ಮೆಸ್ಸಿ ಹುಟ್ಟಿದ್ದು ಅಸ್ಸಾಂನಲ್ಲಿ ಎಂದು ಟ್ವೀಟ್‌ ಮಾಡಿ ಡಿಲೀಟ್‌ ಮಾಡಿದ ಕಾಂಗ್ರೆಸ್‌ ಸಂಸದ: ನೆಟ್ಟಿಗರಿಂದ ಟ್ರೋಲ್

By BK Ashwin  |  First Published Dec 19, 2022, 5:47 PM IST

ಅಸ್ಸಾಂ ಕನೆಕ್ಷನ್‌ ಬಗ್ಗೆ ಟ್ವಿಟ್ಟರ್‌ ಬಳಕೆದಾರ ಆದಿತ್ಯ ಶರ್ಮಾ ಅವರನ್ನು ಕೇಳಿದ್ದಕ್ಕೆ, ಇದಕ್ಕೆ ಉತ್ತರಿಸಿದ ಕಾಂಗ್ರೆಸ್‌ ಸಂಸದ ಅಬ್ದುಲ್‌ ಖಲೀಕ್‌ ಅವರು, "ಹೌದು, ಲಿಯೋನೆಲ್‌ ಮೆಸ್ಸಿ ಅಸ್ಸಾಂನಲ್ಲಿ ಜನಿಸಿದ್ದಾರೆ ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.


ಫಿಫಾ ವಿಶ್ವಕಪ್‌ ಫೈನಲ್‌ ಪಂದ್ಯ (FIFA World Cup Final Match) ಮುಕ್ತಾಯವಾಗಿದ್ದು, ಇದು ನಿಜಕ್ಕೂ ರೋಚಕತೆಯಿಂದ ಕೂಡಿತ್ತು. ಫೈನಲ್‌ ಪಂದ್ಯದಲ್ಲಿ ಅರ್ಜೆಂಟೀನಾ (Argentina) ಪೆನಾಲ್ಟಿ ಶೂಟೌಟ್‌ನಲ್ಲಿ (Penalty Shoot Out) ಗೆಲುವು ಸಾಧಿಸಿದ್ದು, ಲಿಯೋನೆಲ್‌ ಮೆಸ್ಸಿ (Lionel Messi) ಟ್ರೋಪಿಗೆ ಮುತ್ತಿಟ್ಟಿದ್ದು ಈಗ ಇತಿಹಾಸ. ಮೆಸ್ಸಿ ನಿಜಕ್ಕೂ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ. ಆದ್ರೆ, ಈ ದಂತಕಥೆ ಲಿಯೋನೆಲ್‌ ಮೆಸ್ಸಿ ಅಸ್ಸಾಂನಲ್ಲಿ (Assam) ಜನಿಸಿದ್ದಾರೆ ಎಂದು ಕಾಂಗ್ರೆಸ್ ((Congress) ಸಂಸದ ಅಬ್ದುಲ್ ಖಲೀಕ್ (Abdul Khaleque) ಟ್ವಿಟ್ಟರ್‌ನಲ್ಲಿ (Twitter) ಹೇಳಿಕೊಂಡಿದ್ದಾರೆ. ಆದರೆ, ನಂತರ ಅವರು ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಬ್ದುಲ್‌ ಖಲೀಕ್ ಲೋಕಸಭೆಯಲ್ಲಿ ಅಸ್ಸಾಂನ ಬಾರ್ಪೇಟಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 

ಕತಾರ್ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಗೆಲುವಿಗಾಗಿ ಮೆಸ್ಸಿಯನ್ನು ಅಭಿನಂದಿಸಿದ ಕಾಂಗ್ರೆಸ್‌ ಸಂಸದ, ನನ್ನ ಹೃದಯದ ತಿರುಳಿನಿಂದ ಅಭಿನಂದನೆಗಳು. ನಿಮ್ಮ ಅಸ್ಸಾಂ ಕನೆಕ್ಷನ್‌ಗಾಗಿ ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಅಸ್ಸಾಂನ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಟ್ವೀಟ್‌ ಮಾಡಿದ್ದಾರೆ.

Tap to resize

Latest Videos

undefined

ಇದನ್ನು ಓದಿ: FIFA World Cup: 234 ಕೋಟಿ ಮೌಲ್ಯದ 4 ಬಂಗಲೆ, ಮನೆಯಲ್ಲೇ ಫುಟ್‌ಬಾಲ್‌ ಗ್ರೌಂಡ್‌, ಇದು ಮೆಸ್ಸಿಯ ಐಷಾರಾಮಿ ಜೀವನ!

Member of Parliament from Barpeta Lok Sabha constituency. pic.twitter.com/uFHSgFJ4Dt

— Anshul Saxena (@AskAnshul)

ಬಳಿಕ, ಅಸ್ಸಾಂ ಕನೆಕ್ಷನ್‌ ಬಗ್ಗೆ ಟ್ವಿಟ್ಟರ್‌ ಬಳಕೆದಾರ ಆದಿತ್ಯ ಶರ್ಮಾ ಅವರನ್ನು ಕೇಳಿದ್ದಕ್ಕೆ, ಇದಕ್ಕೆ ಉತ್ತರಿಸಿದ ಅಬ್ದುಲ್‌ ಖಲೀಕ್‌ ಅವರು, "ಹೌದು, ಅವರು (ಲಿಯೋನೆಲ್‌ ಮೆಸ್ಸಿ) ಅಸ್ಸಾಂನಲ್ಲಿ ಜನಿಸಿದರು" ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ, ತನ್ನ ಮೂರ್ಖತನವನ್ನು ಅರಿತು ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ಸಂಸದರು ತಮ್ಮ ಟ್ವೀಟ್ ಅನ್ನು ಡಿಲೀಟ್‌ ಮಾಡಿದ್ದಾರೆ.

ಆದರೆ, ಅವರು ಈ ಟ್ವೀಟ್‌ ಡಿಲೀಟ್‌ ಮಾಡಿದರೂ, ಅನೇಕ ನೆಟ್ಟಿಗರು ಆ ಟ್ವೀಟ್‌ನ ಸ್ಕ್ರೀನ್‌ಶಾಟ್‌ ತೆಗೆದಿಟ್ಟುಕೊಂಡಿದ್ದು, ಅನೇಕರು ಕಾಂಗ್ರೆಸ್‌ ಸಂಸದರನ್ನು ಟ್ರೋಲ್‌ ಮಾಡುತ್ತಿದ್ದಾರೆ. "ಹೌದು ಸರ್, ಅವರು ನನ್ನ ಸಹಪಾಠಿ" ಎಂದು ಒಬ್ಬರು ಬಳಕೆದಾರರು ಟ್ವೀಟ್‌ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 

ಇದನ್ನೂ ಓದಿ: ಫಿಫಾ ವಿಶ್ವಕಪ್‌ ಫೈನಲ್‌ ಬಳಿಕ ಲಿಯೋನೆಲ್ ಮೆಸ್ಸಿ ನಿವೃತ್ತಿ: ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌..!

Yes sir he was my classmate

— V. (@immaturelyyours)

ಇನ್ನು, "ವಿಶ್ವಕಪ್ ನಂತರ, ಮೆಸ್ಸಿ ಮತ್ತು ಅವರ ಪತ್ನಿ ಅಸ್ಸಾಂಗೆ ಭೇಟಿ ನೀಡಿದ್ದರು - ನೀವು ಎಲ್ಲಿಂದ ಬಂದಿದ್ದೀರಿ ಎಂಬುದನ್ನು ಎಂದಿಗೂ ಮರೆಯಬೇಡಿ" ಎಂದು ಮತ್ತೊಬ್ಬ ಬಳಕೆದಾರರು ಎಡಿಟ್‌ ಮಾಡಿರುವ ಫೋಟೋದ ಜತೆಗೆ ಟ್ವೀಟ್‌ ಮಾಡಿದ್ದಾರೆ. 

After the world cup messi and his wife visited assam
Never forget where you come from pic.twitter.com/lw6SmMmFXe

— Desi Bhayo (@desi_bhayo88)

ಅಲ್ಲದೆ, "ನಾನು ಅಸ್ಸಾಂನಲ್ಲಿ ಜನಿಸಿದೆ ಎಂದು ನಾನು ಇಂದು ತಿಳಿದುಕೊಂಡಿದ್ದೇನೆ" ಎಂದು ಮತ್ತೊಬ್ಬ ಬಳಕೆದಾರರು ಮೆಸ್ಸಿಯ ಫೋಟೋವನ್ನು ಪೋಸ್ಟ್‌ ಮಾಡಿದ್ದು, 2 ಬಾರಿ ಎಂಎಲ್‌ಎ ಸಹ ಆಗಿದ್ದ ಅಬ್ದುಲ್‌ ಖಲೀಕ್‌ ಅವರನ್ನು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: FIFA World Cup ಮೆಸ್ಸಿ ಮಿಂಚಿನಾಟಕ್ಕೆ ಶರಣಾದ ಕ್ರೊವೇಷಿಯಾ; ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ..!

pic.twitter.com/O1f78p4Mio

— Professor ngl राजा बाबू 🥳🌈 (@GaurangBhardwa1)

ಮತ್ತೊಂದೆಡೆ, ಅನೇಕ ಬಳಕೆದಾರರು ಮೆಸ್ಸಿ ಮತ್ತು ಸಚಿನ್ ತೆಂಡೂಲ್ಕರ್ ನಡುವೆ ಹೋಲಿಕೆ ಮಾಡಿದರು. ಅರ್ಜೆಂಟೀನಾದ ಆಟಗಾರನಿಗೆ 'ಮಹಾರಾಷ್ಟ್ರ ಸಂಪರ್ಕ' ಇದೆ ಎಂದು ಹೇಳಿಕೊಂಡಿದ್ದು, ಸಚಿನ್‌ ತೆಂಡೂಲ್ಕರ್ ಮತ್ತು ಲಿಯೋನೆಲ್‌ ಮೆಸ್ಸಿ ಇಬ್ಬರೂ 10ನೇ ನಂಬರ್‌ ಅನ್ನು ತಮ್ಮ ಜೆರ್ಸಿಯಲ್ಲಿ ಹಾಕಿಕೊಳ್ಳುತ್ತಾರೆ ಎಂದೂ ಹಲವು ನೆಟ್ಟಿಗರು ಪೋಸ್ಟ್‌ ಮಾಡಿದ್ದಾರೆ. 

ಭಾನುವಾರ ಲುಸೇಲ್ ಸ್ಟೇಡಿಯಂನಲ್ಲಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿದೆ. ಫ್ರಾನ್ಸ್‌ ಸಹ 2 ಬಾರಿ ಪಂದ್ಯದಲ್ಲಿ ಪುಟಿದೆದ್ದಿದ್ದು, ಪಂದ್ಯ ತೀವ್ರ ರೋಚಕತೆಯಿಂದ ಕೂಡಿತ್ತು. 

ಇದನ್ನೂ ಓದಿ: ಫುಟ್ಬಾಲಿಗರ ಕ್ರೇಜ್: ಸೊಂಟದ ಮೇಲೆ ಪತ್ನಿಯ ತುಟಿ ಟ್ಯಾಟೂ! ಓಂ ನಮಃ ಶಿವಾಯ ಜಪ

click me!