ರಾಜಸ್ಥಾನದಲ್ಲಿ ಹಿಂದುಗಳ ಬೈಕ್ ರ‍್ಯಾಲಿ ವೇಳೆ ಕಲ್ಲು ತೂರಾಟ, 43 ಮಂದಿಗೆ ಗಾಯ!

By Suvarna NewsFirst Published Apr 2, 2022, 10:38 PM IST
Highlights

ಕರೌಲಿಯಲ್ಲಿ ಹಿಂದೂ ಹೊಸ ವರ್ಷಾಚರಣೆಯ ಬೈಕ್ ಮೆರವಣಿಗೆ ವೇಳೆ ನಡೆದ ದಾಳಿಯಲ್ಲಿ ಪೊಲೀಸರು ಸೇರಿದಂತೆ 43 ಜನರು ಗಾಯಗೊಂಡಿದ್ದಾರೆ. ಹಲವಾರು ಅಂಗಡಿ ಮಳಿಗೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಜೈಪುರ (ಏ.2): ರಾಜಸ್ಥಾನದ ಕರೌಲಿಯಲ್ಲಿ, ಹಿಂದೂ ಹೊಸ ವರ್ಷಾಚರಣೆಯ ( Hindu New Year) ಸಂದರ್ಭದಲ್ಲಿ ನಡೆದ ಬೈಕ್ ರ‍್ಯಾಲಿ (Bike Rally) ವೇಳೆ ನಗರದ ಹತ್ವಾರಾ ಬಜಾರ್‌ನ (Hatwara Bazar) ಮುಸ್ಲಿಂ ಪ್ರಾಬಲ್ಯದ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ವೇಳೆ ರ‍್ಯಾಲಿ  ಮೇಲೆ ಗುಂಪು ದಾಳಿ ನಡೆಸಿದೆ. ಇದರ ಬೆನ್ನಲ್ಲಿಯೇ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.

ರ‍್ಯಾಲಿ ಮೇಲೆ ಕಲ್ಲು ತೂರಾಟ ನಡೆದಿದ್ದು, ದುಷ್ಕರ್ಮಿಗಳು ಹತ್ತಕ್ಕೂ ಹೆಚ್ಚು ಅಂಗಡಿಗಳು ಮತ್ತು ಮೂರು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಹಿಂದೂ ಹೊಸ ವರ್ಷದ ಮೊದಲ ದಿನವಾದ 'ನವ ಸಂವತ್ಸರ'ವನ್ನು (Nav Samvatsar) ಆಚರಿಸಲು ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮಾರುಕಟ್ಟೆಯನ್ನು ಮುಚ್ಚಲಾಗಿದ್ದು, ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. 

ಗುಂಪು ದಾಳಿಯಲ್ಲಿ ಇದುವರೆಗೆ ಪೊಲೀಸರು ಸೇರಿದಂತೆ 43 ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪುಷ್ಪೇಂದ್ರ ಎಂಬುವವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಜೈಪುರದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಬೈಕ್ ರ‍್ಯಾಲಿ ಮೇಲೆ ನಡೆದ ಕಲ್ಲು ತೂರಾಟದಲ್ಲಿ ರ‍್ಯಾಲಿಯ ಭದ್ರತೆಗೆ ನಿಯೋಜನೆಯಾಗಿದ್ದ ನಾಲ್ವರು ಪೊಲೀಸರಿಗೂ ಗಾಯಗಳಾಗಿವೆ. ಸ್ಥಳೀಯ ಪತ್ರಿಕೆಯ ಅವರ ವರದಿಯ ಪ್ರಕಾರ, ಆಸ್ಪತ್ರೆಗೆ ತಲುಪಿದ ಗಾಯಾಳುಗಳ ದೇಹದ ಮೇಲೆ ಚಾಕುವಿನ ಗುರುತುಗಳಿವೆ. ಗಾಯಗೊಂಡವರ ಪರಿಸ್ಥಿತಿ ಯಾವ ರೀತಿ ಇದೆ ಎನ್ನುವುದನ್ನು ತಿಳಿಸಲು ವೈದ್ಯರು ನಿರಾಕರಿಸಿದ್ದು, ಸ್ಥಳೀಯ ಆಡಳಿತ ಕೂಡ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ.



Attack on Hindu rally at Karauli (Rajasthan)
On the day of Hindu New year, Hindus were taking out a bike rally. As the rally reached Hatwara market, stone pelting started from samuday vishesh.
Lot of shops n bikes were burned, lot of people injured. pic.twitter.com/gW5uI7FRhN

— NEO (Only Truth) (@Infinity_Tarun)


ಜಿಲ್ಲಾಧಿಕಾರಿ ಡಾ.ಮೋಹನ್ ಲಾಲ್ ಯಾದವ್ ಮತ್ತು ಎಸ್ಪಿ ಶೈಲೇಂದ್ರ ಸಿಂಗ್ ಇಂದೌಲಿಯಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಘಟನೆ ನಡೆದ ಸ್ಥಳದ ಜತೆಗೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಟನೆಯ ಸಂಪೂರ್ಣ ಮಾಹಿತಿ ಪಡೆದ ಡಿಜಿಪಿ ಎಂಎಲ್ ಲಾಥರ್. ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಹವಾಸಿಂಗ್ ಘುಮಾರಿಯಾ ಹೆಚ್ಚಿನ ಭದ್ರತೆಗಾಗಿ ಕರೌಲಿಗೆ 600 ಯೋಧರ ಪಡೆಯನ್ನೂ ಕಳುಹಿಸಿದ್ದಾರೆ.

Latest Videos

“ಮುಸ್ಲಿಮ್ ಪ್ರಾಬಲ್ಯದ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ರ‍್ಯಾಲಿ ಮೇಲೆ ಕಲ್ಲು ತೂರಾಟದಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಬೆಂಕಿ ಹಚ್ಚಲಾಯಿತು. ಕನಿಷ್ಠ ಒಂದು ಬೈಕ್ ಮತ್ತು ಒಂದು ಅಂಗಡಿಗೆ ಬೆಂಕಿ ಹಚ್ಚಲಾಗಿದೆ,'' ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರೌಲಿ ಘಟನೆ ಕುರಿತು ಡಿಜಿ ಜತೆ ಮಾತನಾಡಿದ್ದೇನೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ. ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರಿಗೆ ಆದೇಶಿಸಲಾಗಿದೆ ಎಂದ ಅವರು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

Communal Violence 5 ವರ್ಷದಲ್ಲಿ ದೇಶದಲ್ಲಿ 3,400 ಕೋಮುಗಲಭೆ

“ಕರ್ಫ್ಯೂ ವಿಧಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಕರೌಲಿಯ ಜಿಲ್ಲಾಧಿಕಾರಿ ರಾಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ರಾಜೇಂದ್ರ ಸಿಂಗ್ ಶೇಖಾವತ್ ಪ್ರಕಾರ, ದುಷ್ಕರ್ಮಿಗಳು ಹಲವಾರು ಸ್ಥಳಗಳಲ್ಲಿ ಬೆಂಕಿ ಹಚ್ಚಿದ್ದಾರೆ ಇದರಿಂದ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಆದರೆ ನಿಯಂತ್ರಣದಲ್ಲಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಮತ್ತೊಂದು ವಿವಾದ, ಕೊರೋನಾಗಿಂತಲೂ ವೇಗವಾಗಿ ಹರಡತೊಡಗಿದ ಕೋಮು ದ್ವೇಷ

2016ರಿಂದ 2020ರ ವರೆಗೆ ದೇಶದಲ್ಲಿ 3,400 ಕೋಮುಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ. ಜೊತೆಗೆ ಈ ಅವಧಿಯಲ್ಲಿ ದೇಶದಲ್ಲಿ 2.76 ಲಕ್ಷ ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ. 2020 ರಲ್ಲಿ 857, 2019ರಲ್ಲಿ 438, 2018 ರಲ್ಲಿ 512, 2017ರಲ್ಲಿ 723 ಮತ್ತು 2016ರಲ್ಲಿ 869 ಕೋಮು ಗಲಭೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.ಇನ್ನು ಇತರ ಗಲಭೆ ಪ್ರಕರಣ ಬಗ್ಗೆ ಮಾಹಿತಿ ನೀಡಿರುವ ಅವರು. 2020ರಲ್ಲಿ 51,606, 2019ರಲ್ಲಿ 45,985, 2018ರಲ್ಲಿ 57,828, 2017ರಲ್ಲಿ 58,880 ಮತ್ತು 2016ರಲ್ಲಿ 61,974 ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ.

click me!