Latest Videos

52 ಗ್ರಾಮ್‌ ಕಡಿಮೆ ಬಿಸ್ಕೆಟ್‌ ತುಂಬಿದ್ದಕ್ಕೆ ಬ್ರಿಟಾನಿಯಾ ಕಂಪನಿಗೆ ಬಿತ್ತು ಭಾರಿ ದಂಡ!

By Santosh NaikFirst Published May 23, 2024, 4:35 PM IST
Highlights

ಪ್ಯಾಕ್‌ ಮೇಲೆ ಬರೆದಿರುವ ತೂಕಕ್ಕಿಂತ ಕಡಿಮೆ ತೂಕದ ಬಿಸ್ಕೆಟ್‌ಗಳ ಪ್ಯಾಕ್‌ಅನ್ನು ಮಾರಾಟ ಮಾಡಿದ್ದ ಕಾರಣಕ್ಕೆ ಮಲ್ಟಿನ್ಯಾಷನಲ್‌ ಫುಡ್‌ ಪ್ರಾಡಕ್ಟ್ಸ್‌ ಕಂಪನಿ ಬ್ರಿಟಾನಿಯಾಗೆ ಗ್ರಾಹಕ ನ್ಯಾಯಾಲಯ 60 ಸಾವಿರ ರೂಪಾಯಿ ದಂಡ ವಿಧಿಸಿದೆ.

ಕೊಚ್ಚಿ (ಮೇ.23):  ತ್ರಿಶೂರ್‌ನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬ್ರಿಟಾನಿಯಾ ಇಂಡಸ್ಟ್ರೀಸ್‌ ಹಾಗೂ ಕಡಿಮೆ ತೂಕದ ಬ್ರಿಟಾನಿಯಾ ಬಿಸ್ಕಟ್‌ಅನ್ನು ಮಾರಾಟ ಮಾಡಿದ ಬೇಕರಿಗೆ 60 ಸಾವಿರ ರೂಪಾಯಿ ದಂಡವನ್ನು ಗ್ರಾಹಕನಿಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ. ಗ್ರಾಹಕ ಖರೀದಿ ಮಾಡಿದ ಬಿಸ್ಕೆಟ್‌ ಪ್ಯಾಕ್‌ನ ತೂಕ 300 ಗ್ರಾಮ್‌ ಇರಬೇಕು. ಆದರೆ, ಗ್ರಾಹಕ ಇದನ್ನು ತೂಕ ಮಾಡಿದಾಗ 52 ಗ್ರಾಮ್‌ ಕಡಿಮೆ ತೂಕ ಬಂದಿದೆ. ಆ ಕಾರಣಕ್ಕಾಗಿ ಬ್ರಿಟಾನಿಯಾ ಇಂಡಸ್ಟ್ರಿಸ್‌ ಹಾಗೂ ಬಿಸ್ಕೆಟ್‌ ಮಾರಾಟ ಮಾಡಿದ ಬೇಕರಿ ಗ್ರಾಹಕರಿಗೆ 60 ಸಾವಿರ ರೂಪಾಯಿ ದಂಡ ನೀಡಬೇಕು ಎಂದು ತಿಳಿಸಿದೆ. ಅಧ್ಯಕ್ಷ ಸಿ ಟಿ ಸಾಬು ಮತ್ತು ಸದಸ್ಯರಾದ ಶ್ರೀಜಾ ಎಸ್ ಮತ್ತು ರಾಮ್ ಮೋಹನ್ ಆರ್ ಅವರನ್ನೊಳಗೊಂಡ ಪೀಠವು ಪ್ಯಾಕೆಟ್‌ಗಳ ಮೇಲೆ ಬರೆದಿರುವ 300 ಗ್ರಾಂ ಘೋಷಿತ ಪ್ರಮಾಣಕ್ಕೆ ಹೋಲಿಸಿದರೆ ಬಿಸ್ಕತ್ತು ಪ್ಯಾಕೆಟ್‌ಗಳ ತೂಕದಲ್ಲಿ ಗಮನಾರ್ಹ ಕೊರತೆಯಿದೆ ಎಂದು ಗಮನಿಸಿದೆ.

ಬಿಸ್ಕೆಟ್‌ನ ಎಂಓ1 ಪ್ಯಾಕೇಜ್‌ನಲ್ಲಿ ಬಿಸ್ಕೆಟ್‌ಗಳ ಪ್ರಮಾಣ ಕರಿಮಡ ಇದೆ. ಇದರಲ್ಲಿ 300 ಗ್ರಾಮ್‌ಗಳ ಬಿಸ್ಕೇಟ್‌ ಇರಬೇಕು. ಆದರೆ, ಗ್ರಾಹಕ ಇದನ್ನು ತೂಕ ಮಾಡಿದಾಗ 248 ಗ್ರಾಮ್‌ ಮಾತ್ರವೇ ಬಂದಿದೆ ಎಂದು 2023ರ ಸೆಪ್ಟೆಂಬರ್‌ 26 ರಂದು ತಿಳಿಸಲಾಗಿತ್ತು. ಬ್ರಿಟಾನಿಯಾ ತಯಾರಿಸಿದ "ಬ್ರಿಟಾನಿಯಾ ನ್ಯೂಟ್ರಿ ಚಾಯ್ಸ್ ಥಿನ್ ಆರೋ ರೂಟ್ ಬಿಸ್ಕತ್" ನ ಎರಡು ಪ್ಯಾಕೆಟ್‌ಗಳನ್ನು ತಲಾ ₹ 40 ಕ್ಕೆ ಖರೀದಿಸಿದ ಜಾರ್ಜ್ ಥಟ್ಟಿಲ್ (ದೂರುದಾರ) ಎಂಬುವರು ನೀಡಿದ ದೂರಿನ ಮೇರೆಗೆ ಈ ಆದೇಶವನ್ನು ನೀಡಲಾಗಿದೆ. ಪ್ಯಾಕೇಜಿಂಗ್‌ನಲ್ಲಿ ತಯಾರಕರು ಮುದ್ರಿಸಿದಂತೆ ತಲಾ 300 ಗ್ರಾಂ ತೂಕವಿದೆ ಎಂಬ ನಂಬಿಕೆಯೊಂದಿಗೆ ಅವರು ಚುಕ್ಕಿರಿ ರಾಯಲ್ ಬೇಕರಿಯಿಂದ ಬಿಸ್ಕತ್‌ಗಳನ್ನು ಖರೀದಿ ಮಾಡಿದ್ದರು. ಆದರೆ, ಈ ಪ್ಯಾಕೆಟ್‌ಗಳ ತೂಕ  ಕ್ರಮವಾಗಿ 268 ಗ್ರಾಂ ಮತ್ತು 248 ಗ್ರಾಂ ಇತ್ತು ಎಂದು ಹೇಳಲಾಗಿದೆ.

ಬಳಿಕ ಜಾರ್ಜ್ ಅವರು ತ್ರಿಶೂರ್‌ನ ಕಾನೂನು ಮಾಪನಶಾಸ್ತ್ರದ ಫ್ಲೈಯಿಂಗ್ ಸ್ಕ್ವಾಡ್‌ಗೆ ಸಹಾಯಕ ನಿಯಂತ್ರಕರಿಗೆ ದೂರು ಸಲ್ಲಿಸಿದರು, ನಂತರ ಅವರು ತೂಕದ ಕೊರತೆಯನ್ನು ಪರಿಶೀಲಿಸಿ ದೃಢಪಡಿಸಿದರು. ನಂತರ ಅವರು ತ್ರಿಶೂರ್‌ನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು (ಜಿಲ್ಲಾ ಆಯೋಗ) ಸಂಪರ್ಕಿಸಿದರು ಮತ್ತು ಅಂತಹ ಕಾನೂನುಬಾಹಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳದಂತೆ ವಿರುದ್ಧ ಪಕ್ಷಗಳನ್ನು ನಿರ್ಬಂಧಿಸಲು ಆದೇಶಿಸುವಂತೆ ಕೋರಿ ಗ್ರಾಹಕ ದೂರು ಸಲ್ಲಿಸಿದರು ಮತ್ತು ತನಗೆ ಉಂಟಾದ ಆರ್ಥಿಕ, ದೈಹಿಕ ಮತ್ತು ಮಾನಸಿಕ ನಷ್ಟಕ್ಕೆ ಪರಿಹಾರವನ್ನು ಕೋರಿದ್ದರು.

ಪಾರ್ಲೆ ಬ್ರಿಟಾನಿಯಾ ಸಮರ: ಜಾಹೀರಾತು ಬದಲಿಸುವಂತೆ ಪಾರ್ಲೆಗೆ ಹೈಕೋರ್ಟ್ ಆದೇಶ

ನೋಟಿಸ್‌ಗಳನ್ನು ನೀಡಿದ ನಂತರವೂ, ಬ್ರಿಟಾನಿಯಾ ಮತ್ತು ಬೇಕರಿ (ವಿರುದ್ಧ ಪಕ್ಷಗಳು) ಎರಡೂ ತಮ್ಮ ಲಿಖಿತ ಹೇಳಿಕೆಗಳನ್ನು ಜಿಲ್ಲಾ ಆಯೋಗದ ಮುಂದೆ ಸಲ್ಲಿಸಲು ವಿಫಲವಾಗಿವೆ ಎಂದು ಆಯೋಗವು ಗಮನಿಸಿದೆ. ಆದ್ದರಿಂದ, ಆಯೋಗವು ದೂರುದಾರರ ನಷ್ಟಕ್ಕೆ ಪರಿಹಾರವಾಗಿ 50 ಸಾವಿರ ರೂಪಾಯಿ ನೀಡಬೇಕು ಹಾಗೂ ಅವರು ಮಾಡಿದ ಕಾನೂನು ಹೋರಾಟಕ್ಕಾಗಿ 10 ಸಾವಿರ ರೂಪಾಯಿ ಪಾವತಿ ಮಾಡುವಂತೆ ತಿಳಿಸಿದೆ.

ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳು ಪತ್ತೆ!

click me!