Chalo Delhi: SIR ವಿರೋಧಿಸಿ ದೆಹಲಿಯಲ್ಲಿಂದು ಕಾಂಗ್ರೆಸ್ ಪ್ರತಿಭಟನೆ, ಎಷ್ಟು ಜನರ ಸೇರಿದ್ರು?

Published : Nov 01, 2026, 10:16 AM IST
Congress mega protest rally in Delhi

ಸಾರಾಂಶ

ಚುನಾವಣಾ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿವೆ. ರಾಹುಲ್ ಗಾಂಧಿ ಕರೆಯ ಮೇರೆಗೆ ಸಾವಿರಾರು ಕಾರ್ಯಕರ್ತರು ಸೇರಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ .

ನವದೆಹಲಿ (ನ.1): SIR, ಚುನಾವಣಾ ಅಕ್ರಮ ಆರೋಪ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್(Congress) ಇಂಡಿಯಾ ಒಕ್ಕೂಟ(Indi Bloc)ದ ನಾಯಕರು ಇಂದು ದೆಹಲಿಯ ರಾಮಲೀಲಾ ಮೈದಾನ(Ramlila Maidan)ದಲ್ಲಿ ಬೃಹತ್ ಪ್ರತಿಭಟನಾ ರಾಲಿ ನಡೆಸಲಿದ್ದಾರೆ.

ಕಾಂಗ್ರೆಸ್ ಶಾಸಕ ರಾಹುಲ್ ಗಾಂಧಿ ಶನಿವಾರವೇ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ರ‍್ಯಾಲಿ ನಡೆಯುವ ಮಾರ್ಗದ ವಿವರ ಕುರಿತು ಹೇಳಿದ್ದೇನೆಂದರೆ 'ನಾಳೆ ಭೇಟಿಯಾಗೋಣ, ಒಟ್ಟಿಗೆ ಹೆಜ್ಜೆ ಹಾಕೋಣ. ಕನಾಟ್ ಪ್ಲೇಸ್, ಮಿಂಟೋ ರಸ್ತೆ ಜಂಕ್ಷನ್, ಅಜ್ಮೇರಿ ಗೇಟ್ ಮೂಲಕ ರಾಮಲೀಲಾ ಮೈದಾನಕ್ಕೆ ಬರೋಣ' ಎಂದು ಕರೆ ನೀಡಿದ್ದರು ಜೊತೆಗೆ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇಂದು ಬೆಳಗಿನಿಂದಲೇ ರಾಮಲೀಲಾ ಮೈದಾನದಲ್ಲಿ ಜನರು ಜಮಾಯಿಸುತ್ತಿದ್ದಾರೆ.

ಇದನ್ನೂ ಓದಿ: SIR ವಿರೋಧದ ಹಿಂದೆ ರೆಜಿಮ್ ಚೇಂಜ್ ಸಂಚು? ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಜೋಶಿ ಶಾಕಿಂಗ್ ಹೇಳಿಕೆ | ವಿಡಿಯೋ

ದೆಹಲಿ ಪೊಲೀಸರಿಂದ ಬಿಗಿ ಬಂದೋಬಸ್ತ್

ಇಂದು ದೆಹಲಿಯಲ್ಲಿ ಪ್ರತಿಭಟನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ದೆಹಲಿ ಪೊಲೀಸರು ಭಾರೀ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ದೆಹಲಿ ಪೊಲೀಸರ ಮಾಹಿತಿ ಪ್ರಕಾರ ಭದ್ರತಾ ದೃಷ್ಟಿಯಿಂದ ರಾಮಲೀಲಾ ಮೈದಾನವನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ. ಭದ್ರತೆ, ಜನಸಂದಣಿ ನಿಯಂತ್ರಣಕ್ಕಾಗಿ ಸುಮಾರು 4 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಮುಖ ವೃತ್ತಗಳಲ್ಲಿ ಹೆಚ್ಚುವರಿಯಾಗಿ 150 ಸಂಚಾರ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ರ‍್ಯಾಲಿ ನಡೆಯಲಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತಾ ವ್ಯವಸ್ಥೆಯ ಮೇಲೆ ನಿಗಾ ವಹಿಸಲಿದ್ದಾರೆ.

ಇದಕ್ಕೂ ಮುನ್ನ ಖರ್ಗೆ ನಿವಾಸದಲ್ಲಿ ರಹಸ್ಯ ಚರ್ಚೆ

ಇನ್ನೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು, ಹೋರಾಟದ ಕುರಿತಂತೆ ಇಂಡಿಯಾ ಒಕ್ಕೂಟದ ನಾಯಕರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಭಿನ್ನ ರೀತಿಯ ರಾಜಕೀಯ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದಕ್ಕೆ 'ಜನತಾ ನ್ಯಾಯಾಲಯದಲ್ಲಿ ಮಹಾಭಿಯೋಗ' ಎಂದು ಕರೆದಿವೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ, ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್: ಕರ್ನಾಟಕಕ್ಕೆ ಕೇಂದ್ರದಿಂದ ₹4,500 ಕೋಟಿ ತೆರಿಗೆ ಪಾಲು ಬಿಡುಗಡೆ

20 ಸಮಿತಿಗಳಿಗೆ ಜವಾಬ್ದಾರಿ

ಈ ಬಾರಿ ರಾಲಿಯನ್ನ ಯಶಸ್ವಿಗೊಳಿಸಲು ಪಕ್ಕಾ ಪ್ಲಾನ್ ಮಾಡಲಾಗಿದೆ. ಪ್ರದೇಶ ಕಾಂಗ್ರೆಸ್ 20 ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಜನಸಂದಣಿಯನ್ನು ನಿರ್ವಹಿಸಲು ಮತ್ತು ನಿಯಂತ್ರಿಸಲು ಪೊಲೀಸರಿಗೆ ನೆರವಾಗುವಂತೆ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರನ್ನೂ ನಿಯೋಜಿಸಲಾಗುತ್ತದೆ.

ಮಹಾರಾಷ್ಟ್ರದಿಂದ 5 ಸಾವಿರ ಕಾರ್ಯಕರ್ತರು ಭಾಗಿ

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಲು ಮಹಾರಾಷ್ಟ್ರದಿಂದ ಸುಮಾರು 5 ಸಾವಿರ ಜನರು ದೆಹಲಿಗೆ ಆಗಮಿಸಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಳ್ ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲೂ ಕೂಡ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಲೆಕ್ಕಿಸದೇ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಸೇರಿ ಕರ್ನಾಟಕ ಕಾಂಗ್ರೆಸ್‌ ನಾಯಕರು ಈಗಾಗಲೇ ದೆಹಲಿ ತಲುಪಿದ್ದಾರೆ ಎಂದು ವರದಿಯಾಗಿದೆ. ಸದ್ಯ ಇಂದು ನಡೆಯಲಿರುವ ಕಾಂಗ್ರೆಸ್ ಪ್ರತಿಭಟನೆ, ಅದರ ಮುಂದಿನ ಬೆಳವಣಿಗೆಗಳ ಕುರಿತು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟುಕ್ ಟುಕ್ ಪ್ರೇಮ! ಭಾರತದ ಆಟೋವನ್ನು ಬಿಟ್ಟಿರಲಾರದೆ ಲಂಡನ್‌ಗೇ ಹೊತ್ತೊಯ್ದ ವಿದೇಶಿ ದಂಪತಿ ಮನಮಿಡಿಯುವ ಕಥೆ
Anant Ashray: ಅನಾಥರ ಬಾಳಿಗೆ ಬೆಳಕಾದ 'ಅನಂತ ಆಶ್ರಯ; 5 ಸಾವಿರ ಬಡವರಿಗೆ ಬೃಹತ್ ಆಸರೆ ಕಲ್ಪಿಸಿದ ನೀತಾ ಅಂಬಾನಿ!