ಕಾಂಗ್ರೆಸ್‌ ಪಕ್ಷವನ್ನು ತೊರೆದ ಹಿರಿಯ ನಾಯಕ ಗುಲಾಂ ನಬಿ ಅಜಾದ್‌!

By Santosh Naik  |  First Published Aug 26, 2022, 11:40 AM IST

ಕಾಂಗ್ರೆಸ್‌ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದ ಜಮ್ಮು ಕಾಶ್ಮೀರದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದಾರೆ. ಕಪಿಲ್‌ ಸಿಬಲ್‌ ಬಳಿಕ ಕಾಂಗ್ರೆಸ್‌ ಪಕ್ಷವನ್ನು ತೊರೆದ ಪ್ರಮುಖ ನಾಯಕ ಗುಲಾಂ ನಬಿ ಆಜಾದ್‌ ಆಗಿದ್ದಾರೆ.


ನವದೆಹಲಿ (ಆ. 26): ಕಾಂಗ್ರೆಸ್‌ ಪಕ್ಷದ ಪ್ರಮುಖ ಮುಖವಾಗಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿ ಎಲ್ಲಾ ಹುದ್ದೆಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದು, ಪಕ್ಷವನ್ನು ತೊರೆಯುವ ಬೃಹತ್‌ ನಿರ್ಧಾರ ಮಾಡಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರ ರಾಜ್ಯದ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಗುಲಾಂ ನಬಿ ಅಜಾದ್‌ ಅವರನ್ನು ಪಕ್ಷ ನೇಮಕ ಮಾಡಿತ್ತು. ಅದರೆ, ನೇಮಕ ಆದೇಶ ಬಂದ ಎರಡು ಗಂಟೆಯ ಒಳಗಾಗಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಗುಲಾಂ ನಬಿ ಆಜಾದ್‌ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಮುಂಬರುವ ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆಗಳ ಸಿದ್ಧತೆಯಲ್ಲಿ ತೊಡಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಇದು ದೊಡ್ಡ ಆಘಾತವಾಗಿದೆ. ಅಂದಾಜು ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ರಾಹುಲ್‌ ಗಾಂಧಿ ವಿರುದ್ಧ ತೀವ್ರ ಅಕ್ರೋಶ ಹೊರಹಾಕಿದ್ದಾರೆ. ರಾಹುಲ್‌ ಗಾಂಧಿಯವರ ವರ್ತನೆ ಚಿಕ್ಕ ಮಕ್ಕಳಂತೆ ಇದೆ. ಅದಲ್ಲದೆ, ಸ್ವಪಕ್ಷದಲ್ಲಿಯೇ ತಮ್ಮನ್ನು ಮೂಲೆಗುಂಪು ಮಾಡಿರುವ ಭಾವನೆ ತಮಗೆ ವ್ಯಕ್ತವಾಗಿದೆ ಎಂದು ಗುಲಾಂ ನಬಿ ಆಜಾದ್‌ ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. 

ಹಂಗಾಮಿ ಅಧ್ಯಕ್ಷರಿಗೆ ಸಲ್ಲಿಕೆ ಮಾಡಿರುವ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್‌, ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ತಮ್ಮ ಜೀವಿತದ ಅರ್ಧ ಅವಧಿಯನ್ನು ಪಕ್ಷದಲ್ಲಿಯೇ ಕಳೆದಿದ್ದೇನೆ ಎಂದಿರುವ ಗುಲಾಂ ನಬಿ ಆಜಾದ್‌, ಪಕ್ಷ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗೆ ಇದ್ದ ಆಪ್ತ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ಇಂದು ಕಾಂಗ್ರೆಸ್‌ ಪಕ್ಷದ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂದರೆ, ಅಲ್ಲಿಂದ ಪಕ್ಷ ವಾಪಾಸ್‌ ಗೆಲುವಿನ ಹಾದಿಗೆ ಬರುವುದು ಸುಲಭವಿಲ್ಲ ಎಂದು ಹೇಳಿದ್ದಾರೆ. ತಮ್ಮ ರಾಜೀನಾಮೆ ಪತ್ರದಲ್ಲಿ ಬಹಳ ವಿವರವಾಗಿ ಎಲ್ಲವರನ್ನೂ ಅವರು ಬರೆದುಕೊಂಡಿದ್ದು, ಒಂದು ದಿನಗಳ ಹಿಂದೆಯಷ್ಟೇ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಂಘಟನಾ ಸ್ಥಾನದ ಹುದ್ದೆಯಿಂದಲೂ ಕೆಳಗಿಳಿದಿದ್ದರು.

Ghulam Nabi Azad quits Congress

Read Story | https://t.co/Bb8HWDzck2 pic.twitter.com/wMJYXnpYlN

— ANI Digital (@ani_digital)

Tap to resize

Latest Videos

“ಇಡೀ ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯು ಒಂದು ಪ್ರಹಸನ ಮತ್ತು ನೆಪವಾಗಿದೆ. ದೇಶದಲ್ಲಿ ಎಲ್ಲಿಯೂ ಯಾವುದೇ ಸಂಘಟನೆಯ ಯಾವುದೇ ಹಂತದ ಚುನಾವಣೆಗಳು ನಡೆದಿಲ್ಲ. ಎಐಸಿಸಿಯ ಕೈಯಿಂದ ಆಯ್ಕೆಯಾದ ಲೆಫ್ಟಿನೆಂಟ್‌ಗಳನ್ನು ನಡೆಸುವ ಕೂಟವು ಸಿದ್ಧಪಡಿಸಿದ ಪಟ್ಟಿಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿದೆ. ಇವರುಗಳು ಎಐಸಿಸಿ 24 ಅಕ್ಬರ್ ರಸ್ತೆಯಲ್ಲಿ ಕುಳಿತಿದೆ ಎಂದು ಆಜಾದ್ ಬರೆದಿದ್ದಾರೆ.



ಜಮ್ಮು ಕಾಶ್ಮೀರ ರಾಜ್ಯದ ಪ್ರಚಾರ ಸಮಿತಿಗೆ ರಾಜೀನಾಮೆ, ಕಾಂಗ್ರೆಸ್‌ನಿಂದ ಆಜಾದ್ ಆಗ್ತಾರಾ ಗುಲಾಂ ನಬಿ?

ಜಮ್ಮು ಕಾಶ್ಮೀರ ರಾಜಕೀಯದ ಹಿರಿಯ ರಾಜಕಾರಣಿಯಾಗಿರುವ ಗುಲಾಂ ನಬಿ ಆಜಾದ್‌, ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದ ವ್ಯಕ್ತಿಯಾಗಿದ್ದಾರೆ. ಬಿಹಾರದ ಪ್ರಾದೇಶಿಕ ಪಕ್ಷವೊಂದು ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಆಫರ್‌ ಅನ್ನೂ ಇತ್ತೀಚೆಗೆ ನೀಡಿತ್ತು.ಆದರೆ, ಈ ಆಫರ್‌ ಅನ್ನು ಅವರು ತಿರಸ್ಕರಿಸಿದ್ದರು. ಕಾಂಗ್ರೆಸ್‌ ಪಕ್ಷದೊಂದಿಗೆ ನಾನು ರಾಜಕೀಯದಲ್ಲಿ ಇದ್ದಿದ್ದು ಇದು ಕೊನೆಯ ಬಾರಿ ಎಂದು ಈ ವೇಳೆ ಅವರು ಹೇಳಿದ್ದರು. ಕಾಂಗ್ರೆಸ್‌ನ ಇನ್ನೊಬ್ಬ ಪ್ರಭಾವಿ ನಾಯಕ ಆನಂದ್‌ ಶರ್ಮ ಅವರು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಗುಲಾಂ ನಬಿ ಆಜಾದ್‌ ಪಕ್ಷವನ್ನೇ ತೊರೆದಿದ್ದಾರ.ೆ ಪಕ್ಷದಲ್ಲಿ ತಮಗೆ ದೊಡ್ಡ ಮಟ್ಟದಲ್ಲಿ ಅವಮಾನವಾಗಿದೆ ಎಂದು ಆನಂದ್‌ ಶರ್ಮ ಹೇಳಿದ್ದರು. ಅವರೂ ಕೂಡ ಪಕ್ಷವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ.

ನನ್ನ ಕೆಲಸವನ್ನೊಬ್ಬರು ಗುರುತಿಸಿದರು: ಗುಲಾಂ ನಬಿ ಅಜಾದ್‌

ರಾಹುಲ್‌ ಗಾಂಧಿಯಿಂದ ಈ ಸ್ಥಿತಿ: ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಆಜಾದ್‌ ಸೇವೆ ಸಲ್ಲಿಸಿದ್ದರು. ರಾಹುಲ್‌ ಗಾಂಧಿಯವರ ನಿರ್ಧಾರದಿಂದ ಪಕ್ಷದಿಂದ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗಿದೆ. ನೀವು ಕೇವಲ ಪಕ್ಷದಲ್ಲಿ ಸಾಂಕೇಂತಿಕ ಅಧ್ಯಕ್ಷರು. ಆದರೆ, ಕಾಂಗ್ರೆಸ್‌ ಪಕ್ಷದ ಪ್ರಮುಖ ನಿರ್ಧಾರಗಳನ್ನು ರಾಹುಲ್‌ ಗಾಂಧಿ, ಅವರ ಪಿಎ ಹಾಗೂ ಭದ್ರತಾ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಗುಲಾಂ ನಬಿ ಆಜಾದ್‌ ಸೋನಿಯಾ ಗಾಂಧಿಯವರನ್ನು ಉಲ್ಲೇಖಿಸಿ ಪತ್ರದಲ್ಲಿ ಬರೆದಿದ್ದಾರೆ. ರಾಹುಲ್‌ ಗಾಂಧಿ ತೆಗೆದುಕೊಳ್ಳುವ ಬಾಲಿಶ ನಿರ್ಧಾರಗಳಿಂದಲೇ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಆರೋಪ ಮಾಡಿದ್ದಾರೆ.

click me!