ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು

Published : Nov 27, 2025, 07:03 PM IST
Congress MLA Adi srinivas

ಸಾರಾಂಶ

ಮನೆ ನಿರ್ಮಾಣ ಸೈಟ್‌ಗೆ ಭೇಟಿ ವೇಳೆ ಕುಸಿದ ಛಾವಣಿ, ಕಾಂಗ್ರೆಸ್ ಶಾಸಕ ಪ್ರಾಣಪಾಯದಿಂದ ಪಾರು, ಬಡವರಿಗೆ, ಸೂರಿಲ್ಲದವರಿಗೆ ನಿರ್ಮಿಸುತ್ತಿರವ ಮನೆ ಇದಾಗಿದೆ. ಛಾವಣಿ ಕುಸಿತ ಘಟನೆ ಬೆನ್ನಲ್ಲೇ ಗುಣಮಟ್ಟ, ಸರ್ಕಾರದ ಭ್ರಷ್ಟಾಚಾರ ಕುರಿತು ಭಾರಿ ಟೀಕೆ ಕೇಳಿಬಂದಿದೆ. 

ವೇಮುಲವಾಡ (ನ.27) ಸರ್ಕಾರ ಸೂರಿಲ್ಲದವರಿಗೆ ಮನೆ ನಿರ್ಮಿಸುವ ಕೊಡುವ ಯೋಜನೆಗಳನ್ನು ಮಾಡುತ್ತದೆ. ಪ್ರತಿ ರಾಜ್ಯ ಸರ್ಕಾರಗಳು ಸರ್ಕಾರದ ಹೌಸಿಂಗ್ ಸೊಸೈಟಿ ಮೂಲಕ ಮನೆ ನಿರ್ಮಾಣ ಕಾರ್ಯಗಳನ್ನು ಮಾಡುತ್ತದೆ. ಬಳಿಕ ವಿತರಣೆ ಮಾಡಲಿದೆ. ಹೀಗೆ ಹೌಸಿಂಗ್ ಸೊಸೈಟಿ ನಿರ್ಮಾಣ ಮಾಡುತ್ತಿರುವ ಮನೆಗಳ ಸೈಟ್‌ಗೆ ಕಾಂಗ್ರೆಸ್ ಶಾಸಕ ಭೇಟಿ ನೀಡಿದ್ದಾರೆ. ಆದರೆ ಶಾಸಕ, ಜಿಲ್ಲಾಧಿಕಾರಿ ಹಾಗೂ ಇತತರ ತೂಕ ತಾಳಲಾರದೆ ಛಾವಣಿ ಕುಸಿದ ಘಟನೆ ನಡೆದಿದೆ. ಅದೃಷ್ಠವಶಾತ್ ಕಾಂಗ್ರೆಸ್ ಆದಿ ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾದ ಘಟನೆ ತೆಲಂಗಾಣದ ವೇಮುಲವಾಡದಲ್ಲಿ ನಡೆದಿದೆ.

2ಬೆಡ್ ಮನೆ ನಿರ್ಮಾಣ ಸೈಟ್‌ನಲ್ಲಿ ಘಟನೆ

ತೆಲಂಗಾಣ ಸರ್ಕಾರ ವೇಮುಲವಾಡದ ಪಾರ್ವತಿ ಪುರಂ ಬಳಿ ನಿರ್ಮಾಣ ಮಾಡುತ್ತಿರುವ 2 ಬೆಡ್ ರೂಂ ಮನೆ ಕಾಂಪ್ಲೆಕ್ಸ್‌ನಲ್ಲಿ ಈ ಘಟನೆ ನಡದೆದಿ. ಸುದೀರ್ಘ ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಕುರಿತು ಪರಿಶೀಲನೆಗೆ ವೇಮುಲವಾಡ ಕಾಂಗ್ರೆಸ್ ಶಾಸಕ ಹಾಗೂ ಸರ್ಕಾರದ ಸಚೇತಕ ಆದಿ ಶ್ರೀನಿವಾಸ್, ಜಿಲ್ಲಾಧಿಕಾರಿ ಗರೀಮಾ ಅಗರ್ವಾಲ್ ಸೇರಿದಂತೆ ಅಧಿಕಾರಿಗಳ ತಂಡ ಮನೆ ಸೈಟ್‌ಗೆ ಬೇಟಿ ನೀಡಿದೆ. ಕೆಳಮಹಡಿಯಲ್ಲಿನ ಮನಯೊಂದರ ನಿರ್ಮಾಣ ಕಾರ್ಯ ಪರಿಶೀಲನೆ ವೇಳೆ ಶಾಸಕರು ನಿಂತಿದ್ದ ಛಾವಣಿ ಕುಸಿದಿದೆ. ಕೆಳಮಹಡಿ ಕಾರಣ ಅಪಾಯದ ಪ್ರಮಾಣ ಕಡಿಮೆ ಇತ್ತು. ಆದರೆ ಶಾಸಕರು ಬೀಳದಂತೆ ಇತರ ಸಿಬ್ಬಂದಿಗಳು ಹಿಡಿದಿದ್ದಾರೆ. ಹೀಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾಸಕರ ವಿಡಿಯೋ ವೈರಲ್

ಶಾಸಕ ಆದಿ ಶ್ರೀನಿವಾಸ ಹಾಗೂ ಇತರ ಸಿಬ್ಬಂದಿಗಳು ನಿಂತಿರುವ ಛಾವಣಿ ಕುಸಿಯುತ್ತಿರುವ ದೃಶ್ಯ ಭಾರಿ ವೈರಲ್ ಆಗಿತ್ತು. ಇದು ಸರ್ಕಾರಕ್ಕೆ ತೀವ್ರ ಮುಜುಗರ ತರಿಸಿದೆ. ಇದರ ಬೆನ್ನಲ್ಲೇ ತನಿಖೆಗೆ ಆದೇಶ ನೀಡಲಾಗಿದೆ. ಕಳಪೆ ಗುಣಮಟ್ಟದ ಕಾಮಗಾರಿ ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿದೆ. ಬಡವರಿಗೆ, ಸೂರಿಲ್ಲದವರಿಗೆ ನೀಡುವ ಮನೆ ಗುಣಮಟ್ಟ, ಒಬ್ಬ ಶಾಸಕ ನಿಂತಾಗಲೇ ಕುಸಿದು ಬಿದ್ದಿದೆ. ಇನ್ನು ಈ ಮನೆಯಲ್ಲಿ ವಾಸಿಸುವ ಜನರು ಜೀವ ಕೈಯಲ್ಲಿ ಹಿಡಿದು ದಿನ ದೂಡಬೇಕು ಎಂದು ಟೀಕೆಗಳು ವ್ಯಕ್ತವಾಗುತ್ತಿದೆ. ತೆಲಂಗಾಣ ಸರ್ಕಾರದ ಹೌಸಿಂಗ್ ಸೊಸೈಟಿ ತನಿಖೆಗೆ ಆದೇಶ ನೀಡಿದ್ದು,ಸಮಗ್ರ ವರದಿ ಕೇಳಿದೆ.

2021ರಲ್ಲಿ ಹೌಸಿಂಗ್ ಸೊಸೈಟಿ ಮೆ ನಿರ್ಮಾಣ ಆರಂಭಗೊಂಡಿತ್ತು. ಆದರೆ ಕೆಲ ವರ್ಷಗಳಲ್ಲೇ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡತ್ತು. ಇತ್ತೀಚೆಗೆ ತೆಲಂಗಾಣ ಸರ್ಕಾರ ಬೇರೆ ಕಾಂಟ್ರಾಕ್ಟರ್‌ಗೆ ಜವಾಬ್ದಾರಿ ನೀಡಲಾಗಿತ್ತು. ಹೊಸ ಕಾಂಟ್ರಾಕ್ಟರ್‌ಗಳ ಕಾಮಗಾರಿ ವೀಕ್ಷಣೆ ಹಾಗೂ ಪರಿಶೀಲನೆಗೆ ಶಾಸಕ ಹಾಗೂ ಜಿಲ್ಲಾಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಕೆಳ ಮಹಡಿಯ ಎರಡು ಬೆಡ್ ರೂಂ ಮನೆ ವೀಕ್ಷಿಸುತ್ತಿದ್ದಂತೆ ಫ್ಲೋರ್ ಕುಸಿದಿದೆ. ಫ್ಲೋರ್ ಮೇಲೆ ನಿಂತಿದ್ದ ಶಾಸಕರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!