ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

Published : Mar 13, 2021, 08:40 AM IST
ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

ಸಾರಾಂಶ

 ಭಾರ​ತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರ್ಣ| ದೇಶಾ​ದ್ಯಂತ ಸ್ವಾತಂತ್ರ್ಯದ ಅಮೃತ ಮಹೋ​ತ್ಸ​ವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ| ತ್ರಿವರ್ಣ ಧ್ವಜ ರೂಪಿ​ಸಿದ ವೆಂಕಯ್ಯ ಪುತ್ರಿಗೆ ಸಿಎಂ ಜಗನ್‌ ಸನ್ಮಾ​ನ

ಹೈದ​ರಾ​ಬಾ​ದ್‌(ಮಾ.13): ಭಾರ​ತಕ್ಕೆ ಸ್ವಾತಂತ್ರ್ಯ ಲಭಿಸಿ 2021ರ ಆ.15ಕ್ಕೆ 75 ವರ್ಷ ಪೂರೈ​ಸು​ತ್ತಿ​ರುವ ಹಿನ್ನೆ​ಲೆ​ಯ​ಲ್ಲಿ ದೇಶಾ​ದ್ಯಂತ ಸ್ವಾತಂತ್ರ್ಯದ ಅಮೃತ ಮಹೋ​ತ್ಸ​ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿ​ರುವ ಬೆನ್ನಲ್ಲೇ, ದೇಶದ ತ್ರಿವರ್ಣ ಧ್ವಜ ರೂಪಿ​ಸಿದ ಕೀರ್ತಿಯ ಪಿಂಗಾಳಿ ವೆಂಕಯ್ಯ ಅವರ ಪುತ್ರಿಗೆ ಆಂಧ್ರ​ಪ್ರ​ದೇಶ ಮುಖ್ಯ​ಮಂತ್ರಿ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಅವರು ಸನ್ಮಾನ ಮಾಡಿ​ದ್ದಾರೆ.

ಶುಕ್ರ​ವಾರ ಗುಂಟೂರು ಜಿಲ್ಲೆ​ಯ​ ಮಚೆರ್ಲಾ ಗ್ರಾಮಕ್ಕೆ ಆಗ​ಮಿ​ಸಿದ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರು, ಪಿಂಗಾಳಿ ವೆಂಕಯ್ಯ ಅವರ ಪುತ್ರಿ​ಯಾದ 99 ವರ್ಷದ ಹಿರಿಯ ನಾಯಕಿ ಘಂಟ​ಸಾಲ ಸೀತಾ​ಮ​ಹಾ​ಲಕ್ಷ್ಮೇ ಅವ​ರಿಗೆ ಸ್ಮರ​ಣಿ​ಕೆ​ಯೊಂದನ್ನು ನೀಡಿ ಸನ್ಮಾನ ನೆರ​ವೇ​ರಿ​ಸಿ​ದ​ರು.

ಮುಖ್ಯ​ಮಂತ್ರಿ ಜಗನ್‌ ಅವರ ಈ ವೈಖ​ರಿಯು ನಾನು ಮನ​ಸೋ​ತಿ​ದ್ದೇನೆ ಎಂದು ಸೀತಾ​ಮ​ಹಾ​ಲಕ್ಷ್ಮೇ ತಿಳಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸರ್ಕಾರಿ ನೌಕರಿ, ಕೈತುಂಬಾ ಸಂಬಳ ಬರುತ್ತಿದ್ದರೂ 8 ವರ್ಷದ ಮಗಳನ್ನ ಚೆನ್ನೈ ಎಕ್ಸ್‌ಪ್ರೆಸ್ ರೈಲಿಗೆ ತಳ್ಳಿದ ತಾಯಿ!
HDFC ಬಿಕ್ಕಟ್ಟು: CEO ಜತೆ ಜಗಳ, ಅಧ್ಯಕ್ಷ ಸ್ಥಾನಕ್ಕೆ ಚಕ್ರವರ್ತಿ ಹಠಾತ್ ರಾಜೀನಾಮೆ, ಶೇರು ಪಾತಾಳಕ್ಕೆ, RBI ಎಂಟ್ರಿ!