ಭಾರತಕ್ಕೆ ಆಗಮಿಸಲು ಇಚ್ಚಿಸುವ ಆಫ್ಘಾನ್ ಹಿಂದೂ, ಸಿಖ್‌ರಿಗೆ ನೆರವು ಘೋಷಿಸಿದ ಕೇಂದ್ರ!

By Suvarna NewsFirst Published Aug 16, 2021, 8:57 PM IST
Highlights
  • ತಾಲಿಬಾನ್ ಅಟ್ಟಹಾಸದಿಂದ ನರಕವಾದ ಆಫ್ಘಾನಿಸ್ತಾನ
  • ಭಾರತಕ್ಕೆ ಆಗಮಿಸಲು ಇಚ್ಚಿಸುವ ಹಿಂದೂ ಸಿಖ್‌ರಿಗೆ ನೆರವು
  • ಭಾರತೀಯರಿಗೆ ಸುರಕ್ಷತೆ ಒದಗಿಸಲು ಆಫ್ಘಾನ್ ಸರ್ಕಾರಕ್ಕೆ ಸೂಚಿಸಿದ ಭಾರತ

ನವದೆಹಲಿ(ಆ.16): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸಕ್ಕೆ ಜನರು ಬೀದಿ ಹೆಣವಾಗುತ್ತಿದ್ದಾರೆ. ಆಫ್ಘಾನಿಸ್ತಾನ ಸರ್ಕಾರವೇ ಇದೀಗ ತಾಲಿಬಾನ್ ಉಗ್ರರ ಕೈಯಲ್ಲಿದೆ. ಆಫ್ಘಾನಿಸ್ತಾನದಲ್ಲಿ ನೆಲೆಸಿರುವ ಇತರ ದೇಶದ ಮಂದಿ ಸೇರಿದಂತೆ ಸ್ಥಳೀಯರು ಕೂಡ ಆಫ್ಘಾನ್ ತೊರೆಯಲು ಹಾತೊರೆಯತ್ತಿದ್ದಾರೆ. ಇದರ ನಡುವೆ ಕೇಂದ್ರ ಸರ್ಕಾರ ಭಾರತಕ್ಕೆ ಆಗಮಿಸಲು ಇಚ್ಚಿಸುವ ಆಫ್ಘಾನಿಸ್ತಾನದ ಹಿಂದೂ ಹಾಗೂ ಸಿಖ್‌ರಿಗ ನೆರವು ನೀಡುವುದಾಗಿ ಘೋಷಿಸಿದೆ.

4 ಕಾರು, 1 ಹೆಲಿಕಾಪ್ಟರ್‌ನಲ್ಲಿ ಹಣ ತುಂಬಿಕೊಂಡು ಪರಾರಿಯಾದ ಆಫ್ಘಾನ್ ಅಧ್ಯಕ್ಷ!

ಉಗ್ರ ರಾಷ್ಟ್ರವನ್ನು ತೊರೆಯಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೂಕು ನುಗ್ಗಲು ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಮಾನ ನಿಲ್ದಾಣದಲ್ಲಿ ಉಗ್ರರ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದರು. ಇನ್ನು ವಿಮಾನದಿಂದ ಕೆಳಕ್ಕೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಉಗ್ರರ ಫೈರಿಂಗ್ ಕಾರಣ ವಿಮಾನ ಸೇವೆ ಸ್ಥಗಿತಗೊಂಡಿದೆ. ಇದೀಗ ಹಲವರು ಆಫ್ಘಾನಿಸ್ತಾನ ತೊರೆಯಲು ಮುಂದಾಗಿದ್ದಾರೆ. ಇವರಿಗೆ ನೆರವು ನೀಡಬೇಕು ಎಂದು ವಿಶ್ವಸಂಸ್ಥೆ ಎಲ್ಲಾ ರಾಷ್ಟ್ರಗಳಲ್ಲಿ ಮನವಿ ಮಾಡಿದೆ. ಇದರ ಬೆನ್ನಲ್ಲೇ ಭಾರತ ಆಫ್ಘಾನ್‌ನಲ್ಲಿ ನೆಲೆಸಿರುವ ಹಿಂದೂ ಹಾಗೂ ಸಿಖ್‌ರಿಗೆ ನೆರವು ನೀಡುವುದಾಗಿ ಹೇಳಿದೆ.

ತಾಲಿಬಾನ್‌ನಿಂದ ಆಫ್ಘಾನ್ ರಕ್ಷಣೆ, ಉಗ್ರರ ಹೊಗಳಿದ ಸಮಾಜವಾದಿ ಪಕ್ಷದ ನಾಯಕ!

ಆಫ್ಘಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸೂಕ್ತ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಆಫ್ಘಾನಿಸ್ತಾನ ವಿದೇಶಾಂಕ ಸಚಿವಾಲಯಕ್ಕೆ ಸೂಚಿಸಿದೆ.  ಭಾರತೀಯರಿಗೆ ಭದ್ರತೆ ಹಾಗೂ ರಕ್ಷಣೆ ನೀಡಲು ಸೂಚಿಸಲಾಗಿದೆ. ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಲು ಕ್ರಮ ಕೈಗೊಳ್ಳಲು  ಆಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯಕ್ಕೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

ಕಾಬೂಲ್‌ ವಿಮಾನ ಸೇವೆ ಸ್ಥಗಿತಗೊಂಡಿದೆ. ಕಾಬೂಲ್ ಸಂಪೂರ್ಣ ತಾಲಿಬಾನ್ ಉಗ್ರರೇ ತುಂಬಿಕೊಂಡಿದ್ದಾರೆ. ಹೀಗಾಗಿ ಪರಿಸ್ಥಿತಿ ತಿಳಿಗೊಂಡ ಬಳಿಕ ವಿಮಾನ ಸೇವೆ ಆರಂಭಗೊಳ್ಳುವ ಸಾಧ್ಯತೆ ಇದೆ. ವಿಮನ ಸೇವೆ ಆರಂಭಗೊಂಡ ಬಳಿಕ ಭಾರತೀಯರನ್ನು ಕಳುಹಿಸುವ ಕಾರ್ಯ ಆರಂಭಗೊಳ್ಳಲಿದೆ ಎಂದು ಆಫ್ಘಾನ್ ಹೇಳಿದೆ.

click me!