ಭಾರತ ಮೂಲದ ಅಮೆರಿಕನ್‌ ಸಾಧಕಿ ಗೀತಾಂಜಲಿ ರಾವ್ ಜತೆ ಸಂವಾದ, ನೀವೂ ಪಾಲ್ಗೊಳ್ಳಿ

Published : Feb 07, 2022, 11:37 PM ISTUpdated : Feb 07, 2022, 11:38 PM IST
ಭಾರತ ಮೂಲದ ಅಮೆರಿಕನ್‌ ಸಾಧಕಿ ಗೀತಾಂಜಲಿ ರಾವ್ ಜತೆ ಸಂವಾದ, ನೀವೂ ಪಾಲ್ಗೊಳ್ಳಿ

ಸಾರಾಂಶ

* ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ * ಭಾರತ ಮೂಲದ ಅಮೆರಿಕನ್‌ ಸಾಧಕಿ ಗೀತಾಂಜಲಿ ರಾವ್ ಜತೆ ಸಂವಾದ * ಫೆಬ್ರವರಿ 11ರ ಶುಕ್ರವಾರದಂದು ನಡೆಯಲಿರುವ ಸಂವಾದ

ಚೆನ್ನೈ, (ಫೆ.07):  ಚೆನ್ನೈನಲ್ಲಿರುವ ಅಮೆರಿಕಾ ದೂತಾವಾಸವು ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆ ಆಯೋಜಿಸಿದೆ.

ಫೆಬ್ರವರಿ 11ರ ಶುಕ್ರವಾರದಂದು ನಡೆಯಲಿರುವ ವಿಜ್ಞಾನ ವಲಯದಲ್ಲಿನ ಮಹಿಳೆ ಮತ್ತು ಬಾಲಕಿಯರ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಭಾರತ ಮೂಲದ ಅಮೆರಿಕನ್‌ ಹದಿಹರೆಯದ ಸಂಶೋಧಕಿ ಮತ್ತು ವಿಜ್ಞಾನಿ ಗೀತಾಂಜಲಿ ರಾವ್ ಅವರು ಭಾಗವಹಿಸಲಿದ್ದಾರೆ. ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈನ ಅಮೇರಿಕಾದೂತಾವಾಸಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

Motivational story: ಈಕೆ ತೋಳುಗಳೇ ಇಲ್ಲದ ವಿಮಾನ ಪೈಲಟ್!

ಡಯಾಸ್ಪೊರಾ ಡಿಪ್ಲೊಮಸಿ ಸರಣಿಯ ಆರನೇ ಕಾರ್ಯಕ್ರಮ ವರ್ಚುವಲ್ ಆಗಿ ಫೆಬ್ರವರಿ 11ರ ಸಂಜೆ 6:45ಕ್ಕೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಐದು ನಿಮಿಷಗಳ ಅವಧಿಯ "ಸರ್ಚ್ ಆನ್: ಪಾಸಿಟಿವ್‌ ಕರೆಂಟ್" ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ರಾವ್ ಅವರ ಆವಿಷ್ಕಾರಗಳಲ್ಲಿ ಒಂದಾದ ನೀರಿನಲ್ಲಿ ಸೀಸದ ಮಾಲಿನ್ಯ ಪತ್ತೆ ಹಚ್ಚುವ ಮೊಬೈಲ್‌ ಸಾಧನದ ವಿವರ ಇದರಲ್ಲಿದೆ.

"ವೈ ವೇಸ್ಟ್?" ಎನ್‌ಜಿಒ ಸಂಸ್ಥಾಪಕಿ, "ವಾಟರ್‌ಗರ್ಲ್‌ ಆಫ್ಇಂಡಿಯಾ" ಎಂದೇ ಹೆಸರಾಗಿರುವ ಬೆಂಗಳೂರು ಮೂಲದ ಪರಿಸರ ಹೋರಾಟಗಾರ್ತಿ ಗರ್ವಿತಾ ಗುಲ್ಹಾಟಿ ಅವರು ಗೀತಾಂಜಲಿರಾವ್ ಅವರ ಸಂದರ್ಶನ ನಡೆಸಲಿದ್ದಾರೆ. ಈಸಂವಾದದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತ (STEM) ಪ್ರೀತಿಯಿಟ್ಟುಕೊಂಡಿರುವ ಭಾರತೀಯ ಮೂಲದ ಅಮೆರಿಕನ್ ಎಂಬ ಗುರುತಿನಲ್ಲಿ ಬೆಳೆಯುವ ಪಯಣದ ಬಗ್ಗೆ ಮಾತನಾಡಲಿದ್ದಾರೆ. ಇದಲ್ಲದೆ STEM ಕಲಿತ ಹೆಣ್ಣು ಮಕ್ಕಳು ಹೇಗೆ ವಿಶ್ವವನ್ನು ಬದಲಿಸಬಲ್ಲರು ಎಂಬ ಕನಸನ್ನು ಹಂಚಿಕೊಳ್ಳಲಿದ್ದಾರೆ. ಹಾಗೆಯೆ ಅಮೆರಿಕಾದಲ್ಲಿನ ಪ್ರಯೋಗಾತ್ಮಕ ಕಲಿಕೆಯ ಅವಕಾಶಗಳು ಮತ್ತು ಅಮೆರಿಕನ್‌ ಶಾಲೆಗಳಲ್ಲಿ STEM ಶಿಕ್ಷಣದ ಕುರಿತು ಚರ್ಚಿಸಲಿದ್ದಾರೆ.

ರಾವ್ ಅವರ ಆವಿಷ್ಕಾರಗಳು ಮತ್ತು ಭಾರತ ಸೇರಿದಂತೆ ಜಗತ್ತಿನಾದ್ಯಂತ ಯುವ ಜನರಿಗಾಗಿ ಅವರು ನಡೆಸುವ STEM ಕಾರ್ಯಾಗಾರಗಳನ್ನು ಗುರುತಿಸಿ 2020 ರಲ್ಲಿ TIME ನಿಯತಕಾಲಿಕೆ ಅದೇ ಮೊದಲ ಬಾರಿ ಸ್ಥಾಪಿಸಲಾದ “ಕಿಡ್ ಆಫ್ ದ ಇಯರ್” ಪುರಸ್ಕಾರ ನೀಡಲಾಯಿತು. ಈ ವರ್ಚುವಲ್‌ ಪ್ರೋಗ್ರಾಂನಲ್ಲಿ ಭಾಗವಹಿಸಲು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ರಾವ್ ಅವರು ಸಭಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ಜೂಮ್ ಪ್ರಶ್ನೋತ್ತರ ಚಾಟ್ ಬಾಕ್ಸ್‌ನಲ್ಲಿ ತಮ್ಮ ಪ್ರಶ್ನೆಗಳನ್ನು ಕಳಿಸಲು ಅವಕಾಶವಿದೆ. 

ಗೀತಾಂಜಲಿ ರಾವ್‌ ಬಗ್ಗೆ
ಗೀತಾಂಜಲಿ ರಾವ್ ಅವರು ಸಂಶೋಧಕರು, ವಿಜ್ಞಾನಿ, ಲೇಖಕರು, ಹಾಗೂ ಭಾಷಣಕಾರರು ಮತ್ತು ಪ್ರಪಂಚದಾದ್ಯಂತ STEM ಶಿಕ್ಷಣದ ಸಕ್ರಿಯ ಪ್ರವರ್ತಕರು. ಅವರು ಅಮೆರಿಕದ ಉನ್ನತ ಯುವ ವಿಜ್ಞಾನಿ ಎಂದು ಗುರುತಿಸಲ್ಪಟ್ಟಿದ್ದಾರೆ. ಸೀಸದ ಮಾಲಿನ್ಯ ಪತ್ತೆ ಸಾಧನವಾದ ಟೆಥಿಸ್‌ನ ಆವಿಷ್ಕಾರಕ್ಕಾಗಿ ಯುಎಸ್‌ ಪರಿಸರ ಸಂರಕ್ಷಣಾ ಸಂಸ್ಥೆ ಅಧ್ಯಕ್ಷೀಯ ಪ್ರಶಸ್ತಿಯೂ ಸಂದಿದೆ . ಕೃತಕ ಬುದ್ಧಿ ಮತ್ತೆ ಮತ್ತು ನ್ಯಾಚುರಲ್‌ ಲಾಂಗ್ವೇಜ್‌ ಪ್ರೊಸೆಸಿಂಗ್ ಅನ್ನು ಬಳಸುವ Kindly ಎಂಬ ಅವರ ಆವಿಷ್ಕಾರ ಸೈಬರ್- ಬುಲ್ಲಿಯಿಂಗ್ ಅನ್ನು ತಡೆಯುವಲ್ಲಿ ಪ್ರಭಾವ ಬೀರಿತು.

2019 ರಲ್ಲಿ ಫೋರ್ಬ್ಸ್‌ನ 30 ವರ್ಷದೊಳಗಿನ ವಿಜ್ಞಾನಿಗಳಲ್ಲಿ 30 ಮತ್ತು ಟೈಮ್‌ ಮ್ಯಾಗಜೀನ್‌ನ ಟಾಪ್ ಯಂಗ್ ಇನ್ನೋವೇಟರ್‌ ಮತ್ತು STEM ಶಿಕ್ಷಣದ ಆವಿಷ್ಕಾರಗಳು ಮತ್ತು ಪ್ರಚಾರಕ್ಕಾಗಿ ವರ್ಷದ ಮೊದಲ ಬಾಲೆ ಎಂದು ಗೌರವಿಸಲಾಯಿತು. ಅವರು ತಮ್ಮ ಕಾರ್ಯಾಗಾರಗಳ ಮೂಲಕ ಆರು ಖಂಡಗಳು ಮತ್ತು 37 ದೇಶಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ 58,000 ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ.

ಗೀತಾಂಜಲಿ ಅವರು ಎ ಯಂಗ್ ಇನ್ನೋವೇಟರ್ಸ್‌ ಗೈಡ್‌ ಟು STEM ಪುಸ್ತಕದ ಲೇಖಕರಾಗಿದ್ದಾರೆ. ಇದು ಸ್ವಯಂ-ಅಭಿವೃದ್ಧಿಪಡಿಸಿದ ಪ್ರಿಸ್ಕ್ರಿಪ್ಟಿವ್ ಐದು-ಹಂತದ ಆವಿಷ್ಕಾರ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ.

ಕೀನ್ಯಾದಲ್ಲಿ ನಕಕುಮಾ ನಿರಾಶ್ರಿತರ ಶಿಬಿರ ಶಾಲೆಗಳು ಮತ್ತು ಘಾನಾದಲ್ಲಿನ ಕೆಲವು ಪ್ರೌಢ ಶಾಲೆಗಳಲ್ಲಿ ಈ ಪುಸ್ತಕವನ್ನು ಅಧಿಕೃತವಾಗಿ STEM ಪಠ್ಯಕ್ರಮವಾಗಿ ಅಳವಡಿಸಿಕೊಳ್ಳಲಾಗಿದೆ. ಅವರು 2021 ರಲ್ಲಿ ಪ್ರುಡೆನ್ಶಿಯಲ್‌ ನಿಂದ ಅಮೆರಿಕದ ಉನ್ನತ ಯುವ ಸ್ವಯಂಸೇವಕರಲ್ಲಿ ಒಬ್ಬರಾಗಿ ಗೌರವಿಸಲ್ಪಟ್ಟರು ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸಲು ವಿಜ್ಞಾನವನ್ನು ಬಳಸುವುದಕ್ಕಾಗಿ UNICEF ಯುವನೇತಾರರಾಗಿ ನಿಯೋಜನೆಗೊಂಡಿದ್ದಾರೆ. ಅವರುಇತ್ತೀಚೆಗೆ STEM ಶಿಕ್ಷಣವನ್ನು ಉತ್ತೇಜಿಸಲು ನ್ಯಾಷನಲ್‌ ಜಿಯೋಗ್ರಾಫಿಕ್‌ ಯಂಗ್ ಎಕ್ಸ್‌ಪ್ಲೋರರ್‌ ಆಗಿ ಅನುದಾನ ಪಡೆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
20 ತಿಂಗಳಲ್ಲಿ ಶೇ.55,000ರಷ್ಟು ಏರಿಕೆ ಷೇರು! ಅಚ್ಚರಿ!