ನವದೆಹಲಿ(ಜು.25): ಕೊರೋನಾ ಲಸಿಕೆ, ಕೃಷಿ ಮಸೂದೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಜನರಲ್ಲಿ ಇಲ್ಲದ ಗೊಂದಲ ಸೃಷ್ಟಿಸಿರುವುದು ಸಾಬೀತಾಗಿದೆ. ಇದೀಗ ಟೋಕಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರು ಇವೆರಡು ಬೇರೇ ಬೇರೆ ಕ್ರೀಡಾಕೂಟವಾಗಿದ್ದರು, ಕಾಂಗ್ರೆಸ್ ನಾಯಕರ ಟ್ವೀಟ್‌ಗಳಲ್ಲಿ ಎಲ್ಲವೂ ಟೋಕಿಯೋ ಒಲಿಂಪಿಕ್ಸ್ ಎಂದು ಹೇಳಿದ್ದಾರೆ.
ಕುಸ್ತಿಯಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಪ್ರಿಯಾ ಮಲಿಕ್..!
undefined
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಇತ್ತ ಹಂಗೇರಿಯಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಪ್ರಿಯಾ ಮಲಿಕ್‌ಗೆ ಶುಭಕೋರಿದ ಕಾಂಗ್ರೆಸ್ ನಾಯಕರು, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಪ್ರಿಯಾ ಮಲಿಕ್ ಸಾಧನೆ, ಚಿಯರ್ ಫಾರ್ ಇಂಡಿಯಾ, ಒಲಿಂಪಿಕ್ಸ್ ಎಂದೆಲ್ಲಾ ಟ್ವೀಟ್‌ನಲ್ಲಿ ಹೇಳಿದ್ದಾರೆ. ಈ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಟೂರ್ನಿಯನ್ನೂ ಒಲಿಂಪಿಕ್ಸ್ ಎಂದೇ ಭಾವಿಸಿದೆ.
ಕಾಂಗ್ರೆಸ್ ಪ್ರಮುಖ ನಾಯಕ ರಂದೀಪ್ ಸಿಂಗ್ ಸುರ್ಜೆವಾಲ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸ್ವರ್ಣ ಪದಕ ಎಂದು ಟ್ವೀಟ್ ಮಾಡಿದ್ದಾರೆ. ಸುರ್ಜೆವಾಲಾ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ತಕ್ಷಣವೇ ಟ್ವೀಟ್ ಡಿಲೀಟ್ ಮಾಡಿದ ಸುರ್ಜೆವಾಲ, ತಪ್ಪನ್ನು ಸರಿಪಡಿಸಿದ್ದಾರೆ.
C for Congress pic.twitter.com/5ZHtjEmz0b
— Atul Ahuja (@atulahuja_)ನಾಯಕಿ ಮಮತಾ ದತ್ತಾ ಕೂಡ ಇದೇ ರೀತಿ ಟ್ವೀಟ್ ಮಾಡಿದ್ದರು. ಪ್ರಿಯಾ ಮಲಿಕ್ ಒಲಿಂಪಿಕ್ಸ್ ಪದಕ ಎಂದು ಟ್ವೀಟ್ ಮಾಡಿ ಬಳಿಕ ಡಿಲೀಟ್ ಮಾಡಿ ಹೊಸ ಟ್ವೀಟ್ ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಆಪ್ ಸೇರಿಕೊಂಡ ಅಲ್ಕಾ ಲಾಂಬಾ ಕೂಡ ಇದೇ ತಪ್ಪನ್ನು ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಟ್ವೀಟ್‌ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದು ಟೂಲ್‌ಕಿಟ್ ಒಳಗಿನ ಗೊಂದಲ ಎಂದು ಹಲವರು ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಯಾವುದೇ ವಿಷಯದ ಸಂಪೂರ್ಣ ಮಾಹಿತಿ ಪಡೆಯದೇ ಅಥವ ತಿಳಿಯದೆ ಟ್ವೀಟ್ ಮಾಡುವುದರಲ್ಲಿ ನಿಸ್ಸೀಮರು. ಎಂದು ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಹೀಗೆ ಮಾಡದಿದ್ದರೆ ಆಶ್ಚರ್ಯ ಎಂದಿದ್ದಾರೆ.
These are tweets by . Its members are as dumb as their leader. They tweet without even knowing the subject. Priya Malik won gold at cadet wrestling championship in Hungary, NOT Tokyo Olympics. Please teach your office bearers some general knowledge https://t.co/JPIZy2dby3
— Maj Gen Harsha Kakar (@kakar_harsha)