
ಲಕ್ನೋ(ಆ.17): 2022ರ ಉತ್ತರ ಪ್ರೇದೇಶ ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ಪಕ್ಷ, ಜನರನ್ನು ತಲುಪಲು ರಾಜ್ಯದ 75 ಜಿಲ್ಲೆಗಳ 30 ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ತಲಾ 75 ಗಂಟೆಗಳನ್ನು ಕಳೆಯಲು ಕಾಂಗ್ರೆಸ್ ನಾಯಕರಿಗೆ ಹಾಗೂ ಪಕ್ಷದ ಕಾರ್ಯಕತರಿಗೆ ಸಲಹೆ ನೀಡಿದೆ.
ಕಾಂಗ್ರೆಸ್ ನಡೆಸುತ್ತಿರುವ ‘ಜೈ ಭಾರತ್ ಮಹಾಸಂಪರ್ಕ ಅಭಿಯಾನ’ ಆಗಸ್ಟ್ 19ರಿಂದ ಆರಂಭವಾಗಲಿದೆ. ‘ಜನರನ್ನು ನೇರವಾಗಿ ಭೇಟಿ ಮಾಡಿ ಪಕ್ಷದ ಕಾರ್ಯಗಳನ್ನು ತಿಳಿಸಲು 75 ಜಿಲ್ಲೆಗಳಲ್ಲಿ ತಲಾ 75 ಗಂಟೆಗಳನ್ನು ಕಳೆಯಲು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ತಿಳಿಸಲಾಗಿದೆ.
ನಮ್ಮ ಪಕ್ಷ ಮುಂಖ್ಯಮಂತ್ರಿ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿಲ್ಲ. ರಾಜ್ಯದ 403 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸ್ಪರ್ಧೆ ಮಾಡುತ್ತದೆ. ಅಭಿಯಾನದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಗ್ರಾಮದ ಜನರ ಮನೆಯಲ್ಲೇ ಉಳಿದುಕೊಂಡು ಅವರ ಕಷ್ಟಸುಖ ಆಲಿಸುತ್ತಾರೆ. ದಿನಕ್ಕೆ ಒಂದು ಗಂಟೆ ಶ್ರಮದಾನ ಮಾಡುತ್ತಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಪ ಪ್ರಭಾರಿ ಗುರ್ಜಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ