ಸಾಂವಿಧಾನಿಕ ಹಕ್ಕು ಅಧ್ಯಾಯಕ್ಕೆ CBSE ಕೊಕ್‌: ಶೇ. 30 ಪಠ್ಯಕ್ಕೆ ಕತ್ತರಿ

By Kannadaprabha News  |  First Published Jul 9, 2020, 8:23 AM IST

ಕೊರೋನಾ ವೈರಸ್‌ ಕಾರಣ ಸಿಬಿಎಸ್‌ಇ ಪಠ್ಯಕ್ರಮದಿಂದ ಶೇ.30ರಷ್ಟುಪಠ್ಯ ಕಡಿತಗೊಳಿಸುವ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಹಲವು ಮಹತ್ವದ ಪಾಠಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ರಾಷ್ಟ್ರೀಯತೆ, ಜಾತ್ಯತೀತತೆ, ಪೌರತ್ವ, ನೋಟು ರದ್ದತಿ ಹಾಗೂ ಸಾಂವಿಧಾನಿಕ ಹಕ್ಕುಗಳು ಎಂಬ ಅಧ್ಯಾಯಗಳನ್ನು ಸಿಬಿಎಸ್‌ಇ ಕೈಬಿಟ್ಟಿದೆ. 


ನವದೆಹಲಿ(ಜು.09): ಕೊರೋನಾ ವೈರಸ್‌ ಕಾರಣ ಸಿಬಿಎಸ್‌ಇ ಪಠ್ಯಕ್ರಮದಿಂದ ಶೇ.30ರಷ್ಟುಪಠ್ಯ ಕಡಿತಗೊಳಿಸುವ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಹಲವು ಮಹತ್ವದ ಪಾಠಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ.

ರಾಷ್ಟ್ರೀಯತೆ, ಜಾತ್ಯತೀತತೆ, ಪೌರತ್ವ, ನೋಟು ರದ್ದತಿ ಹಾಗೂ ಸಾಂವಿಧಾನಿಕ ಹಕ್ಕುಗಳು ಎಂಬ ಅಧ್ಯಾಯಗಳನ್ನು ಸಿಬಿಎಸ್‌ಇ ಕೈಬಿಟ್ಟಿದೆ. ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

1 ತಿಂಗಳೊಳಗೆ ಗುತ್ತಿಗೆ ವೈದ್ಯರು ಕಾಯಂ, ಮುಷ್ಕರ ನಿಲ್ಲಿಸಿ ವೈದ್ಯರು ಇಂದು ಕೆಲಸಕ್ಕೆ ಹಾಜರ್

ಶೇ.30ರಷ್ಟುಪಠ್ಯ ಕಡಿತಗೊಳಿಸುವ ತೀರ್ಮಾನದ ಅಧಿಸೂಚನೆಯನ್ನು ಬುಧವಾರ ಹೊರಡಿಸಲಾಗಿದೆ. 10ನೇ ತರಗತಿ ಪಠ್ಯದಿಂದ ಪ್ರಜಾಸತ್ತೆ, ವೈವಿಧ್ಯತೆ, ಲಿಂಗ, ಧರ್ಮ, ಪ್ರಜಾಸತ್ತೆಯ ಸವಾಲುಗಳು ಎಂಬ ಪಾಠಗಳನ್ನು ತೆಗೆದುಹಾಕಲಾಗಿದೆ. 11ನೇ ತರಗತಿ ಪಠ್ಯದಲ್ಲಿ ಒಕ್ಕೂಟ ವ್ಯವಸ್ಥೆ (ಫೆಡರಲಿಸಂ), ಪೌರತ್ವ, ರಾಷ್ಟ್ರೀಯತೆ, ಜಾತ್ಯತೀತತೆ ಹಾಗೂ ಭಾರತದಲ್ಲಿನ ಸ್ಥಳೀಯ ಆಂದೋಲನ ಎಂಬ ಅಧ್ಯಾಯಗಳನ್ನು ಕೈಬಿಡಲಾಗಿದೆ. 12ನೇ ತರಗತಿ ಪಠ್ಯದಲ್ಲಿ ಪಾಕಿಸ್ತಾನ, ಮ್ಯಾನ್ಮಾರ್‌, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ನೇಪಾಳ ಜತೆಗಿನ ಭಾರತದ ಸಂಬಂಧ, ಭಾರತದ ಆರ್ಥಿಕ ಅಭಿವೃದ್ಧಿಯ ಬದಲಾಗುವ ಗತಿ, ಭಾರತದಲ್ಲಿನ ಸಾಮಾಜಿಕ ಆಂದೋಲನಗಳು ಹಾಗೂ ನೋಟು ರದ್ದತಿ ಎಂಬ ಪಾಠಗಳನ್ನು ಅಳಿಸಲಾಗಿದೆ.

ಧೋವಲ್ ಮಿಂಚಿನ ಮಾತುಕತೆ: ಗಡಿಯಿಂದ 2 ಕಿ.ಮೀ. ಹಿಂದೆ ಸರಿದ ಚೀನಾ ಸೇನೆ

ವಿದ್ಯಾರ್ಥಿಗಳ ಮೇಲೆ ಭಾರವಾಗಬಾರದು ಎಂಬ ಕಾರಣಕ್ಕೆ ಪಠ್ಯಕ್ರಮ ಕಡಿತಗೊಳಿಸಲಾಗಿದೆ. ಆದರೆ ಪಠ್ಯಗಳಲ್ಲಿನ ಮೂಲ ಮೌಲ್ಯಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸ್ಪಷ್ಟಪಡಿಸಿದೆ.

click me!