
ನವದೆಹಲಿ(ಏ.02): ಲಂಡನ್ ಸೇರಿದಂತೆ ಯೂರೋಪ್ ರಾಷ್ಟ್ರಗಳಲ್ಲಿ ಕೊರೋನಾ ಹೊಸ ತಳಿ XE ಆತಂಕ ಹೆಚ್ಚಾಗಿದೆ. ಇದರ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಸುದ್ಧಿಗೋಷ್ಠಿ ನಡೆಸಿದೆ. ಈ ವೇಳೆ ಹೊಸ XE ತಳಿ ಓಮಿಕ್ರಾನ್‌ಗಿಂತ ವೇಗವಾಗಿ ಹರಡಬಲ್ಲದು. ಹೀಗಾಗಿ ಅತೀವ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದಿದೆ. ಈ ಮಾತು ಹಲವು ದೇಶಗಳ ನಿದ್ದೆಗೆಡಿಸಿದೆ. ಆದರೆ ಭಾರತದ ತಜ್ಞರು ಸಮಾಧಾನದ ಉತ್ತರ ನೀಡಿದ್ದಾರೆ. ವಿಶ್ವದಲ್ಲಿ ಹೊಸ ತಳಿ XE ಹರಡುತ್ತಿದೆ. ಆದರೆ ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಂದಿನಂತೆ ಕೊರೋನಾ ಮುನ್ನಚ್ಚೆರಿಕೆ ಬೇಕು ಎಂದಿದ್ದಾರೆ.
ಓಮಿಕ್ರಾನ್ BA.2 ಉಪ ತಳಿಯಾಗಿರುವ XE ವೇರಿಯೆಂಟ್ ಅತೀ ವೇಗವಾಗಿ ಹರಡುತ್ತಿದೆ ನಿಜ. ಆದರೆ ಈ ತಳಿ ಜನವರಿಯಲ್ಲೇ ಪತ್ತೆಯಾಗಿತ್ತು. ಇದೀಗ ಲಂಡನ್ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಸದ್ಯ ವಿಶ್ವದಲ್ಲಿ 600 ಹೊಸ XE ತಳಿ ಪ್ರಕರಣ ಪತ್ತೆಯಾಗಿದೆ. ಹೀಗಾಗಿ ಭಾರತದಲ್ಲಿ ಹೊಸ ತಳಿ ಹೆಚ್ಚಿನ ಅನಾಹುತ ಮಾಡುವ ಸಾಧ್ಯತೆಗಳು ಕಡಿಮೆ. ಇನ್ನು ಎಚ್ಚರಿಕೆ ವಹಿಸುವುದು ಅಗತ್ಯ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಟಾಟಾ ಇನ್ಸ್ಟಿಟ್ಯೂಟ್ ಫಾರ್ ಜೆನೆಟಿಕ್ಸ್ ಅಂಡ್ ಸೊಸೈಟಿ ನಿರ್ದೇಶಕ ರಾಕೇಶ್ ಮಿಶ್ರಾ ಹೇಳಿದ್ದಾರೆ.
ಸಾಲು ಸಾಲು ರಜೆ, ಶಾಲೆಗಳಲ್ಲಿ Covid ಲಸಿಕೆ ಅಭಿಯಾನಕ್ಕೆ ಹಿನ್ನಡೆ
ನೂತನ ಕೊರೋನಾ ತಳಿ ಮತ್ತೊಂದು ಅಲೆ ಸೃಷ್ಟಿಸಲಿದೆಯಾ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಇಲ್ಲ ಎಂದು ರಾಕೇಶ್ ಮಿಶ್ರಾ ಹೇಳಿದ್ದಾರೆ. ಎಲ್ಲಾ ರಾಷ್ಟ್ರಗಳು ಎಚ್ಚರಿಕೆ ವಹಿಸಿದರೆ ಅಷ್ಟೇ ವೇಗವಾಗಿ ಹೊಸ ತಳಿಯನ್ನು ನಿರ್ನಾಮ ಮಾಡಬುಹುದು ಎಂದಿದ್ದಾರೆ. ಸದ್ಯದ ಕೊರೋನಾದ ಹೊಸ ತಳಿ XE ಗುಣಲಕ್ಷಣಗಳು ಮತ್ತೊಂದು ಅಲೆಯನ್ನು ಸೃಷ್ಟಿಸುವ ಸಾಧ್ಯತೆ ತೀರಾ ಕಡಿಮೆ ಎಂದಿದ್ದಾರೆ. ಆದರೆ ಕೊರೋನಾ ಹಾಗೂ ಉಪತಳಿಗಳ ಕುರಿತು ಈಗಲೇ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಉಪತಳಿಗಳಿಗೆ ಪೂರಕ ವಾತಾವರಣವಿದ್ದರೆ, ಅಥವಾ ಅಂತಹ ವಾತಾವರವನ್ನು ನಾವು ನಿರ್ಮಿಸಿದರೆ ಅಪಾಯ ತಪ್ಪಿದ್ದಲ್ಲ ಎಂದು ರಾಕೇಶ್ ಮಿಶ್ರಾ ಹೇಳಿದ್ದಾರೆ.
ಭಾರತದಲ್ಲಿ ಕೆಲ ರಾಜ್ಯಗಳು, ಕೆಲ ನಗರಗಳಲ್ಲಿ ಕೊರೋನಾ ಅಂತ್ಯಗೊಂಡಿದೆ ಎಂಬಂತೆ ವರ್ತಿಸುತ್ತಿದ್ದಾರೆ. ಮಾಸ್ಕ್, ಅಂತರದ ಅವಶ್ಯಕತೆ ಇಲ್ಲ ಎನ್ನುತ್ತಿದ್ದಾರೆ. ಆದರೆ ಈಗಾಗಲೇ ಮೂರು ಅಲೆಗಳನ್ನು ಸೃಷ್ಟಿಸಿರುವ ವೈರಸ್ ಸಂಪೂರ್ಣವಾಗಿ ತೊಲಗಲು ವರ್ಷಗಳೇ ಹಿಡಯಲಿದೆ. ಆದರೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಲಸಿಕೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ರಾಕೇಶ್ ಮಿಶ್ರಾ ಹೇಳಿದ್ದಾರೆ.
'ಮಾಸ್ಕ್ ಧಾರಣೆ ನಿಯಮ ರದ್ದು ಆತುರದ ನಿರ್ಧಾರ: ದೇಶ ಇನ್ನೂ ಕೋವಿಡ್‌ನಿಂದ ಪೂರ್ಣ ಮುಕ್ತವಾಗಿಲ್ಲ'
ಹೊಸ ತಳಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆ ವಹಿಸಲು ಸೂಚಿಸಿದೆ. ಇದುವರೆಗೆ ಕೋವಿಡ್ ಉಪತಳಿಗಳಲ್ಲಿ ಇದೀಗ ಹೊಸ ಪತ್ತೆಯಾದ XE ತಳಿ ಅತೀ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಭಾರತದಲ್ಲಿ ಸಕ್ರಿಯ ಕೇಸು ಇಳಿಕೆ
ಭಾರತದಲ್ಲಿ ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 1,335 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 52 ಸೋಂಕಿತರು ಸಾವಿಗೀಡಾಗಿದ್ದಾರೆ. ವರದಿಯಾದ 52 ಸಾವುಗಳಲ್ಲಿ 48 ಸಾವುಗಳು ಕೇರಳದಲ್ಲೇ ಸಂಭವಿಸಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13,672ಕ್ಕೆ ಇಳಿಕೆಯಾಗಿದೆ. ದೇಶದಲ್ಲಿ ಕೋವಿಡ್ ಚೇತರಿಕೆ ದರವು ಶೇ. 98.76ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ. 0.22 ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.23 ರಷ್ಟಿದೆ. ದೇಶದಲ್ಲಿ ಈವರೆಗೆ 184.31 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ