ಪ್ರಯಾಣಿಕನ ಜೊತೆ ಚಾಲಕ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಎಸಿ ಹಾಕಲು ಹೇಳಿದರೆ ಪ್ರಯಾಣಿಕನ ವಿರುದ್ಧವೇ ಮುಗಿಬಿದ್ದಿದ್ದಾನೆ. ಜೊತೆಗೆ ಶುಚಿಯಿಲ್ಲದ ಕಾರಿನಲ್ಲಿ ಕೆಟ್ಟ ವಾಸನೆ ಬೇರೆ. ಈ ಕುರಿತು ಪ್ರಕರಣ ದಾಖಲಿಸಿದ ಗ್ರಾಹಕನ ಪರವಾಗಿ ಮಹತ್ವದ ತೀರ್ಪು ಬಂದಿದೆ. ಗ್ರಾಹಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಓಲಾಗೆ ಆದೇಶಿಸಲಾಗಿದೆ.
ಹೈದರಾಬಾದ್(ಏ.22) ಆ್ಯಪ್ ಆಧಾರಿತ ಟ್ಯಾಕ್ಸಿ ಜನರ ಜೀವನ ಸುಲಭಗೊಳಿಸಿದೆ. ಚೌಕಾಸಿ ಇಲ್ಲ, ಬುಕ್ ಮಾಡಿದರೆ ಸಾಕು. ಆದರೆ ಹಲವು ಬಾರಿ ಪ್ರಯಾಣಿಕರ ಜೊತೆ ಚಾಲಕರ ಅನುಚಿತ ವರ್ತನೆ, ಗೂಂಡಾ ನಡೆಗಳು ವರದಿಯಾಗಿದೆ. ಇದೀಗ ಹೈದರಾಬಾದ್ ಪ್ರಯಾಣಿಕ ಓಲಾ ಬುಕ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ. ಚಾಲನಕ ಗೂಂಡಾ ವರ್ತನೆ, ಗಲೀಜಾಗಿದ್ದ ಕಾರಿನಲ್ಲಿ ಕೆಟ್ಟ ವಾಸನೆಯಲ್ಲೇ ಪ್ರಯಾಣ ಮಾಡಬೇಕಾಯಿತು. ಆದರೆ ಪ್ರಯಾಣದ ಬಳಿಕ ದೂರು ದಾಖಲಿಸಿದ ಪ್ರಯಾಣಿಕನಿಗೆ ಮಹತ್ವದ ಗೆಲುವು ಸಿಕ್ಕಿದೆ. ಪ್ರಯಾಣಿಕನಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಓಲಾಗೆ ಸೂಚಿಸಿದೆ.
ಹೈದರಾಬಾದ್ ನಿವಾಸಿ ಜಬೇಜ್ ಸ್ಯಾಮ್ಯುಯೆಲ್ ಓಲಾ ಬುಕ್ ಮಾಡಿದ್ದಾರೆ. ಪತ್ನಿ ಹಾಗೂ ಆಪ್ತ ಸಹಾಯಕರ ಜೊತೆ ನಗರದ ಕೆಲ ಭಾಗಕ್ಕೆ ಭೇಟಿ ನೀಡಲು ಓಲಾ ಕ್ಯಾಬ್ ಬುಕ್ ಮಾಡಲಾಗಿತ್ತು. ಕೆಲ ಹೊತ್ತಲ್ಲಿ ಓಲಾ ಬ್ಯಾಕ್ ಆಗಮಿಸಿದೆ. ಕಾರು ಹತ್ತಿದ ಜಬೇಜ್ ಸ್ಯಾಮ್ಯುಲ್ ಹಾಗೂ ಇತರರಿಗೆ ಸಂಕಷ್ಟ ಶುರುವಾಗಿದೆ. ಕಾರಿನೊಳಗೆ ಕಸ, ಕೆಟ್ಟ ವಾಸನೆಯಿಂದ ಕುಳಿತು ಕೊಳ್ಳಲಾಗದ ಪರಿಸ್ಥಿತಿ, ಇತ್ತ ಎಸಿ ಆನ್ ಮಾಡುವಂತೆ ಹೇಳಿದರೆ ಚಾಲಕನ ಗದರಿಸಿದ್ದಾನೆ.
8 ಕಿ.ಮಿಗೆ 1,334 ರೂ ಚಾರ್ಜ್ ಮಾಡಿ ಉಬರ್, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ!
ಚಾಲಕನ ಮಾತುಗಳು, ವರ್ತನೆಗಳಿಂದ ಪ್ರಯಾಣಿಕರು ಬೇಸತ್ತಿದ್ದಾರೆ. ಇತ್ತ ಕೆಟ್ಟ ವಾಸನೆ ಬೇರೆ. ಹೀಗಾಗಿ 4 ರಿಂದ 5 ಕಿಲೋಮೀಟರ್ ದೂರ ಪ್ರಯಾಣ ಮಾಡುತ್ತಿದ್ದಂತೆ ಕ್ಯಾಬ್ ನಿಲ್ಲಿಸಿ ವಾಹನದಿಂದ ಇಳಿದಿದ್ದಾರೆ. ಆರಂಭದಲ್ಲೇ ವಾಹನದಿಂದ ಇಳಿದ ಕಾರಣ ಪಾವತಿ ಮಾಡದೇ ಮತ್ತೊಂದು ವಾಹನದಲ್ಲಿ ತೆರಳಿದ್ದಾರೆ. ಆದರೆ ಜಬೇಜ್ ಈ ಘಟನೆಯನ್ನು ಇಲ್ಲಿಗೆ ಬಿಡಲು ತಯಾರಿರಲಿಲ್ಲ.
ಓಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ ಜಬೇಜ್‌ಗೆ ಆಘಾತವಾಗಿದೆ. ರೈಡ್ ಬಿಲ್ ಪಾವತಿ ಮಾಡಿದ ಬಳಿಕ ಈ ಸಮಸ್ಯೆ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಬಿಲ್ ಪಾವತಿ ಮಾಡಿದ ಜಬೇಜ್‌ಗೆ ನ್ಯಾಯ ಸಿಗಲಿಲ್ಲ. ಓಲಾ ಆ್ಯಪ್ ಆಧಾರಿತ ಸೇವೆ ನೀಡುವ ಸಂಸ್ಥೆ. ಇಲ್ಲಿ ಸಾವಿರಾರು ಚಾಲಕರಿದ್ದಾರೆ. ಎಲ್ಲಾ ಚಾಲಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಉತ್ತರಿಸಿತ್ತು. ಇದರಿಂದ ರೊಚ್ಚಿಗೆದ್ದ ಜಬೇಜ್ ನೇರವಾಗಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ. ಇರುವ ದಾಖಲೆ ಸಲ್ಲಿಸಿದ್ದಾರೆ.
ಸೂಪರ್ ಮಾರ್ಕೆಟ್‌ನ ಆಹಾರ ತಿಂದು ಫುಡ್ ಪಾಯ್ಸನ್, ಬೆಂಗಳೂರಿನ ವ್ಯಕ್ತಿಗೆ ಸಿಕ್ತು 10,000 ರೂ. ಪರಿಹಾರ
ಈ ಕುರಿತು ವಿಚಾರಣೆ ನಡೆಸಿದ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕನ ಪರವಾಗಿ ತೀರ್ಪು ನೀಡಿದೆ. ಓಲಾ ಬುಕ್ ಮಾಡಿ ಅರ್ಧಕ್ಕೆ ಇಳಿದ ಗ್ರಾಹಕರನಿಗೆ ಬರೋಬ್ಬರಿ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದೆ.