ಮೋದಿ ಫ್ರಾನ್ಸ್‌ ಪ್ರವಾಸಕ್ಕೆ ಕಾಂಗ್ರೆಸ್‌ ನಾಯಕರ ಜಟಾಪಟಿ

Published : Jul 16, 2023, 10:44 AM IST
ಮೋದಿ ಫ್ರಾನ್ಸ್‌ ಪ್ರವಾಸಕ್ಕೆ  ಕಾಂಗ್ರೆಸ್‌ ನಾಯಕರ ಜಟಾಪಟಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಸ ಕೈಗೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಸ ಕೈಗೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ರಾಫೆಲ್‌ ಒಪ್ಪಂದದ ಕಾರಣಕ್ಕೆ  ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ‘ಬಾಸ್ಟಿಲ್‌ ಡೀಲ್‌ ಪರೇಡ್‌’ಗೆ ಟಿಕೆಟ್‌ ಕೊಡಿಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದರೆ, ರಾಹುಲ್‌ ಹತಾಶೆಗೊಂಡಿರುವ ಕುಟುಂಬಕ್ಕೆ ಸೇರಿದವರು ಎಂದು ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

ಮಣಿಪುರ ಹೊತ್ತಿ ಉರಿಯುತ್ತಿದೆ. ಯುರೋಪಿನ ಸಂಸತ್ತು ಭಾರತದ ಆಂತರಿಕ ವಿಷಯದ ಚರ್ಚೆ ನಡೆಸುತ್ತಿದೆ. ಪ್ರಧಾನಿ ಈ ಬಗ್ಗೆ ಒಂದೇ ಒಂದೂ ಮಾತನ್ನೂ ಸಹ ಆಡಿಲ್ಲ. ರಾಫೇಲ್‌ ಒಪ್ಪಂದ ಅವರಿಗೆ ಈ ಟಿಕೆಟ್‌ ಕೊಡಿಸಿದೆ ಎಂದು ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಸ್ಮೃತಿ ಇರಾನಿ, ಭಾರತದ ಆಂತರಿಕ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಬಯಸುತ್ತಿರುವ ಹತಾಶೆಗೊಂಡಿರುವ ರಾಜಕುಟುಂಬಕ್ಕೆ ಸೇರಿರುವ ರಾಹುಲ್‌ ಗಾಂಧಿ, ಮೇಕ್‌ ಇನ್‌ ಇಂಡಿಯಾ ಮಹತ್ವಾಕಾಂಕ್ಷೆಯನ್ನು ಮಲಿನ ಮಾಡುತ್ತಿದ್ದಾರೆ. ರಕ್ಷಣಾ ಒಪ್ಪಂದಗಳು ಈಗ ರಾಜವಂಶಸ್ಥರ ಮನೆ ಬಾಗಿಲಿಗೆ ಬರುತ್ತಿಲ್ಲ ಎಂಬ ಕಾರಣಕ್ಕೆ ರಾಹುಲ್‌ ತಳಮಳಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಯುಎಇ ಜತೆ ಭಾರತದ 2 ಮಹತ್ವದ ಒಪ್ಪಂದ: ಮೋದಿಗೆ ಫ್ರೆಂಡ್‌ಶಿಪ್ ಬ್ಯಾಂಡ್ ಕಟ್ಟಿದ ಯುಎಇ ಶೇಕ್

ನೌಕಾಪಡೆಗಾಗಿ ಕೇಂದ್ರದಿಂದ 26 ರಫೇಲ್‌ ವಿಮಾನ ಖರೀದಿ

ಭಾರತೀಯ ವಾಯುಪಡೆಗೆ ಪ್ರಬಲ ಶಕ್ತಿಯನ್ನು ತುಂಬಲು ಈಗಾಗಲೇ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಿರುವ ಭಾರತ, ಇದೀಗ ನೌಕಾಪಡೆಯ ಬಲವೃದ್ಧಿಗಾಗಿ ಫ್ರಾನ್ಸ್‌ನಿಂದ ನೌಕಾ ಆವೃತ್ತಿಯ ಅತ್ಯಾಧುನಿಕ 26 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಮುಂದಾಗಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ಜತೆ ಮಾತುಕತೆ ನಡೆಸಿದ ಬಳಿಕ ಬಿಡುಗಡೆಯಾದ ದಾಖಲೆಯಲ್ಲಿ ರಫೇಲ್‌ ಖರೀದಿಯ ಉಲ್ಲೇಖವಿರಲಿಲ್ಲ. ಆದರೆ ಇದೀಗ ಡಸಾಲ್ಟ್‌ ಏವಿಯೇಷನ್‌ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ನೌಕಾಪಡೆಗಾಗಿ ಭಾರತ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಹಿರಂಗಪಡಿಸಿದೆ.

ಭಾರತದಲ್ಲಿ ಈ ವಿಮಾನಗಳ ಪ್ರಾಯೋಗಿಕ ಹಾರಾಟವನ್ನು ನಡೆಸಲಾಗಿತ್ತು. ನೌಕಾ ಆವೃತ್ತಿಯ ರಫೇಲ್‌ ಯುದ್ಧ ವಿಮಾನಗಳು ಭಾರತೀಯ ನೌಕಾಪಡೆಯ ಅಗತ್ಯವನ್ನು ಪೂರೈಸಿದ್ದವು. ಆ ದೇಶದ ಯುದ್ಧ ನೌಕೆಗಳಿಗೆ ಸೂಕ್ತವಾಗಿದ್ದವು. ಇದರ ಬೆನ್ನಲ್ಲೇ ಭಾರತ ತನ್ನ ನಿರ್ಧಾರ ಪ್ರಕಟಿಸಿದೆ ಎಂದು ಡಸಾಲ್ಟ್‌ ತಿಳಿಸಿದೆ. ಭಾರತದಲ್ಲಿ ಈಗಾಗಲೇ 36 ರಫೇಲ್‌ ಯುದ್ಧ ವಿಮಾನಗಳು ಸೇವೆಯಲ್ಲಿವೆ. ಭಾರತೀಯ ನೌಕಾಪಡೆಗೆ ಹೊಸದಾಗಿ 26 ರಫೇಲ್‌ಗಳು ಸೇರ್ಪಡೆಯಾಗಲಿವೆ. ತನ್ಮೂಲಕ ಫ್ರಾನ್ಸ್‌ ಬಳಿಕ ಎರಡು ಪಡೆಗಳಿಗೆ ಒಂದೇ ಕಂಪನಿಯ ಯುದ್ಧ ವಿಮಾನಗಳನ್ನು ಆಯ್ಕೆ ಮಾಡಿಕೊಂಡ ಮೊದಲ ದೇಶ ಭಾರತವಾಗಿದೆ.  ಭಾರತ ನೌಕಾ ಮಾದರಿಯ ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಿ ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ವಿಕ್ರಾಂತ್‌ ಮೇಲೆ ನಿಯೋಜನೆ ಮಾಡಲು ಉದ್ದೇಶಿಸಿದೆ.

ಪ್ರಧಾನಿ ಮೋದಿಗೆ ಫ್ರಾನ್ಸ್‌ ವಿಶೇಷ ಗೌರವ: ರಾಣಿ ಎಲಿಜಬೆತ್‌ಗೆ ನೀಡಿದ್ದ ಮ್ಯೂಸಿಯಂನಲ್ಲಿ ಔತಣಕೂಟ; ತ್ರಿವರ್ಣ ಧ್ವಜಕ್ಕೂ ಆದ್ಯತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್