ಈ ಜಿಲ್ಲೆಯಲ್ಲಿ ಮಾ.15ರಿಂದ ಸಂಪೂರ್ಣ ಲಾಕ್‌ಡೌನ್..!

By Suvarna NewsFirst Published Mar 13, 2021, 10:01 AM IST
Highlights

ಹೆಚ್ಚಿದ ಕೊರೋನಾ | ಈ ಜಿಲ್ಲೆಯಲ್ಲಿ ಮತ್ತೆ ಸಂಪೂರ್ಣ ಲಾಕ್‌ಡೌನ್ | ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

ಮುಂಬೈ(ಮಾ.13): ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಅಲ್ಲಿನ ನಾಗ್ಪರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ 15ರಿಂದ 21ರ ತನಕ ಕಠಿಣ ಲಾಕ್‌ಡೌನ್ ವಿಧಿಸಲಾಗುತ್ತದೆ.

ನಾಗ್‌ಪುರದ ಉಸ್ತುವಾರಿ ಸಚಿವ ನಿತಿನ್ ರವಾತ್ ತಈ ಬಗ್ಗೆ ತಿಳಿಸಿದ್ದು, ಜನ ಸಾಮಾನ್ಯರು ಅಗತ್ಯ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಈ ಪ್ರದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿದ್ದು, ಲಾಕ್‌ಡೌನ್‌ಗೆ ನಿರ್ಧರಿಸಲಾಗಿದೆ.

ಕೊರೋನಾ ಏರಿಕೆ: ಗ್ರಾಪಂ ಫಲಿತಾಂಶ, ರಾಜಕೀಯ ಸಭೆ, ಜನರ ನಿರ್ಲಕ್ಷ್ಯವೇ ಕಾರಣ!

ಕಳೆದ 24 ಗಂಟೆಯ 1710 ಕೊರೋನಾ ಕೇಸ್ ಪತ್ತೆಯಾಗಿದ್ದು, 8 ಸಾವು ಸಂಭವಿಸಿದೆ. ಈಗಾಗಲೇ 10458 ಕೊರೋನಾ ಟೆಸ್ಟ್ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾಕ್‌ಡೌನ್ ಸಂದರ್ಭ ಮೆಡಿಕಲ್‌ಗಳು ತೆರೆದಿರಲಿದ್ದು, ಎಂದಿನಂತೆ ಕಾರ್ಯ ನಿರ್ವಹಿಸಲಿವೆ,

ಮಾಲ್‌, ಮಾರುಕಟ್ಟೆಗಳು ಮುಚ್ಚಲ್ಪಡಲಿವೆ. ಮದುವೆ ಇತರ ಕಾರ್ಯಕ್ರಮಗಳು ನಡೆಯುವುದಿಲ್ಲ. ರೆಸ್ಟೋರೆಂಟ್‌ಗಳು ರಾತ್ರಿ 9ರ ತನಕ ಕಾರ್ಯ ನಿರ್ವಹಿಸಬಹುದಾಗಿದೆ.

ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ...

ರೆಸ್ಟೋರೆಂಟ್ ಹೋಂ ಡೆಲಿವರಿ ನೀಡಲು ಅವಕಾಶ ನೀಡಲಾಗಿದೆ. ಥಾನೆ ಈಗಾಗಲೇ 16 ಹಾಟ್‌ಸ್ಪಾಟ್‌ಗಳಲ್ಲಿ ಲಾಕ್‌ಡೌನ್ ಜಾರಿ ಮಾಡಿದ್ದು, ಇದು ಮಾರ್ಚ್ 31ರ ತನಕ ಇರಲಿದೆ.

click me!