ಒಬ್ಬ ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಸಿಗುತ್ತಾ? ಎಸ್‌ಟಿ ಪ್ರಕರಣವೇ ಬೇರೆ!

Published : Oct 17, 2026, 11:52 AM IST
Supreme court on Reservation

ಸಾರಾಂಶ

ಭಾರತದಲ್ಲಿ ಧಾರ್ಮಿಕ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಮುಂದುವರಿಯುತ್ತದೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಮಹತ್ವದ ತೀರ್ಪುಗಳನ್ನು ನೀಡಿವೆ. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮತಾಂತರದ ನಂತರ ಮೀಸಲಾತಿ ನಿಯಮಗಳು ಹೇಗೆ ಅನ್ವಯಿಸುತ್ತವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಭಾರತದಲ್ಲಿ ಧಾರ್ಮಿಕ ಮತಾಂತರ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ಹಕ್ಕುಗಳು ಬಗ್ಗೆ ಆಗಾಗ ವಿವಾದ, ಚರ್ಚೆ ಹುಟ್ಟುಹಾಕುತ್ತಲೇ ಇರುತ್ತದೆ. ಇತ್ತೀಚೆಗೆ ಸೂಕ್ಷ್ಮ ಪ್ರಕರಣವೊಂದದು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತ. ಆ ಪ್ರಕರಣ ದೇಶದಾದ್ಯಂತ ಚರ್ಚೆ ಹುಟ್ಟುಹಾಕಿತು. ಆ ಪ್ರಕರಣದ ವಿವರವವಾಗಿ ಇಲ್ಲಿ ತಿಳಿಸಲಾಗಿದೆ.

ಒಬ್ಬ ವ್ಯಕ್ತಿ ಬೇರೊಂದು ಧರ್ಮಕ್ಕೆ ಮತಾಂತರವಾದ್ರೆ ಮೀಸಲಾತಿ ಸಿಗುತ್ತದೆಯೇ?

ಏನೆಂದರೆ ವ್ಯಕ್ತಿಯೊಬ್ಬ ತಾನು ಹುಟ್ಟಿದ ಮೂಲ ಧರ್ಮವನ್ನು ತೊರೆದು ಬೇರೊಂದು ಧರ್ಮಕ್ಕೆ ಸೇರಿದರೆ ಅಥವಾ ಮತಾಂತರವಾದರೆ ಅವನ ಹಿಂದಿನ ಧರ್ಮ, ಜಾತಿ ಆಧಾರದ ಮೇಲೆ ಮತಾಂತರ ಆದ ಬಳಿಕವೂ ಮೀಸಲಾತಿ ಸೌಲಭ್ಯ ಪಡೆಯಬಹುದೇ? ಎಂದು ನ್ಯಾಯಾಲಯವನ್ನು ಕೇಳಲಾಗಿತ್ತು. ಇದೊಂದು ಸೂಕ್ಷ್ಮ ಪ್ರಕರಣ. ಸಂವಿಧಾನ ಮತಾಂತರ ಕುರಿತು ಏನು ಹೇಳಿದೆ, ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳು ವಿವಿಧ ರಾಜ್ಯಗಳ ಕಾನೂನುಗಳು ಈ ವಿಷಯದ ಬಗ್ಗೆ ಸ್ಪಷ್ಟ ಮತ್ತು ಕಠಿಣ ನಿಬಂಧನೆಗಳನ್ನು ಒಳಗೊಂಡಿವೆ, ಇದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ಪರಿಶಿಷ್ಟ ಜಾತಿಗಳಿಗೆ ಸಾಂವಿಧಾನಿಕ ನಿಯಮಗಳೇನು?

ಭಾರತೀಯ ಸಂವಿಧಾನದ 341 ನೇ ವಿಧಿಯ ಅಡಿಯಲ್ಲಿ ಹೊರಡಿಸಲಾದ 1950 ರ ರಾಷ್ಟ್ರಪತಿ ಆದೇಶದ ಪ್ರಕಾರ ಹಿಂದೂ ಧರ್ಮ, ಸಿಖ್ ಅಥವಾ ಬೌದ್ಧ ಧರ್ಮದವರಿಗೆ ಮಾತ್ರ ಪರಿಶಿಷ್ಟ ಜಾತಿ (SC) ಸ್ಥಾನಮಾನವನ್ನು ನೀಡಬಹುದು. ಈ ಕಾನೂನಿನಡಿಯಲ್ಲಿ ಒಂದು ವೇಳೆ ಒಬ್ಬ ದಲಿತ ವ್ಯಕ್ತಿ ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರೆ ಅವರು ಪರಿಶಿಷ್ಟ ಜಾತಿ (SC) ವರ್ಗದ ಅಡಿಯಲ್ಲಿ ಮೀಸಲಾತಿಯ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅದೇ ರೀತಿ ಕಾನೂನಿನ ಇನ್ನೊಂದು ಅಂಶವೆಂದರೆ ಒಬ್ಬ ವ್ಯಕ್ತಿಯು ಹಿಂದೂ ಧರ್ಮಕ್ಕೆ ಮರಳಿದರೆ ಮತ್ತು ಅವನ ಸಮುದಾಯವು ಅವನನ್ನು ತನ್ನ ಹಳೆಯ ಜಾತಿ ಎಂದು ಒಪ್ಪಿಕೊಂಡರೆ, ಅವನು ಮತ್ತೆ ಎಸ್‌ಸಿ ಮೀಸಲಾತಿಯ ಪ್ರಯೋಜನವನ್ನು ಪಡೆಯಬಹುದು ಎಂದು ಹೇಳುತ್ತದೆ.

ಒಬಿಸಿ ವರ್ಗದಲ್ಲಿ ಧರ್ಮ ಬದಲಾಯಿಸಿದರೆ ಏನಾಗುತ್ತೆ?

OBC ಮೀಸಲಾತಿ ನಿಯಮಗಳು ಪರಿಶಿಷ್ಟ ಜಾತಿಗಳಿಗೆ ಇರುವ ನಿಯಮಗಳಿಗಿಂತ ಸ್ವಲ್ಪ ಬೇರೆಯೇ ಆಗಿವೆ. ಕೇಂದ್ರ ಮತ್ತು ಹಲವಾರು ರಾಜ್ಯಗಳ OBC ಪಟ್ಟಿಗಳು ಜುಲಾಹಾ, ಕುಂಜ್ರಾ, ಧುನಿಯಾ ಮುಂತಾದ ಕೆಲವು ಮುಸ್ಲಿಂ ಜಾತಿಗಳನ್ನು ಸಹ ಒಳಗೊಂಡಿವೆ. OBC ವರ್ಗದ ಅಡಿಯಲ್ಲಿ ಮೀಸಲಾತಿ ಸೌಲಭ್ಯಗಳನ್ನು ಪಡೆಯುವ ಮುಸ್ಲಿಂ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರೆ, ಅವರ ಮೀಸಲಾತಿ ತಕ್ಷಣವೇ ಕೊನೆಗೊಳ್ಳುವುದಿಲ್ಲ! ಆದರೆ, ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರವೂ ಅವರು ಒಬಿಸಿ ಪಟ್ಟಿಯಲ್ಲಿ ಈಗಾಗಲೇ ಸೂಚಿಸಲಾದ ಜಾತಿಯ ಭಾಗವಾಗಿಯೇ ಉಳಿಯುತ್ತಾರೆ. ಒಬಿಸಿ ಮಾನದಂಡಗಳು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಆಧರಿಸಿವೆ ಆದ್ದರಿಂದ ಸಂಪೂರ್ಣ ಧಾರ್ಮಿಕ ಮತಾಂತರದ ನಂತರವೂ ಮೀಸಲಾತಿ ಬದಲಾಗುವುದಿಲ್ಲ.

ಎಸ್‌ಟಿ ಪ್ರಕರಣದ ಕುರಿತು ಅಲಹಾಬಾದ್ ಹೈಕೋರ್ಟ್ ಹೇಳಿದ್ದೇನು?

ST ಗಳಿಗೆ ಧಾರ್ಮಿಕ ಮತಾಂತರದ ನಿಯಮಗಳು ಬೇರೆಯೇ ಆಗಿವೆ. ಅಲ್ಲದೆ ಅವು ಅತ್ಯಂತ ಕಟ್ಟುನಿಟ್ಟಾಗಿವೆ. ಇತ್ತೀಚೆಗೆ, ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಹೇಳಿದ್ದೇನೆಂದರೆ, 'ST ಸ್ಥಾನಮಾನವು ವ್ಯಕ್ತಿಯ ಧರ್ಮವನ್ನು ಅವಲಂಬಿಸಿಲ್ಲ, ಬದಲಿಗೆ ಅವರ ಬುಡಕಟ್ಟು ಗುರುತು, ಸಂಸ್ಕೃತಿ, ಪದ್ಧತಿಗಳು ಮತ್ತು ಆಹಾರ ಪದ್ಧತಿಗಳನ್ನು ಅವಲಂಬಿಸಿರುತ್ತದೆ ಎಂದು ಸ್ಪಷ್ಟಪಡಿಸಿತು. ST ವ್ಯಕ್ತಿಯೊಬ್ಬರು ತಮ್ಮ ಧರ್ಮವನ್ನು ಬದಲಾಯಿಸಿದರೂ, ಅವರ ಬುಡಕಟ್ಟು ಗುರುತು ಬದಲಾಗದೆ ಇರುವುದರಿಂದ ಅವರ ST ಮೀಸಲಾತಿ ಹಾಗೆಯೇ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ತನ್ನ ಆದೇಶಗಳಲ್ಲಿ ಸ್ಪಷ್ಟವಾಗಿ ಹೇಳಿರುವ ಪ್ರಕಾರ, ಕೇವಲ ಕಾಗದದ ಮೇಲೆ ಧರ್ಮ ಬದಲಾಯಿಸುವುದರಿಂದ ಮೀಸಲಾತಿಯ ಪ್ರಯೋಜನಗಳು ದೊರೆಯುವುದಿಲ್ಲ. ಒಬ್ಬ ಮುಸ್ಲಿಂ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹಿಂದಿನ ಜಾತಿಯ ಆಧಾರದ ಮೇಲೆ ಮೀಸಲಾತಿಯನ್ನು ಪಡೆದರೆ ಅವನು ಅಥವಾ ಅವಳು ಎರಡು ವಿಷಯಗಳನ್ನು ಸಾಬೀತುಪಡಿಸಬೇಕು: ಮೊದಲನೆಯದಾಗಿ, ಅವನು ಅಥವಾ ಅವಳು ಮೂಲತಃ ಆ ಜಾತಿಗೆ ಸೇರಿದವರು, ಎರಡನೆಯದಾಗಿ, ಮುಖ್ಯವಾಗಿ, ಹಿಂದೂ ಸಮಾಜ ಮತ್ತು ಅವನ ಅಥವಾ ಅವಳ ಆಯಾ ಜಾತಿಯ ಸದಸ್ಯರು ಅವನನ್ನು ಅಥವಾ ಅವಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ. ಈ ಕಠಿಣ ಮಾನದಂಡಗಳಿಲ್ಲದೆ, ಮೀಸಲಾತಿ ಪ್ರಯೋಜನಗಳನ್ನು ಪಡೆಯುವುದು ಕಾನೂನುಬದ್ಧವಾಗಿ ಅಸಾಧ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಕ್ಷ ತೊರೆದವರೆಲ್ಲಾ ಹೇಡಿಗಳೆಂದ ರಾಹುಲ್ ಗಾಂಧಿ ಕಾಲೆಳೆದು ಅವರೆಲ್ಲಾ ನಿಮ್ಮ ಹಳೆ ದೋಸ್ತ್‌ ಎಂದ ಮಲ್ಲಿಕಾರ್ಜುನ್ ಖರ್ಗೆ
ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು; ಶೀಘ್ರದಲ್ಲಿಯೇ ಹೆಲ್ತ್ ಬುಲೆಟಿನ್