ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ

Published : Nov 27, 2025, 06:15 PM IST
Musk Deer West Bengal

ಸಾರಾಂಶ

ಅಳಿವಿನಂಚಿನ ಕಸ್ತೂರಿ ಮೃಗ ಬರೋಬ್ಬರಿ 70 ವರ್ಷದ ಬಳಿಕ ಪಶ್ಚಿಮ ಬಂಗಾಳದಲ್ಲಿ ಪತ್ತೆ, ಕಸ್ತೂರಿ ಪರಿಮಳ, ಮಾಂಸಕ್ಕಾಗಿ ಕಸ್ತೂರಿ ಮೃಗವನ್ನು ಬೇಟೆಯಾಡಿದ ಪರಿಣಾಮ ಭಾರತದಲ್ಲಿ ಕಸ್ತೂರಿ ಮೃಗಗಳು ಸಂತತಿ ಅಳಿವಿನಂಚಿನಲ್ಲಿದೆ. ಈ ಕಸ್ತೂರಿ ಮೃಗ ಬಂಗಾಳ ಕಾಡಿನಲ್ಲಿ ಪತ್ತೆಯಾಗಿದೆ.

ಕೋಲ್ಕತಾ (ನ.27) ಕಸ್ತೂರಿ ಮೃಗಗಳ ಕುರಿತು ಶಾಲಾ ಪಠ್ಯ ಪುಸ್ತಕದಲ್ಲಿ ಓದಿ ತಿಳಿದುಕೊಂಡವರೇ ಹೆಚ್ಚು. ಹೊಕ್ಕಳಲ್ಲಿ ಕಸ್ತೂರಿ ಪರಿಮಳವನ್ನಿಟ್ಟುಕೊಂಡು ಪರಿಮಳ ಎಲ್ಲಿ ಎಂದು ಎಲ್ಲಾ ಕಡೆ ಅಲೆದಾಡುತ್ತದೆ ಎಂಬ ಉಲ್ಲೇಖ ಪಠ್ಯ ಪುಸ್ತಕದಲ್ಲಿದೆ. ಈ ಮೃಗವನ್ನು ನೋಡಿದವರು ಬೆರೆಳೆಣಿಕೆ. ಭಾರತದಲ್ಲಿ ಅತೀ ಹೆಚ್ಚು ಕಸ್ತೂರಿ ಮೃಗಗಳ ಸಂತತಿಗಳಿತ್ತು. ಆದರೆ ಬೇಟೆಯಾಡಿದ ಪರಿಣಾಮ ಹಲವು ರಾಜ್ಯಗಳಲ್ಲಿ ಕಸ್ತೂರಿ ಮೃಗಗಳು ನಾಶವಾಗಿತ್ತು. ಇದೀಗ ಬರೋಬ್ಬರಿ 70 ವರ್ಷಗಳ ಬಳಿಕ ಪಶ್ಚಿಮ ಬಂಗಾಳದ ನಿಯೋರೋ ಅಭಯಾರಣ್ಯದಲ್ಲಿ ಕಸ್ತೂರಿ ಮೃಗ ಪತ್ತೆಯಾಗಿದೆ. ಮೊದಲ ಬಾರಿಗೆ ಕ್ಯಾಮೆರಾ ಕಾಣ್ಣಿಗೆ ಕಸ್ತೂರಿ ಮೃಗವೊಂದು ಪತ್ತೆಯಾಗಿದೆ.

1955ರಲ್ಲಿ ಕೊನೆಯ ಬಾರಿಗೆ ಮಸ್ಕ್ ಡೀರ್ ಪತ್ತೆ

ಪಶ್ಚಿಮ ಬಂಗಾಳದಲ್ಲಿ ಕಸ್ತೂರಿ ಮೃಗ ಕೊನೆಯದಾಗಿ ಪತ್ತೆಯಾಗಿದ್ದು 1955ರಲ್ಲಿ. ಇದರ ಬಳಿಕ ಬಂಗಾಳದ ನಿಯೋರ ವ್ಯಾಲಿ ನಾಶನಲ್ ಪಾರ್ಕ್, ಸೇರಿದಂತೆ ಯಾವುದೇ ಅರಣ್ಯದಲ್ಲಿ ಕಸ್ತೂರಿ ಮೃಗದ ಸಂತತಿ ಪತ್ತೆಯಾಗಿರಲಿಲ್ಲ. ಅರಣ್ಯಾಧಿಕಾರಿಗಳ ಕಣ್ಣಿಗೂ ಬಿದ್ದಿರಲಿಲ್ಲ. ಹೀಗದಾಗಿ ಪಶ್ಚಿಮ ಬಂಗಾಳದದಲ್ಲಿ ಯಥೇಚ್ಚವಾಗಿ ಕಾಣಸಿಗುತ್ತಿದ್ದ ಕಸ್ತೂರಿ ಮೃಗ ಅಳಿವಿನಂಚಿನ ಪ್ರಾಣಿ ಎಂದು ಘೋಷಿಸಲಾಗಿತ್ತು. 70 ವರ್ಷಗಳ ಬಳಿಕ ಅದೀಗ ಅದೀಕೃತವಾಗಿ ಕಸ್ತೂರಿ ಮೃಗ ಪಶ್ಚಿಮ ಬಂಗಾಳದಲ್ಲಿ ಇದೆ ಅನ್ನೋದು ಪತ್ತೆಯಾಗಿದೆ.

ಕಸ್ತೂರಿ ಮೃಗದ 7 ಫೋಟೋ ಸೆರೆ

ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಹಾಗೂ ಉತ್ತರಖಂಡ ಭಾಗದಲ್ಲಿ ಕಸ್ತೂರಿ ಮೃಗಗಳ ಸಂತತಿಗಳಿವೆ. ಚಳಿ ಅಥಾ ಶೀತಮಯ ಪ್ರದೇಶದಲ್ಲಿ ಕಸ್ತೂರಿ ಮೃಗಗಳು ಕಾಣಸಿಗುತ್ತದೆ. ಇದೀಗ ಅಳಿದು ಹೋಗಿದ್ದ ಪಶ್ಚಿಮ ಬಂಗಾಳದಲ್ಲೂ ಕಸ್ತೂರಿ ಮೃಗ ಕಾಣಿಸಿಕೊಂಡಿದೆ.ನಿಯೋರಾ ವ್ಯಾಲಿಯಲ್ಲಿ ಅರಣ್ಯಾಧಿಕಾರಿಗಳ ಕ್ಯಾಮೆರಾದಲ್ಲಿ ಕಸ್ತೂರಿ ಮೃಗದ 7 ಫೋಟೋಗಳು ಸೆರೆ ಸಿಕ್ಕಿದೆ. ಹಿಮಾಲಯ ವಲಯದಲ್ಲಿ ಬರವು ನಿಯೋರ ವ್ಯಾಲಿ ನ್ಯಾಷನಲ್ ಪಾರ್ಕ್‌ನಲ್ಲಿ ಕಸ್ತೂರಿ ಮೃಗ ಸಂತತಿ ಇರುವ ಮೊದಲ ಕುರುಹು ಇದಾಗಿದೆ.

ಅಳಿವಿನಂಚಿನ ಪ್ರಾಣಿಗಳ ಅಧ್ಯಯನ

2023ರಲ್ಲಿ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಗುರುತಿಸಲು ಹಾಗೂ ಪರಿಸರ ಸಮತೋಲನ ಕಾಪಾಡಿಕೊಳ್ಳಲು ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಇದು ವರ್ಷಗಳ ಕಾಲ ನಡೆಯುವ ಅಧ್ಯಯನ, ದೇಶಾದ್ಯಂತ ಈ ಅಧ್ಯಯನ ನಡೆಯುತ್ತಿದೆ. ಅರಣ್ಯಧಲ್ಲಿ ಕ್ಯಾಮೆರಾ ಇಟ್ಟು ಪ್ರಾಣಿ ಪಕ್ಷಿಗಳ ಸಂತತಿ, ಅವುಗಳ ಸಂಖ್ಯೆ ಕುರಿತು ಅಧ್ಯಯನ ನಡೆಸಲಾಗುತ್ತದೆ. ಈ ಮೂಲಕ ಭಾರತದಲ್ಲಿ ಅಳಿವಿನಂಚಿರುವ ಪ್ರಾಣಿ ಪಕ್ಷಿಗಳ ಮಾಹಿತಿ ಕಲೆಹಾಕಲಾಗುತ್ತದೆ.

ಭಾರತದಲ್ಲಿ ಕಾಣ ಸಿಗುವ ಕಸ್ತೂರಿ ಮೃಗದಲ್ಲಿ ನಾಲ್ಕು ವಿಧಗಳಿವೆ. ಕಪ್ಪು ಕಸ್ತೂರಿ ಮೃಗ, ಹಿಮಾಯಲನ್ ಕಸ್ತೂರಿ ಮೃಗ, ಅಲ್‌ಪೈನ್ ಕಸ್ತೂರಿ ಮೃಗ, ಕಾಶ್ಮೀರ ಕಸ್ತೂರಿ ಮೃಗ ಎಂಬ ನಾಲ್ಕು ವಿಧಗಳಿವೆ. ಡಿಸೆಂಬರ್ 17, 2024ರಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ಕಸ್ತೂರಿ ಮೃಗ ಪತ್ತೆಯಾಗಿದೆ. ಈ ಕುರಿತು ಕೇಂಬ್ರಿಡ್ಡ್ ಯೂನವರ್ಸಿಟಿ ಪ್ರೆಸ್ ಇಂಡಿಯಾ ಜರ್ನಲ್‌ನಲ್ಲಿ ಈ ಕುರಿತ ಮಾಹಿತಿ ಪ್ರಕಟವಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ