Congress Tweet ಮೋದಿ ಭಾಷಣದ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಫೋಟೋ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್!

By Suvarna News  |  First Published Feb 8, 2022, 1:00 AM IST
  • ಕಾಂಗ್ರೆಸ್ ಅಧಿಕೃತ ಖಾತೆಗಳಲ್ಲಿ ಮಣಿಶಂಕರ್ ಅಯ್ಯರ್ ಫೋಟೋ
  • ಕೇವಲ ಫೋಟೋ ಪೋಸ್ಟ್ ಮಾಡಿ ಊಹಾಪೋಹ ಸೃಷ್ಟಿಸಿದ ಕಾಂಗ್ರೆಸ್
  • ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಬೆನ್ನಲ್ಲೇ ಕಾಂಗ್ರೆಸ್ ಹೊಸ ನಡೆ
     

ನವದೆಹಲಿ(ಫೆ.08): ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ರಾಷ್ಟ್ರಪತಿ ವಂದನಾ ನಿರ್ಣಯ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದ್ದಾರೆ. ಮೋದಿ ಖಡಕ್ ಮಾತುಗಳಿಂದ ಪೇಚಿಗೆ ಸಿಲುಕಿದ ಕಾಂಗ್ರೆಸ್(Congress)  ಸಾಮಾಜಿಕ ಜಾಲತಾಣದಲ್ಲಿ ಹೊಸ ತಂತ್ರ ಪ್ರಯೋಗಿಸಿದೆ. ಮೋದಿ ಭಾಷಣದ ಬೆನ್ನಲ್ಲೇ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್(Mani Shankar Aiyar) ಫೋಟೋ ಪೋಸ್ಟ್ ಮಾಡಿದೆ.

ಪ್ರಧಾನಿ ಮೋದಿ ಲೋಕಸಭೆಯಲ್ಲಿ(Lok Sabha) ಕಾಂಗ್ರೆಸ್ ಆರೋಪಗಳಿಗೆ ತಕ್ಕ ತಿರುಗೇಟು ನೀಡಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಒಡೆದು ಒಳುವ ನೀತಿಯಿಂದಲೇ ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್‌ನ ನಾಯಕನಾಗಿರುವುದು ಎಂದು ಮೋದಿ ಹೇಳಿದ್ದಾರೆ. ಇನ್ನು ಹಣದುಬ್ಬರ(Inflation) ಹಾಗೂ ನೆಹರು(Jawaharlal Nehru) ಮಾತುಗಳು, ಪಿ ಚಿದಂಬರಂ(P Chidambaran) ಮಾತುಗಳನ್ನು ಉಲ್ಲೇಖಿಸಿದ ಮೋದಿ ಪರಿಸ್ಥಿತಿಗೆ ತಕ್ಕಂತೆ ವರಸೆ ಬದಲಿಸುವ ಕಾಂಗ್ರೆಸ್ ಮುಖವಾಡ ಕಳಚಿದ್ದಾರೆ. ಮೋದಿ ಮಾತುಗಳು ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್, ಮಣಿಶಂಕರ್ ಅಯ್ಯರ್ ಫೋಟೋ ಪೋಸ್ಟ್ ಮಾಡಿದೆ. ಫೋಟೋಗೆ ಯಾವುದೇ ಬರಹ ನೀಡಿಲ್ಲ, ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಇದು ನೆಟ್ಟಿಗರ ಗೊಂದಲಕ್ಕೆ ಕಾರಣವಾಗಿದೆ.

Tap to resize

Latest Videos

Inflation ಕಾಂಗ್ರೆಸ್‌ಗೆ ಮುಳುವಾಯ್ತು ನೆಹರು, ಚಿದಂಬರಂ ಹಣದುಬ್ಬರ ನೀತಿ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

ಚತ್ತೀಸಘಡ ಕಾಂಗ್ರೆಸ್, ಉತ್ತರ ಪ್ರದೇಶ ಕಾಂಗ್ರೆಸ್, ತೆಲಂಗಾಣ ಕಾಂಗ್ರೆಸ್, ರಾಜಸ್ಥಾನ ಕಾಂಗ್ರೆಸ್ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್ ಅಧಿಕತ ಟ್ವಿಟರ್ ಖಾತೆಯಲ್ಲಿ ಮಣಿಶಂಕರ್ ಅಯ್ಯರ್ ಫೋಟೋ ರಾರಾಜಿಸುತ್ತಿದೆ. ಇದು ಯಾವ ಕಾರಣಕ್ಕೆ ಅನ್ನೋ ಗುಟ್ಟನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿಲ್ಲ.  

 

pic.twitter.com/J3bxiiLFcv

— UP Congress (@INCUttarPradesh)

ಕಾಂಗ್ರೆಸ್ ಮಣಿಶಂಕರ್ ಅಯ್ಯರ್ ಫೋಟೋ ಪೋಸ್ಟ್ ಮಾಡಿ ಮೋದಿ ವೈರಲ್ ಮಾತುಗಳ ಕಡೆಗಿದ್ದ ಗಮನವನ್ನು ತಕ್ಕಮಟ್ಟಿಗೆ ಬೇರೆಡೆಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್ ಪೋಸ್ಟ್‌ಗೆ ಬಿಜೆಪಿ ವ್ಯಂಗ್ಯವಾಡಿದೆ. ಬಿಜೆಪಿ ಸಾಮಾಜಿಕ ಜಾಲತಾಣದ ರಾಷ್ಟ್ರೀಯ ಉಸ್ತುವಾರಿ ಧವಲ್ ಪಟೇಲ್ ಟ್ವೀಟ್ ಮೂಲಕ ಕಾಂಗ್ರೆಸ್ ಕುಟುಕಿದ್ದಾರೆ. 

 

Mani Shankar Aiyer wanted Pakistan to remove PM and bring Congress rule in India.

It seems after a blistering speech of PM Modi in the parliament, Congress is reiterating that appeal to Pakistan. pic.twitter.com/HnVanTFWvF

— Dhaval Patel (@dhaval241086)

ಪ್ರಧಾನಿ ನರೇಂದ್ರ ಮೋದಿಯ ಲೋಕಸಭೆಯಲ್ಲಿ ಮಾಡಿದ ಭಾಷಣ ಆಲಿಸಿದ ಕಾಂಗ್ರೆಸ್ ದಿಕ್ಕು ತೋಚದಂತಾಗಿದೆ. ಈ ಭಾಷಣ ಆಲಿಸಿದ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿಯನ್ನು ಕೆಳಗಿಳಿಸಿ , ಕಾಂಗ್ರೆಸ್ ಆಳ್ವಿಕೆ ಮಾಡುವಂತೆ ಪಾಕಿಸ್ತಾನದ ಬಳಿ ಮನವಿ ಮಾಡುವಂತಿದೆ ಎಂದು ಧವಲ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಈ ನಡೆ ಹಲವರಲ್ಲಿ ಗೊಂದಲ ಸೃಷ್ಟಿಸಿದೆ. ಕಾಂಗ್ರೆಸ್ ದಿಢೀರ್ ಮಣಿಶಂಕರ್ ಅಯ್ಯರ್ ಫೋಟೋ ಪೋಸ್ಟ್ ಮಾಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಮೋದಿ ಭಾಷಣಕ್ಕೆ ಮಣಿಶಂಕರ್ ಅಯ್ಯರ್ ಉತ್ತರ ನೀಡುವು ಸಾಧ್ಯತೆಗಳಿದೆಯಾ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಮಣಿಶಂಕರ್ ಅಯ್ಯರ್ ಆರೋಗ್ಯಕ್ಕೆ ಸಮಸ್ಯೆಯಾಗಿದೆಯಾ? ಯಾವ ಕಾರಣಕ್ಕೆ ಅಯ್ಯರ್ ಫೋಟೋ ಹಾಕಲಾಗಿದೆ ಎಂಬುದನ್ನು ತಿಳಿಸಿ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

News Hour: ಮೇಕ್ ಇನ್ ಇಂಡಿಯಾದ ಮಹತ್ವ ಸಾರಿದ ಮೋದಿ,  ಹೊಸದಾಗಿ ಕಾಣಿಸಿಕೊಂಡ ನೀಲಿ ಶಾಲು

ಹಣದುಬ್ಬರಕ್ಕೆ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ಗೆ ಮೋದಿ ತಿರುಗೇಟು!
ಕೊರಿಯಾದಲ್ಲಿನ ಯುದ್ಧದಿಂದ ಹಣದುಬ್ಬರವಾಗಿದೆ ಎಂದು ನೆಹರೂ ಹೇಳಿದ್ದರು. ಇದೀಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕೊರೋನಾ ಕಾರಣ ಎನ್ನುತ್ತಿತ್ತು. ಕೊರೋನಾ ನಡುವೆ ಭಾರತದ ಹಣದುಬ್ಬರ ನಿಯಂತ್ರಣದಲ್ಲಿದೆ. ಆಹಾರ ಹಣದುಬ್ಬರವು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ. ಹಣದುಬ್ಬರ ನಿಯಂತ್ರಣ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ ಎಂದು ಪಿ ಚಿದಂಬರಂ ಇದೇ ಸದನದಲ್ಲಿ ನಾಚಿಕೆ ಇಲ್ಲದೆ ಹೇಳಿದ್ದೀರಿ. 15 ರೂಪಾಯಿ ಕೊಟ್ಟು ನೀರು ಖರೀದಿಸುವ ಜನರಿಗೆ ಗೋಧಿಯಲ್ಲಿ 1 ರೂಪಾಯಿ ಹೆಚ್ಚಾದರೆ ಸಮಸ್ಯೆಯಾಗುತ್ತದೆ ಎಂದು ಚಿದಂಬರಂ ಮಾತನ್ನು ಮೋದಿ ಉಲ್ಲೇಖಿಸಿದ್ದಾರೆ.

click me!