
ನವದೆಹಲಿ(ಜು.25): ಸಿಬ್ಬಂದಿಗಳ, ಪೊಲೀಸರ ಮನವಿಗೆ ಯುವತಿ ಕಿವಿಗೊಡಲೇ ಇಲ್ಲ. ಒಂದು ಕ್ಷಣ ವಿಳಂಬವಾಗಿದ್ದರೆ, ಯುವತಿಯ ಪ್ರಾಣ ಪಕ್ಷಿ ಹಾರಿಹೋಗುತ್ತಿತ್ತು. ಆದರೆ ಹಾಗಾಗಲು CISF ಪೊಲೀಸ್ ಬಿಡಲಿಲ್ಲ. ಹೌದು, ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು CISF ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗೋ ಮೂಲಕ ರಕ್ಷಿಸಲಾಗಿದೆ.
SSLC ಪರೀಕ್ಷೆ ಬರೆದು ಬಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
ಈ ಘಟನೆ ನಡೆದಿರುವುದು ದೆಹಲಿ ಫರಿದಾಬಾದ್ ಮೆಟ್ರೋ ನಿಲ್ದಾಣದಲ್ಲಿ. ಮಾನಸಿಕವಾಗಿ ನೊಂದಿದ್ದ ಯವತಿ ಫರೀದಾಬಾದ್ ಮೆಟ್ರೋ ನಿಲ್ದಾಣದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಯುವತಿಯ ಗಮನಿಸಿದ ಮೆಟ್ರೋ ಸಿಬ್ಬಂದಿಗಳು ಮನವೋಲಿಸುವ ಯತ್ನ ಮಾಡಿದ್ದಾರೆ. ಆದರೆ ಈ ಮನವಿಗೆ ಯುವತಿ ಸೊಪ್ಪು ಹಾಕಿಲ್ಲ.
ಕಟ್ಟದ ಅಂಚಿನಲ್ಲಿ ಕುಳಿತು ಕೆಳಕ್ಕೆ ಹಾರಲು ತಯಾರಿ ಮಾಡಿಕೊಂಡಿದ್ದಾಳೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್( CISF) ಪೊಲೀಸ್ ಕಟ್ಟದ ಮತ್ತೊಂದು ಬದಿಯಿಂದ ನೇರವಾಗಿ ಯುವತಿ ಬಳಿ ಬಂದು ತಕ್ಷಣ ಹಿಡಿದಿದ್ದಾರೆ. ಈ ವೇಳೆ ಮೆಟ್ರೋ ಸಿಬ್ಬಂದಿ ಕೂಡ ಯುವತಿಯನ್ನು ಹಿಡಿದು ಆತ್ಮಹತ್ಯೆಯಿಂದ ರಕ್ಷಿಸಿದ್ದಾರೆ.
ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಕೌನ್ಸಲಿಂಗ್ ಕೇಂದ್ರಕ್ಕೆ ಕಳುಹಿಸಿದ್ದಾರೆ. ಯುವತಿಗೆ ಕೌನ್ಸಲಿಂಗ್ ನೀಡಿದ ಅಧಿಕಾರಿಗಳು ಬಳಿಕ ಯುವತಿ ಕುಟಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. CISF ಪೊಲೀಸ್ ಪೆದೆ ಸರ್ಫರಾಜ್ ಸಾಹಸಕ್ಕೆ ಪೊಲೀಸ್ ಕಮೀಶನರ್ ಒಪಿ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿ ಆತ್ಮಹತ್ಯೆ ಪ್ರಸಂಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ