ಸಿಎಎ ಹಿಂಪಡೆಯಿರಿ: ಗೋವಾ ಆರ್ಚ್ ಬಿಷಪ್ ಆಗ್ರಹ!

Suvarna News   | Asianet News
Published : Feb 09, 2020, 03:50 PM IST
ಸಿಎಎ ಹಿಂಪಡೆಯಿರಿ: ಗೋವಾ ಆರ್ಚ್ ಬಿಷಪ್ ಆಗ್ರಹ!

ಸಾರಾಂಶ

ಸಿಎಎ, ಎನ್‌ಆರ್‌ಸಿ ಹಿಂಪಡೆಯುವಂತೆ ಆಗ್ರಹ| ಗೋವಾದ ಕ್ಯಾಥೋಲಿಕ್ ಚರ್ಚ್‌ನ ಆರ್ಚ್ ಬಿಷಪ್ ರೆವರೆಂಡ್ ಫಿಲಿಪ್ ನೆರಿ ಫೆರಾವೋ| ಸಿಎಎ ಧಾರ್ಮಿಕ ಅಸಮಾನತೆ ಸೃಷ್ಟಿಸಲಿದೆ ಎಂದ ರೆವರೆಂಡ್ ಫಿಲಿಪ್ ನೆರಿ ಫೆರಾವೋ| ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಗೆ ತಡೆ ನೀಡಿ ಎಂದ ಫೆರಾವೋ| ದೇಶದ ಜಾತ್ಯಾತೀತ ಸ್ವರೂಪ ಉಳಿಯಲಿ ಎಂದ ಆರ್ಚ್ ಬಿಷಪ್|

ಪಣಜಿ(ಫೆ.09): ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಗೋವಾದ ಕ್ಯಾಥೋಲಿಕ್ ಚರ್ಚ್‌ನ ಆರ್ಚ್ ಬಿಷಪ್ ರೆವರೆಂಡ್ ಫಿಲಿಪ್ ನೆರಿ ಫೆರಾವೋ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿಎಎ ದೇಶದಲ್ಲಿ ಧಾರ್ಮಿಕ ಅಸಮಾನತೆಯನ್ನು ಸೃಷ್ಟಿಸಲಿದ್ದು, ಈ ಕೂಡಲೇ ಕಾನೂನನ್ನು ಹಿಂಪಡೆಯ ಬೇಕು ಎಂದು  ರೆವರೆಂಡ್ ಫಿಲಿಪ್ ನೆರಿ ಫೆರಾವೋ ಆಗ್ರಹಿಸಿದ್ದಾರೆ.

ಅಲ್ಲದೇ ದೇಶಾದ್ಯಂತ ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಯನ್ನು ಕೇಂದ್ರ ಸರ್ಕಾರ ಈ ಕೂಡಲೇ ತಡೆ ಹಿಡಿಯಬೇಕು ಎಂದೂ ರೆವರೆಂಡ್ ಫಿಲಿಪ್ ನೆರಿ ಫೆರಾವೋ ಒತ್ತಾಯಿಸಿದ್ದಾರೆ.

ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಕುಟೀಲ ನೀತಿಯನ್ನು ಬಿಟ್ಟು ದೇಶದ ಜಾತ್ಯಾತೀತ ಸ್ವರೂಪವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿ ಎಂದು ಆರ್ಚ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.

ಸಿಎಎ ವಿರುದ್ಧ ಮಹಾತ್ಮಗಾಂಧಿ ಮೊಮ್ಮಗ ತುಷಾರ್‌ ವಾಗ್ದಾಳಿ

ಭಾರತದ ಬಹುಸಂಸ್ಕೃತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸಿಎಎ ಹಾಗೂ ಎನ್‌ಆರ್‌ಸಿ ನೇರ ದಾಳಿ ಮಾಡಲಿದೆ ಎಂದು ಹೇಳಿರುವ ರೆವರೆಂಡ್ ಫಿಲಿಪ್ ನೆರಿ ಫೆರಾವೋ, ಈ ಕೂಡಲೇ ವಿವಾದಿತ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

90's ಕಿಡ್ಸ್ ಹೊಸ ವರ್ಷದ ರೆಸಲ್ಯೂಶನ್ ಏನಿತ್ತು? ಬಾಯ್‌ ಫ್ರೆಂಡ್ಸ್ ಬೇಕು, ಜೀನ್ಸ್ ಪ್ಯಾಂಟ್ ಹಾಕಬೇಕು...!
India’s top searches of 2025: ಭಾರತೀಯರು ಸದಾ ಯೋಚಿಸೋದು ಏನನ್ನು? ಗೂಗಲ್​ನಿಂದ A to Z ಬಹಿರಂಗ!