ಗೀತಾ ಪ್ರೆಸ್‌ಗೆ 'ಶಾಂತಿ' ಪ್ರಶಸ್ತಿ ಕಾಂಗ್ರೆಸ್‌ನಲ್ಲೇ ಭಿನ್ನ ನಿಲುವು, ನಮಗೆ ಹಣ ಬೇಡ, ಪ್ರಮಾಣಪತ್ರವಷ್ಟೇ ಸಾಕು ಎಂದ ಸಂಸ್ಥೆ!

By Santosh Naik  |  First Published Jun 19, 2023, 6:17 PM IST

ಈ ವರ್ಷ ಶತಮಾನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವ ವಿಶ್ವದ ಅತಿದೊಡ್ಡ ಹಿಂದು ಪುಸ್ತಕಗಳ ಪ್ರಕಾಶಕ ಗೀತಾ ಪ್ರೆಸ್‌ಗೆ ಕೇಂದ್ರ ಸರ್ಕಾರ 2021ರ ಮಹಾತ್ಮ ಗಾಂಧೀಜಿ ಶಾಂತಿ ಪ್ರಶಸ್ತಿ ಘೋಷಣೆ ಮಾಡಿದೆ. ಎಂದಿನಂತೆ ಕಾಂಗ್ರೆಸ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ.


ನವದೆಹಲಿ (ಜೂ.19): ವಿಶ್ವದ ಅತಿದೊಡ್ಡ ಹಿಂದು ಪುಸ್ತಕ ಪ್ರಕಾಶಕ ಸಂಸ್ಥೆಯಾದ ಉತ್ತರ ಪ್ರದೇಶದ ಗೋರಖ್‌ಪುರದ ಗೀತಾ ಪ್ರೆಸ್‌ಗೆ ಕೇಂದ್ರ ಸರ್ಕಾರ 2021ರ ಸಾಲಿನ ಮಹಾತ್ಮ ಗಾಂಧೀಜಿ ಶಾಂತಿ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ನಿರೀಕ್ಷೆಯಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್‌ ರಮೇಶ್‌ ಇದಕ್ಕೆ ವಿರೋಧ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಗೀತಾ ಪ್ರೆಸ್‌ಗೆ ಶಾಂತಿ ಪ್ರಶಸ್ತಿ ನೀಡುವುದು  ಸಾವರ್ಕರ್‌ ಹಾಗೂ ಗೋಡ್ಸೆಗೆ ನೀಡಿದಂತೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇನ್ನೊಂದೆಡೆ ಜೈರಾಮ್‌ ರಮೇಶ್‌ ಹೇಳಿರುವ ಮಾತಿಗೆ ಸ್ವತಃ ಉತ್ತರ ಪ್ರದೇಶ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದೆ. ಈ ಗೌರವಕ್ಕೆ ಭಾಜನರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಗೀತಾ ಪ್ರೆಸ್‌, ಈ ಪ್ರಶಸ್ತಿಯ ಪ್ರಮಾಣ ಪತ್ರ ಮಾತ್ರವೇ ಸಾಕು, ಅದರೊಂದಿಗಿರುವ 1 ಕೋಟಿ ರೂಪಾಯಿ ನಗದು ಬಹುಮಾನ ಬೇಡ ಎಂದು ಹೇಳಿದೆ. 'ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಇದು ನಮಗೆ ಅತ್ಯಂತ ಹೆಮ್ಮೆಯ ಕ್ಷಣ.. ಈ ಪ್ರಶಸ್ತಿಗಾಗಿ ನಾವು ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಆದರೆ, ಯಾವುದೇ ರೀತಿ ದೇಣಿಗೆ ಸ್ವೀಕರಿಸಲು ನಿರಾಕರಿಸಿದ್ದೇವೆ. ಏಕೆಂದರೆ ಇದು ನನ್ನ ತತ್ವ. ಆದರೆ, ಈ ಗೌರವದ ಕುರಿತಾದ ಪ್ರಮಾಣಪತ್ರವನ್ನು ಸ್ವೀಕರಿಸಲಿದ್ದೇವೆ' ಎಂದು ಗೀತಾ ಪ್ರೆಸ್‌ನ ಮ್ಯಾನೇಜರ್‌ ಡಾ. ಲಾಲಮಣಿ ತಿವಾರಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜ್ಯೂರಿ ಸಮಿತಿ, ಅವಿರೋಧ ಗೀತಾ ಪ್ರೆಸ್‌ ಸಂಸ್ಥೆಯನ್ನು ಭಾನುವಾರ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಈ ಪ್ರಶಸ್ತಿಯ ಜೊತೆ ಇರುವ ನಗದು ಹಣವನ್ನು ಬೇರೆ ಕಾರ್ಯಗಳಿಗೆ ಸರ್ಕಾರ ಬಳಸಿಕೊಳ್ಳಬೇಕು ಎಂದು ಗೀತಾ ಪ್ರೆಸ್‌ ತಿಳಿಸಿದ್ದು ಪ್ರಶಸ್ತಿಯು ಫಲಕ ಮತ್ತು ಸೊಗಸಾದ ಸಾಂಪ್ರದಾಯಿಕ ಕರಕುಶಲ/ಕೈಮಗ್ಗದ ವಸ್ತುವನ್ನು ಸಹ ಒಳಗೊಂಡಿದ್ದು ಅದನ್ನು ಸ್ವೀಕರಿಸುವುದಾಗಿ ತಿಳಿಸಿದೆ. 

ಗೀತಾ ಪ್ರೆಸ್ ಅನ್ನು ಗೌರವಿಸುವ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಟೀಕೆ ಮಾಡಿದ್ದು, ಇದು "ಅಪಹಾಸ್ಯ" ಮತ್ತು "ಸಾವರ್ಕರ್ ಮತ್ತು ಗೋಡ್ಸೆಗೆ ಪ್ರಶಸ್ತಿ ನೀಡಿದಂತೆ" ಎಂದು ಹೇಳಿದೆ. "ಈ ವರ್ಷ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಗೋರಖ್‌ಪುರದ ಗೀತಾ ಪ್ರೆಸ್‌ಗೆ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಅಕ್ಷಯ ಮುಕುಲ್ ಅವರ 2015 ರ ಈ ಸಂಘಟನೆಯ ಅತ್ಯಂತ ಉತ್ತಮವಾದ ಜೀವನಚರಿತ್ರೆ ಇದೆ, ಇದರಲ್ಲಿ ಅವರು ಮಹಾತ್ಮರೊಂದಿಗೆ ಹೊಂದಿದ್ದ ಬಿರುಗಾಳಿಯ ಸಂಬಂಧಗಳನ್ನು ಮತ್ತು ಅವರ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಸೂಚಿಯಲ್ಲಿ ಅದು ನಡೆಸಿದ ಹೋರಾಟಗಳನ್ನು ಬಹಿರಂಗಪಡಿಸಿದ್ದಾರೆ" ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಟ್ವೀಟ್‌ ಮಾಡಿದ್ದಾರೆ.

ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮ ಗಾಂಧಿಯವರ 125 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಆದರ್ಶಗಳಿಗೆ ಗೌರವವಾಗಿ 1995 ರಲ್ಲಿ ಸ್ಥಾಪಿಸಲಾದ ವಾರ್ಷಿಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ. ಇತ್ತೀಚಿನ ಪ್ರಶಸ್ತಿ ಪುರಸ್ಕೃತರಲ್ಲಿ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್, ಒಮಾನ್ (2019) ಮತ್ತು ಬಾಂಗ್ಲಾದೇಶದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ (2020) ಸೇರಿದ್ದಾರೆ.

The Gandhi Peace Prize for 2021 has been conferred on the Gita Press at Gorakhpur which is celebrating its centenary this year. There is a very fine biography from 2015 of this organisation by Akshaya Mukul in which he unearths the stormy relations it had with the Mahatma and the… pic.twitter.com/PqoOXa90e6

— Jairam Ramesh (@Jairam_Ramesh)

Tap to resize

Latest Videos

ಕೋಟಿ ಕೋಟಿ ಭಗವದ್ಗೀತೆ ಪ್ರತಿ ಮುದ್ರಿಸಿದ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ: ಕಾಂಗ್ರೆಸ್ ಆಕ್ರೋಶ

ಇನ್ನು ಗೀತಾ ಪ್ರೆಸ್‌ಅನ್ನು, ಸೊಸೈಟೀಸ್ ರಿಜಿಸ್ಟ್ರೇಶನ್ ಆಕ್ಟ್, 1860 (ಪ್ರಸ್ತುತ ಪಶ್ಚಿಮ ಬಂಗಾಳ ಸೊಸೈಟೀಸ್ ಆಕ್ಟ್, 1960 ರಿಂದ ಆಡಳಿತ ನಡೆಸುತ್ತಿದೆ) ಅಡಿಯಲ್ಲಿ ಪ್ರಮುಖ ಉದ್ಯಮಿ ಮತ್ತು ಲೋಕೋಪಕಾರಿ ಜಯದಯಾಳ್ ಗೊಯಂಡ್ಕಾ ಅವರು 1923 ರಲ್ಲಿ ಸ್ಥಾಪಿಸಿದರು, ಗೀತಾ ಪ್ರೆಸ್ ಆರಂಭದಲ್ಲಿ ಕೊಲ್ಕತ್ತಾದಲ್ಲಿ ಸಣ್ಣ ಬಾಡಿಗೆ ಜಾಗದಿಂದ ಕಾರ್ಯನಿರ್ವಹಿಸುತ್ತಿತ್ತು (ಹಿಂದೆ ಕಲ್ಕತ್ತಾದಲ್ಲಿ ಪ್ರಕಾಶನವಾಗಿತ್ತು) ಭಗವದ್ಗೀತೆ ಮತ್ತು ರಾಮಾಯಣದಂತಹ ಪುಸ್ತಕಗಳನ್ನು ಇದು ಪಬ್ಲಿಶ್‌ ಮಾಡುತ್ತಿತ್ತು. ಹಿಂದೂ ಧರ್ಮಗ್ರಂಥಗಳು ಮತ್ತು ಇತರ ಧಾರ್ಮಿಕ ಸಾಹಿತ್ಯವನ್ನು ಜನಸಾಮಾನ್ಯರಲ್ಲಿ ಪ್ರಸಾರ ಮಾಡುವ ಪ್ರಕಾಶನ ಸಂಸ್ಥೆಯನ್ನು ಆರಂಭ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಗೊಯಂಡ್ಕಾ ಇದನ್ನು ಸ್ಥಾಪನೆ ಮಾಡಿದ್ದರು.

ದೇಶಾದ್ಯಂತ ಹವಾಮಾನ ವೈಪರೀತ್ಯ: ಯುಪಿ, ಬಿಹಾರದಲ್ಲಿ ಬಿಸಿಗಾಳಿಗೆ 100 ಕ್ಕೂ ಅಧಿಕ ಮಂದಿ ಬಲಿ, ಹಲವೆಡೆ ಭೀಕರ ಮಳೆ

click me!