‌ ಯಾದವ್‌ ವಿರುದ್ಧದ ಐಆರ್‌ಸಿಟಿಸಿ ಪ್ರಕರಣದ ತನಿಖೆ ಕೈಗೊಂಡಿದ್ದ ವಿಶೇಷ ಅಪರಾಧ ಘಟಕದ ಸೂಪರಿಂಟೆಂಡೆಂಟ್‌ ನಿರ್ಭಯ್‌ ಕುಮಾರ್‌ ಅವರಿಗೂ ಪೊಲೀಸ್‌ ಪದಕದ ಗೌರವ ಒಲಿದುಬಂದಿದೆ.

ಚಿದಂಬರಂಗೆ ಬಿಗ್ ರಿಲಿಫ್ : 105 ದಿನಗಳ ಜೈಲುವಾಸ ಮುಕ್ತಾಯ

ಜನವರಿ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!