ಬಡವರ ಪಕ್ಷದ ಸಿಎಂ ಅರವಿಂದ್‌ ಕೇಜ್ರಿವಾಲ್‌ರಿಂದ ಮನೆ ನವೀಕರಣಕ್ಕೆ 171 ಕೋಟಿ ಖರ್ಚು: ಕಾಂಗ್ರೆಸ್‌ ಬಾಂಬ್‌!

By Santosh NaikFirst Published May 8, 2023, 7:27 PM IST
Highlights

ತನ್ನದು ಸಿಂಪಲ್‌ ಲೈಫ್‌ಸ್ಟೈಲ್‌ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳುತ್ತಿರೋದೆಲ್ಲಾ ಸುಳ್ಳು. ತಮ್ಮ ಮನೆಯ ನವೀಕರಣಕ್ಕಾಗಿ ಕೇಜ್ರಿವಾಲ್ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಅಜಯ್‌ ಮಾಕನ್‌ ಆರೋಪಿಸಿದ್ದಾರೆ. ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌, ಸಿಂಪ್ಲಿಸಿಟಿಯ ಆಗರವಾಗಿದ್ದರು ಎಂದು ಮಾಕನ್‌ ಹೇಳಿದ್ದಾರೆ.
 

ನವದೆಹಲಿ (ಮೇ.8): ತಮ್ಮನ್ನು ತಾವು ಬಡವರ ಪಕ್ಷ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷದ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮನೆ ನವೀಕರಣಕ್ಕೆ ಕೇವಲ 45 ಕೋಟಿ ಮಾತ್ರವಲ್ಲ ಬರೋಬ್ಬರಿ 171 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕಾಂಗ್ರೆಸ್‌ ವಕ್ಯಾರ ಅಜಯ್‌ ಮಾಕನ್‌ ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಅರವಿಂದ್‌ ಕೇಜ್ರಿವಾಲ್‌, ತಮ್ಮ ಸರ್ಕಾರಿ ಮನೆಯ ನವೀಕರಣಕ್ಕಾಗಿ 45 ಕೋಟಿ ರೂಪಾಯಿ ಖಚರ್ಉ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇಡೀ ದೇಶ ಕೋವಿಡ್‌-19 ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಅರವಿಂದ್ ಕೇಜ್ರಿವಾಲ್‌ ತಮ್ಮ  ಮನೆಯ ನವೀಕರಣ ಮಾಡೋದರಲ್ಲಿ ಬ್ಯುಸಿಯಾಗಿದ್ದರು. ಇದಕ್ಕಾಗಿ ಅವರು 45 ಕೋಟಿ ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ದೊಡ್ಡ ಮಟ್ಟದ ಆರೋಪ ಮಾಡಿತ್ತು. ತನ್ನದು ಸಿಂಪಲ್‌ ಬದುಕು, ಸರಳ ಜೀವನಶೈಲಿ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳುತ್ತಿದ್ದರೂ, ನಿಜಾರ್ಥದಲ್ಲಿ ಹಾಗಿಲ್ಲ. ಅವರು ತಮ್ಮ ನಿವಾಸವನ್ನು ಚಂದ ಮಾಡುವುದಕ್ಕಾಗಿಯೇ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಮಾಕೆನ್‌ ಆರೋಪಿಸಿದ್ದಾರೆ. ದೆಹಲಿಯ ಮಾಜಿ ಸಿಎಂ ದಿವಂಗತ ಶೀಲಾ ದೀಕ್ಷಿತ್‌ ಅವರು ಸರಳತೆಯ ಪ್ರತಿರೂಪ, ಕೇಜ್ರಿವಾಲ್‌ ಅಲ್ಲ ಎಂದು ಕಾಂಗ್ರೆಸ್‌ ವಕ್ತಾರ ಮಾಕೆನ್‌ ಹೇಳಿದ್ದಾರೆ.

ದೆಹಲಿ ಸಿಎಂ ಆಗಿ 15 ವರ್ಷಗಳ ಕಾಲ ಅಧಿಕಾರ ನಡೆಸಿದ ಶೀಲಾ ದೀಕ್ಷಿತ್‌ ಹಾಗೂ ಅವರ ಕ್ಯಾಬಿನೆಟ್‌ ತಮ್ಮ ಮನೆಗಳನ್ನು ನವೀಕರಣ ಮಾಡಿರುವ ಹಣಕ್ಕೆ ಹೋಲಿಸಿದರೆ, ಅರವಿಂದ್‌ ಕೇಜ್ರಿವಾಲ್‌ ತಮ್ಮ ಮನೆ ನವೀಕರಣ ಮಾಡೋದಕ್ಕೆ ಮಾಡಿರುವ ಖರ್ಚು ಬಹಳ ಹೆಚ್ಚು ಎಂದು ಮಾಕೆನ್‌ ಹೇಳಿದ್ದಾರೆ. ಮುಖ್ಯಮಂತ್ರಿಗಳ ವಸತಿ ಸಂಕೀರ್ಣವನ್ನು ವಿಸ್ತರಣೆ ಮಾಡುವ ಸಲುವಾಗಿಹಲವು ಅಧಿಕಾರಿಗಳ ನಿವಾಸಗಳನ್ನು ಖಾಲಿ ಮಾಡಿದ್ದಲ್ಲದೆ, ಒಡೆದು ಹಾಕಲಾಗಿದೆ. ಈ ಅಧಿಕಾರಿಗಳಿಗೆ ಉಳಿಯಲು ಹೊಸ ಫ್ಲ್ಯಾಟ್‌ಗಳನ್ನು ಸರ್ಕಾರ ಖರೀದಿ ಮಾಡಿದೆ. ಈ ಎಲ್ಲಾ ಲೆಕ್ಕವನ್ನು ಹಾಕೋದಾದರೆ ಮನೆ ನವೀಕರಣಕ್ಕೆ ಮಾಡಿರುವ ಒಟ್ಟಾರೆ ಓರ್ಚು 45 ಕೋಟಿಯಲ್ಲ ಬದಲಿಗೆ 171 ಕೋಟಿ ರೂಪಾಯಿ ಎಂದು ಮಾಕನ್‌ ಆರೋಪಿಸಿದ್ದಾರೆ. ಕೋವಿಡ್‌--19 ಸಮಯದಲ್ಲಿ ಜನರು ಆಕ್ಸಿಜನ್‌ ಇಲ್ಲದೆ, ಬೆಡ್‌ನಿಂದ ಬೆಡ್‌ಗೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುತ್ತಿದ್ದಾಗ ಅರವಿಂದ್‌ ಕೇಜ್ರಿವಾಲ್‌, ಸಿವಿಲ್‌ ಲೈನ್ಸ್‌ನಲ್ಲಿರುವ ಸರ್ಕಾರಿ ಬಂಗಲೆಯ ನವೀಕರಣಕ್ಕಾಗಿ ಕೋಟಿಗಟ್ಟಲೆ ವೆಚ್ಚ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

Latest Videos

 

ಆಮ್‌ ಆದ್ಮಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರ ಐಷಾರಾಮಿ ಪ್ಯಾಲೆಸ್‌ನ Exclusive ಚಿತ್ರಗಳು!

171 ಕೋಟಿ ರೂಪಾಯಿ ಹೇಗೆ ವೆಚ್ಚ ಮಾಡಿದ್ದಾರೆ ಅನ್ನೋದನ್ನೂ ಹೇಳುತ್ತೇನೆ. ಸಿವಿಲ್‌ ಲೈನ್ಸ್‌ನ ಫ್ಲಾಗ್‌ಸ್ಟಾಪ್‌ ರಸ್ತೆಯಲ್ಲಿರುವ ಕೇಜ್ರಿವಾಲ್‌ ಅವರ ಮನೆ ನಂ.6ನ ಅಕ್ಕಪಕ್ಕದಲ್ಲಿ ನಾಲ್ಕು ವಸತಿ ಸಂಕೀರ್ಣಗಳಿದ್ದವು. ಈ ವಸತಿ ಸಂಕೀರ್ಣದಲ್ಲಿ 22 ಅಧಿಕಾರಿಗಳ ಫ್ಲ್ಯಾಟ್‌ಗಳಿದ್ದವು. ಈ 22 ಮನೆಗಳ ಪೈಕಿ, 15 ಮನೆಗಳನ್ನು ಒಂದೋ ಖಾಲಿ ಮಾಡಿಸಲಾಗಿದೆ ಅಥವಾ ಧ್ವಂಸ ಮಾಡಲಾಗಿದೆ. ಇನ್ನು ಉಳಿದ 7 ಮನೆಗಳನ್ನು ಅಧಿಕಾರಿಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಸೂಚಿಸಲಾಗಿದೆ ಎಂದು ಮಾಕೆನ್‌ ಹೇಳಿದ್ದಾರೆ.

ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

 

ಇನ್ನು ಈ ಅಧಿಕಾರಿಗಳಿಗಾಗಿ 21 ಟೈಪ್‌-5 ಫ್ಲ್ಯಾಟ್‌ಗಳನ್ನು ಬರೋಬ್ಬರಿ 126 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಗ್ರಾಮದಲ್ಲಿ ಖರೀದಿ ಮಾಡಿದೆ. ಸಿಎಂ ಮನೆಯ ಪಕ್ಕದಲ್ಲಿದ್ದ ಮನೆಗಳನ್ನು ಖಾಲಿ ಮಾಡಿಸಿದ ಸಲುವಾಗಿ ಅವರಿಗೆ ಈ ಫ್ಲ್ಯಾಟ್‌ಗಳನ್ನು ನೀಡಲಾಗಿದೆ ಎಂದಿದ್ದಾರೆ. ಈ 21 ಫ್ಲಾಟ್‌ಗಳ ಬೆಲೆಯನ್ನು ಕೇಜ್ರಿವಾಲ್ ಅವರ ನಿವಾಸದ ಒಟ್ಟು ವೆಚ್ಚದಲ್ಲಿ ಸೇರಿಸಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಸರ್ಕಾರವು ಬಜೆಟ್ ಅನ್ನು ಅಂಗೀಕರಿಸಿದ್ದರಿಂದ ಅವರು ಸವಲತ್ತುಗಳ ಉಲ್ಲಂಘನೆಯನ್ನು ಉಲ್ಲೇಖಿಸಿದ್ದಾರೆ ಆದರೆ ಕೇಜ್ರಿವಾಲ್ ಅವರ ನಿವಾಸದ ನವೀಕರಣದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಲಿಲ್ಲ. ಯೋಜನೆಯು ಪರಂಪರೆ, ಹಸಿರು ಮತ್ತು ದೆಹಲಿಯ ಮಾಸ್ಟರ್ ಪ್ಲಾನ್ ಅನ್ನು ಸಹ ಕಡೆಗಣಿಸಿದೆ ಎಂದು ಅವರು ಆರೋಪಿಸಿದರು. 2015 ರಲ್ಲಿ ಮುಖ್ಯಮಂತ್ರಿಯಾದ ನಂತರ ಕೇಜ್ರಿವಾಲ್ ಅವರ ಸಿವಿಲ್ ಲೈನ್ಸ್ ನಿವಾಸವು 5000 ಚದರ ಮೀಟರ್ ಪ್ರದೇಶದಲ್ಲಿ ಮುಖ್ಯಮಂತ್ರಿಗಳ ಶಿಬಿರ ಕಚೇರಿಯನ್ನು ಹೊಂದಿದೆ.
 

click me!