'ಕೈ' ಹಿಡಿಯಲಿದೆಯಂತೆ ಆಪ್: ಕಾಂಗ್ರೆಸ್ ಮೊಗಸಾಲೆಯಿಂದ ಮೈತ್ರಿ ಮಾತು!

Suvarna News   | Asianet News
Published : Feb 09, 2020, 04:32 PM ISTUpdated : Feb 09, 2020, 05:33 PM IST
'ಕೈ' ಹಿಡಿಯಲಿದೆಯಂತೆ ಆಪ್: ಕಾಂಗ್ರೆಸ್ ಮೊಗಸಾಲೆಯಿಂದ ಮೈತ್ರಿ ಮಾತು!

ಸಾರಾಂಶ

ಫಲಿತಾಂಶಕ್ಕೂ ಮೊದಲೇ ಕೇಳಿಬಂದ ಮೈತ್ರಿ ಮಾತು| ಆಪ್-ಕಾಂಗ್ರೆಸ್ ನಡುವೆ ಮೈತ್ರಿ ಸಾಧ್ಯತೆ ಎಂದ ಕೈ ನಾಯಕ| ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ತಲೆಕೆಳಗಾಗಲಿವೆ ಎಂದ ಪಿಸಿ ಚಾಕೋ| ಫಲಿತಾಂಶದ ಆಧಾರದ ಮೇಲೆ ಆಪ್-ಕಾಂಗ್ರೆಸ್ ಮೈತ್ರಿ ಎಂದ ಪಿಸಿ ಚಾಕೋ| 'ಫಲಿತಾಂಶದ ಆಧಾರದ ಮೇಲೆ ಮೈತ್ರಿ ನಿರ್ಧಾರ ಅವಲಂಬನೆ'| ಚುನಾವಣೋತ್ತರ ಸಮೀಕ್ಷೆಗಳು ಸತ್ಯಕ್ಕೆ ದೂರ ಎಂದ ಪಿಸಿ ಚಾಕೋ|

ನವದೆಹಲಿ(ಫೆ.09): ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳ ಬೆನ್ನಲ್ಲೇ,  ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಸಾಧ್ಯತೆಯ ಮಾತುಗಳು ಕೇಳಲಾರಂಭಿಸಿವೆ.

ಈ ಕುರಿತು ಮಾತನಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿಸಿ ಚಾಕೋ, ಫಲಿತಾಂಶದ ಆಧಾರದ ಮೇಲೆ ಆಪ್ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

ಚುನಾವಣಾ ಫಲಿತಾಂಶದ ಆಧಾರದ ಕಾಂಗ್ರೆಸ್-ಆಪ್ ನಡುವಿನ ಮೈತ್ರಿ ನಿರ್ಧಾರ ಅವಲಂಬನೆಯಾಗಿದೆ ಎಂದು ಪಿಸಿ ಚಾಕೋ  ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೋತ್ತರ ಸಮೀಕ್ಷಗಳು ಆಪ್ ಪರವಾಗಿದ್ದರೂ, ಫಲಿತಾಂಶ ಬಂದ ಮೇಲೆ ಮೈತ್ರಿ ಸಂಭವನೀಯತೆಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ ಎಂದು ಪಿಸಿ ಚಾಕೋ ನುಡಿದಿದ್ದಾರೆ. 

ಮುಗಿದ ದೆಹಲಿ ದಂಗಲ್: ರಾಜಧಾನಿ ಈಗ ಸಮೀಕ್ಷೆಗಳ ಜಂಗಲ್!

ಚುನಾವಣೋತ್ತರ ಸಮೀಕ್ಷೆಗಳು ಸತ್ಯಕ್ಕೆ ದೂರವಾವಗಿದ್ದು, ಕಾಂಗ್ರೆಸ್‌ಗೆ ಅಗತ್ಯ ಸ್ಥಾನಗಳು ಲಭಿಸಲಿವೆ ಎಂದು ಪಿಸಿ ಚಾಕೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು