ಮೇ 19ರಿಂದ 6 ದಿನ ಮೋದಿ ವಿದೇಶ ಪ್ರವಾಸ: 71 ಸಾವಿರ ಜನರಿಗೆ ಉದ್ಯೋಗ ಪತ್ರ ವಿತರಣೆ

By BK Ashwin  |  First Published May 17, 2023, 8:37 AM IST

ಮೇ 19ರಿಂದ 21ರವರೆಗೆ ಜಪಾನ್‌ನ ಹಿರೋಶಿಮಾ ನಗರದಲ್ಲಿ ನಡೆಯುವ ಜಿ7 ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ನ್ಯೂಗಿನಿಯಾಗೆ ಭೇಟಿ ನೀಡಲಿದ್ದು, ಇಂಡೋ ಪೆಸಿಫಿಕ್‌ ಸಭೆಯಲ್ಲಿ ಭಾಗಿಯಾಗಿ ಬಳಿಕ ಕ್ವಾಡ್‌ ಸಭೆಗಾಗಿ ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.


ನವದೆಹಲಿ (ಮೇ 17, 2023): ಪ್ರಧಾನಿ ನರೇಂದ್ರ ಮೋದಿ ಅವರು ಮೇ 19ರಿಂದ 6 ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಅವರು 3 ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಜಪಾನ್‌. ಪಪುವಾ ನ್ಯೂ ಗಿನಿಯಾ ಮತ್ತು ಆಸ್ಪ್ರೇಲಿಯಾಗಳಿಗೆ ಮೋದಿ ಭೇಟಿ ನೀಡಲಿದ್ದಾರೆ.

ಮೇ 19ರಿಂದ 21ರವರೆಗೆ ಜಪಾನ್‌ನ ಹಿರೋಶಿಮಾ ನಗರದಲ್ಲಿ ನಡೆಯುವ ಜಿ7 ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ನ್ಯೂಗಿನಿಯಾಗೆ ಭೇಟಿ ನೀಡಲಿದ್ದು, ಇಂಡೋ ಪೆಸಿಫಿಕ್‌ ಸಭೆಯಲ್ಲಿ ಭಾಗಿಯಾಗಿ ಬಳಿಕ ಕ್ವಾಡ್‌ ಸಭೆಗಾಗಿ ಆಸ್ಪ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.

Tap to resize

Latest Videos

ಇದನ್ನು ಓದಿ: Karnataka Assembly Election 2023: ಜನರ ಆಶೋತ್ತರಗಳನ್ನು ಕಾಂಗ್ರೆಸ್‌ ಈಡೇರಿಸಲಿ ಎಂದ ಮೋದಿ

ನೇಮಕಾತಿಯಲ್ಲಿನ ಬದಲಾವಣೆಯಿಂದ ಭ್ರಷ್ಟಾಚಾರ, ಪಕ್ಷಪಾತ ಅಂತ್ಯ: ಮೋದಿ
ನೇಮಕಾತಿ ವ್ಯವಸ್ಥೆಯಲ್ಲಿ ತರಲಾಗಿರುವ ಬದಲಾವಣೆಗಳು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ಕೊನೆಗೊಳಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಕೇಂದ್ರ ಸರ್ಕಾರದ ‘ಉದ್ಯೋಗಮೇಳ’ ಅಡಿಯಲ್ಲಿ 71 ಸಾವಿರ ಜನರಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಯೋಗ ಪತ್ರಗಳನ್ನು ನೀಡಿ ಅವರು ಮಾತನಾಡಿದರು.

ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಫಲಿತಾಂಶ ಪ್ರಕಟವಾಗುವವರೆಗೆ ಎಲ್ಲ ಪ್ರಕ್ರಿಯೆಗಳನ್ನು ಆನ್ಲೈನ್‌ನಲ್ಲಿ ನಡೆಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಉದ್ಯೋಗವಕಾಶವನ್ನು ಹೆಚ್ಚಿಸಿದ್ದು, ಜೊತೆಗೆ ಮೂಲಭೂತ ಸೌಕರ್ಯಗಳನ್ನು ಹೆಚ್ಚು ಮಾಡಿದೆ. ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ ಮಂತ್ರದೊಂದಿಗೆ ಆರಂಭವಾದ ಪ್ರಯಾಣ ‘ವಿಕಸಿತ ಭಾರತ’ಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ದೂರು ನೀಡಬೇಕೆಂದ ಪಾಕ್‌ ನಟಿ: ದೆಹಲಿ ಪೊಲೀಸರ ಪ್ರತಿಕ್ರಿಯೆ ವೈರಲ್‌

ಇದೇ ವೇಳೆ ಇತ್ತೀಚೆಗೆ ವಾಲ್‌ಮಾರ್ಟ್‌, ಆ್ಯಪಲ್‌, ಫಾಕ್ಸ್‌ಕಾನ್‌ ಮತ್ತು ಸಿಸ್ಕೋ ಕಂಪನಿಗಳ ಸಿಇಒಗಳ ಜೊತೆ ಮಾತನಾಡಿದ ವಿಷಯವನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಹೂಡಿಕೆ ಮತ್ತು ಉದ್ಯಮದ ಕುರಿತಾಗಿ ಸಕಾರಾತ್ಮಕ ಭಾವನೆ ಇದೆ ಎಂದು ಹೇಳಿದರು. ಅಲ್ಲದೇ 2018-19ನೇ ಸಾಲಿನಿಂದ ಇಲ್ಲಿಯವರೆಗೆ 4.5 ಕೋಟಿ ಜನರು ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: ಮೋದಿ ರೋಡ್‌ ಶೋ ವೇಳೆ ಮುಸ್ಲಿಂ ಮಹಿಳೆ ಕೈಯಲ್ಲಿ ಜೈ ಬಜರಂಗಿ ಪೋಸ್ಟರ್‌!

click me!