ಶೇ.10 ಮೇಲ್ವರ್ಗ ಮೀಸಲು ವಿರುದ್ಧ ಸುಪ್ರೀಂಗೆ ಕಾಂಗ್ರೆಸ್‌ ನಾಯಕಿ ಅರ್ಜಿ

By Kannadaprabha NewsFirst Published Nov 24, 2022, 7:08 AM IST
Highlights

ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಕಾಂಗ್ರೆಸ್‌ ನಾಯಕಿಯೊಬ್ಬರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಕಾಂಗ್ರೆಸ್‌ ನಾಯಕಿಯೊಬ್ಬರು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್‌ ಅರ್ಜಿ ಸಲ್ಲಿಸಿದವರು. ಇವರು ಪಕ್ಷದ ವತಿಯಿಂದಲ್ಲ, ವೈಯಕ್ತಿಕ ನೆಲೆಗಟ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 2019ರಲ್ಲಿ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡ ಹೊರತು ಪಡಿಸಿದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶೇ.10ರಷ್ಟು ಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈ ನಿರ್ಧಾರವನ್ನು ನ.7ರಂದು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಈ ತೀರ್ಪನ್ನು ಕಾಂಗ್ರೆಸ್‌ ಮೊದಲು ಸ್ವಾಗತಿಸಿದ್ದರೂ ನಂತರ ನಿಲುವನ್ನು ಮರುಪರಿಶೀಲನೆ ಮಾಡುವುದಾಗಿ ಹೇಳಿತ್ತು. ದಕ್ಷಿಣದ ಡಿಎಂಎ ಸೇರಿ ಹಲವು ಪಕ್ಷಗಳು, ‘ಈ ತೀರ್ಪು ಎಸ್ಸಿಎಸ್ಟಿವರ್ಗಕ್ಕೆ ಮಾರಕ’ ಎಂದಿದ್ದವು.

ಮೇಲ್ವರ್ಗದ ಬಡವರ 10% ಮೀಸಲು ಉಳಿಯುತ್ತಾ? ಇಂದು ಸುಪ್ರೀಂ ತೀರ್ಪು

ಮೇಲ್ವರ್ಗ ಮೀಸಲು ದಾವೆ ಸಂವಿಧಾನ ಪೀಠಕ್ಕೆ ಈಗಲೇ ಇಲ್ಲ

ಮೇಲ್ವರ್ಗ ಮೀಸಲು ಜಾರಿ: ಷರತ್ತುಗಳು ಅನ್ವಯ!

ಗುಜರಾತಲ್ಲಿ ಇಂದಿನಿಂದ ಮೇಲ್ವರ್ಗ ಮೀಸಲಾತಿ ಜಾರಿ

click me!