ಕ್ಯಾರಿ ಬ್ಯಾಗ್‌ಗೆ 12 ರೂ : ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 21,000 ರೂ. ಪರಿಹಾರ

By Anusha KbFirst Published Apr 24, 2022, 11:59 AM IST
Highlights
  • ಅಂಗಡಿಯ ಜಾಹೀರಾತಿದ್ದ ಕ್ಯಾರಿ ಬ್ಯಾಗ್‌ಗೆ 12 ರೂ ಶುಲ್ಕ
  • ಕೋರ್ಟ್ ಮೆಟ್ಟಿಲೇರಿದ ಗ್ರಾಹಕ
  • ಗ್ರಾಹಕನಿಗೆ 21,000 ರೂ. ಪಾವತಿಸುವಂತೆ ಕೇಳಿದ ಕೋರ್ಟ್‌

ವಿಶಾಖಪಟ್ಟಣ: ಕ್ಯಾರಿ ಬ್ಯಾಗ್‌ಗೆ 12 ರೂಪಾಯಿ ಶುಲ್ಕ ವಿಧಿಸಿದ್ದಕ್ಕಾಗಿ ಆಂಧ್ರಪ್ರದೇಶದ (Andhra Pradesh) ವೈಜಾಗ್ ನಗರದ (Vizag city) ಗ್ರಾಹಕ ನ್ಯಾಯಾಲಯವು  ಗ್ರಾಹಕರಿಗೆ  21,000 ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಸೆಂಟ್ರಲ್‌ ಮಾಲ್‌ಗೆ ಆದೇಶಿಸಿದೆ. ಎಫ್‌ಎಲ್‌ಎಫ್‌ಎಲ್‌ನ ವಿಭಾಗವಾದ ಮಲ್ಟಿ-ಬ್ರಾಂಡ್ ಬಟ್ಟೆ ಚಿಲ್ಲರೆ ಮಾರಾಟ ಸಂಸ್ಥೆ ಸೆಂಟ್ರಲ್‌ಗೆ ಮಾಲ್‌ಗೆ ಕೋರ್ಟ್‌ ಈ ಆದೇಶ ನೀಡಿದೆ. 

ವಿಶಾಖಪಟ್ಟಣಂ ಜಿಲ್ಲಾ ಗ್ರಾಹಕರ ಆಯೋಗದ (Visakhapatnam District Consumers Commission) ಸದಸ್ಯರಾದ ರಹಿಮುನ್ನೀಸಾ ಬೇಗಂ (Rahimunnisa Begum) ಮತ್ತು ಅಧ್ಯಕ್ಷ ವರ್ರಿ ಕೃಷ್ಣ ಮೂರ್ತಿ (Varri Krishna Murthy) ಅವರು ವಿಜಾಗ್ ನಗರದ ನಿವಾಸಿಯಾ ಸೀಪನಾ ರಾಮರಾವ್ (Seepana Rama Rao)ಎಂಬ ವಕೀಲರಿಗೆ ವಿಧಿಸಲಾದ 12 ರೂ.ಗಳನ್ನು ಹಿಂದಿರುಗಿಸುವಂತೆ ಚಿಲ್ಲರೆ ವ್ಯಾಪಾರಿಯನ್ನು ಕೇಳಿದರು. ನಂತರ ವಾದ ವಿವಾದಗಳು ನಡೆದು 21,000  ಹಣವನ್ನು ಗ್ರಾಹಕರಿಗೆ ಪಾವತಿಸುವಂತೆ ಗ್ರಾಹಕರ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಬ್ಯಾಟ್‌ ಬದಲು ಕೋಟ್‌ ಕೊಟ್ಟ ಫ್ಲಿಪ್‌ಕಾರ್ಟ್‌ಗೆ 1 ಲಕ್ಷ ದಂಡ!

ಗ್ರಾಹಕರ ಆಯೋಗವು ಗ್ರಾಹಕರ ಮನವಿಯನ್ನು ಭಾಗಶಃ ಅನುಮೋದಿಸಿದೆ. ಮತ್ತು ಗ್ರಾಹಕರಿಗೆ ನೀಡಿದ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ 21,000 ರೂ ಮತ್ತು ಕಾನೂನು ವೆಚ್ಚಕ್ಕಾಗಿ ರೂ 1,500 ಪಾವತಿಸಲು ಚಿಲ್ಲರೆ ವ್ಯಾಪಾರಿಗೆ ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ದೂರುದಾರರ ಪ್ರಕಾರ, ಅವರು ಜುಲೈ 14, 2019 ರಂದು ಚಿಲ್ಲರೆ ವ್ಯಾಪಾರಿಯಿಂದ ರೂ 628.96 ಮೌಲ್ಯದ ಬಟ್ಟೆಗಳನ್ನು ಖರೀದಿಸಿದ್ದಾರೆ. ಕ್ಯಾಷಿಯರ್ ಬಟ್ಟೆಗಳನ್ನು ಕ್ಯಾರಿ ಬ್ಯಾಗ್‌ನಲ್ಲಿ ಇರಿಸಿದರು ಮತ್ತು ಕ್ಯಾರಿ ಬ್ಯಾಗ್‌ನ (carry bag) ವೆಚ್ಚವಾಗಿ ರೂ 12 ಪಾವತಿಸಲು ದೂರುದಾರರಿಗೆ ಹೇಳಿದರು. ಆದರೆ ಈ ಕ್ಯಾರಿಬ್ಯಾಗ್‌ನಲ್ಲಿ  ಚಿಲ್ಲರೆ ವ್ಯಾಪಾರಿಯ ಲೋಗೋ ಇತ್ತು. ಈ ಹಿನ್ನೆಲೆಯಲ್ಲಿ ಲೋಗೋ ಇರುವುದನ್ನು ಪ್ರಶ್ನಿಸಿ  ಬ್ಯಾಗ್‌ಗೆ ಹಣ ನೀಡಲು ಗ್ರಾಹಕರು ನಿರಾಕರಿಸಿದರು. ಆದರೆ ಕ್ಯಾಷಿಯರ್ ಹಣ ಪಾವತಿಗೆ ಒತ್ತಾಯಿಸಿದರು. 

ನ್ಯಾನೋ ಕಾರಿನ ಪಾರ್ಕಿಂಗ್‌ಗೆ 91,000 ರೂ ದಂಡ; ಕೋರ್ಟ್ ಆದೇಶಕ್ಕೆ ಕಂಗಾಲಾದ ಒಡತಿ!

ನಂತರ ದೂರುದಾರರು ಹಣ ಪಾವತಿಸಿ ಅಂಗಡಿ ವ್ಯವಸ್ಥಾಪಕರ ಬಳಿಯೂ ಮಾತನಾಡಿದರು. ಆದರೆ ಉಚಿತವಾಗಿ ಕ್ಯಾರಿ ಬ್ಯಾಗ್ ನೀಡಲು ಅವರೂ ನಿರಾಕರಿಸಿದರು. ನಂತರ, ದೂರುದಾರರು ಕ್ಯಾರಿ ಬ್ಯಾಗ್‌ನಲ್ಲಿ ವ್ಯಾಪಾರಿಯ ಲಾಂಛನವನ್ನು ಹೊಂದಿದ್ದು, ಬ್ಯಾಗ್‌ನ ಎರಡೂ ಬದಿಗಳಲ್ಲಿ ಮುದ್ರಿಸಿದ್ದರು. ಅಂಗಡಿಯ ಜಾಹೀರಾತಿಗೆ ಬಳಸಿದ ಕ್ಯಾರಿ ಬ್ಯಾಗ್‌ಗೆ ಶುಲ್ಕ ವಿಧಿಸುವುದು ಕಾನೂನು ಬಾಹಿರ ಎಂದು ದೂರುದಾರರು ವಿವರಿಸಿದರೂ, ಅಂಗಡಿಯ ಮ್ಯಾನೇಜರ್ ಅವರ ಮೇಲೆ ಕೂಗಿದರು. ಹೀಗಾಗಿ ಈ ಮಾನಸಿಕ ಕಿರುಕುಳಕ್ಕಾಗಿ (mental harassment)ಪರಿಹಾರವನ್ನು ಪಾವತಿಸಲು ಚಿಲ್ಲರೆ ವ್ಯಾಪಾರಿಗಳಿಗೆ ನಿರ್ದೇಶನ ಕೋರಿ ಗ್ರಾಹಕರು ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದರು.

ಈ ಪ್ರಕರಣದ ವಿಚಾರಣೆ ನಡೆಸಿದ ವಿಶಾಖಪಟ್ಟಣಂ ಜಿಲ್ಲಾ ಗ್ರಾಹಕರ ಆಯೋಗವು ಚಿಲ್ಲರೆ ವ್ಯಾಪಾರಿಗೆ ಪರಿಹಾರವಾಗಿ 21,000 ರೂ, ಕಾನೂನು ವೆಚ್ಚವಾಗಿ ರೂ 1,500 ಮತ್ತು ಬ್ಯಾಗ್‌ಗಾಗಿ ವಿಧಿಸಿದ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
 

click me!