ಡಿಆರ್‌ಡಿಒ ಮುಖ್ಯಸ್ಥರಾಗಿ ಸಮೀರ್‌ ಕಾಮತ್‌ ನೇಮಕ

Published : Aug 26, 2022, 10:33 AM ISTUpdated : Aug 26, 2022, 10:34 AM IST
ಡಿಆರ್‌ಡಿಒ ಮುಖ್ಯಸ್ಥರಾಗಿ ಸಮೀರ್‌ ಕಾಮತ್‌ ನೇಮಕ

ಸಾರಾಂಶ

ಹಿರಿಯ ವಿಜ್ಞಾನಿ ಸಮೀರ್‌ ವಿ. ಕಾಮತ್‌ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮುಖ್ಯಸ್ಥರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ.

ನವದೆಹಲಿ: ಹಿರಿಯ ವಿಜ್ಞಾನಿ ಸಮೀರ್‌ ವಿ. ಕಾಮತ್‌ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ಮುಖ್ಯಸ್ಥರನ್ನಾಗಿ ಗುರುವಾರ ನೇಮಕ ಮಾಡಲಾಗಿದೆ. ಇದುವರೆಗೂ ಈ ಸ್ಥಾನದಲ್ಲಿದ್ದ ಜಿ.ಸತೀಶ್‌ ರೆಡ್ಡಿ ಅವರು ಹುದ್ದೆಯಿಂದ ನಿವೃತ್ತರಾಗಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ವೈಜ್ಞಾನಿಕ ಸಲಹೆಗಾರರಾಗಿ ನೇಮಕಗೊಂಡ ಬೆನ್ನಲ್ಲೇ ಕಾಮತ್‌ ಅವರನ್ನು ಈ ಹುದ್ದೆಗೆ ನೇಮಿಸಲಾಗಿದೆ. 1989ರಲ್ಲಿ ಡಿಆರ್‌ಡಿಒಗೆ ಸೇರ್ಪಡೆಯಾಗಿದ್ದ ಕಾಮತ್‌, ನಂತರದ ಮೂರೂವರೆ ದಶಕಗಳಲ್ಲಿ ಹಲವು ಹಿರಿಯ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಸಂಪುಟದ ನೇಮಕಾತಿ ಸಮಿತಿಯು(ಎಸಿಸಿ) ಸಮೀರ್ ವಿ ಕಾಮತ್ ಅವರ ನೇಮಕಕ್ಕೆ ಅನುಮೋದನೆ ನೀಡಿದೆ. ಸಮೀರ್ ಅವರು ತಾವು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಅವರಿಗೆ 60 ವರ್ಷ ಪೂರೈಸುವವರೆಗೂ ಈ ಹುದ್ದೆಯಲ್ಲಿರಲಿದ್ದಾರೆ. ಸತೀಶ್ ರೆಡ್ಡಿ ಅವರನ್ನು 2018ರ ಆಗಸ್ಟ್‌ನಲ್ಲಿ ಎರಡು ವರ್ಷಗಳ ಕಾಲ ಡಿಆರ್‌ಡಿಒ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ನಂತರ 2020ರ ಆಗಸ್ಟ್ ನಲ್ಲಿ ಅವರ ಸೇವಾವಧಿಯನ್ನು ಮತ್ತೆರಡು ವರ್ಷಕ್ಕೆ ವಿಸ್ತರಿಸಲಾಗಿತ್ತು.

ಡಿಆರ್‌ಡಿಒ ಮುಖ್ಯಸ್ಥರಾಗಿ ಸಮೀರ್‌ ಕಾಮತ್‌ ನೇಮಕ

ಜೀವನದಲ್ಲಿ ದೊಡ್ಡ ಗುರಿ ಬೆನ್ನಟ್ಟಿ
ಕೆ.ಆರ್‌.ಪುರ: ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅದನ್ನು ಸಾಧಿಸಿಯೇ ತೀರುತ್ತೇನೆ ಎಂಬ ಮನೋ ಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ನೀವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದು ಡಿಆರ್‌ಡಿಒ ನಿವೃತ್ತ ಡೈರೆಕ್ಟರ್‌ ಜನರಲ್‌ ಡಾ ಜಿ.ಅತೀತನ್‌ ಸಲಹೆ ನೀಡಿದರು. ಕೇಂಬ್ರಿಡ್ಜ್‌ ಕಾಲೇಜಿನಲ್ಲಿ ಸ್ಮಾರ್ಟ್‌ ಇಂಡಿಯಾ ಕೇಂದ್ರ ಮಾನವ ಸಂಪನ್ಮೂಲ ಇನ್ನೋವೇಷನ್‌ ಸೆಲ್‌ ಮತ್ತು ಅಖಿಲ ಭಾರತ ತಾಂತ್ರಿಕ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ಹ್ಯಾಕಥಾನ್‌-2022 ಅನ್ನು ಉದ್ಘಾಟಿಸಿ ಮಾತನಾಡಿದರು.

ಯಶಸ್ವಿ ಕ್ಷಿಪಣಿ ಪರೀಕ್ಷೆ ನಡೆಸಿದ ಡಿಆರ್‌ಡಿಓ-ನೌಕಾಸೇನೆ

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌-2022 ದೇಶದ 75 ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿದ್ದು, ಕರ್ನಾಟಕದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಡಲು ಆಯ್ಕೆಯಾಗಿರುವ ಕಾಲೇಜುಗಳ ಪೈಕಿ ಕೇಂಬ್ರಿಡ್ಜ್‌ ತಾಂತ್ರಿಕ ಮಹಾವಿದ್ಯಾಲಯವು ಒಂದಾಗಿದೆ. ಇಲ್ಲಿ 30 ತಂಡಗಳು ಭಾಗವಹಿಸಿದ್ದು, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಿಂದ ಈ ಹ್ಯಾಕಥಾನ್‌ನಲ್ಲಿ ಸ್ಪರ್ಧಿಸಿದ್ದಾರೆ. ವಿಪ್ರೋ ಸಂಸ್ಥೆಯ ಆಡ್ವಿಜ್‌ ವಿಭಾಗದ ಕಾರ್ಯಕ್ರಮ ನಿರ್ದೇಶಕ ಡಾ.ಯು.ಚಂದ್ರಶೇಖರ್‌, ಕೇಂಬ್ರಿಡ್ಜ್‌ ಸಮೂಹ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಡಿ.ಕೆ.ಮೋಹನ್‌, ಪ್ರಾಂಶುಪಾಲೆ ಡಾ ಜಿ.ಇಂದುಮತಿ, ರಿಜಿಸ್ಟಾರ್‌ ಪ್ರೊ.
ಕೃಷ್ಣಕುಮಾರ್‌, ನೋಡಲ್‌ ಆಫೀಸರ್‌ ಡಾ. ವರಲಕ್ಷ್ಮಿ ಭಾಗವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬರ್ತ್‌ಡೇ ಪಾರ್ಟಿಯ ಥ್ರಿಲ್ ರೈಡ್ ಆಯ್ತು ಲಾಸ್ಟ್ ರೈಡ್: ನಾಲ್ವರು ಸ್ನೇಹಿತರು ಜೊತೆಗೆ ಸಾವು
Viral Video: ಗುಜರಾತ್‌ ಕರಾವಳಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕುದಿಯಲು ಆರಂಭಿಸಿದ ಸಮುದ್ರ ನೀರು, ಅಧಿಕಾರಿಗಳು ಅಲರ್ಟ್‌!