
ನವದೆಹಲಿ(ಮಾ.26): ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕೊರೋನಾ ವೈರಸ್‌ನಿಂದ ಭಾರಿ ಪ್ರಮಾಣದಲ್ಲಿ ಸಾವು ಸಂಭವಿಸುತ್ತಿದ್ದು, ಅಲ್ಲಿಗೆ ಹೋಲಿಸಿದರೆ ಭಾರತದಲ್ಲಿ ಸಂಭವಿಸುತ್ತಿರುವ ಸಾವಿನ ಪ್ರಮಾಣ ಏಕೆ ಕಡಿಮೆಯಿದೆ ಎಂಬುದಕ್ಕೆ ವಿಜ್ಞಾನಿಗಳು ಕೊನೆಗೂ ಕಾರಣ ಪತ್ತೆಹಚ್ಚಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿ ಹಾಗೂ ಏಮ್ಸ್ ಆಸ್ಪತ್ರೆಯ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ ಹೆಚ್ಚಿನ ಭಾರತೀಯರ ರಕ್ತದಲ್ಲಿರುವ ‘ಸಿಡಿ4 ಟಿ ಸೆಲ್ಸ್’ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸೋ ದೊಡ್ಡಪತ್ರೆ ಎಲೆಯ ಖಾದ್ಯಗಳು
ಪಾಶ್ಚಾತ್ಯರಿಗಿಂತ ಹೆಚ್ಚಾಗಿ ಭಾರತೀಯರು ಮೊದಲೇ ಬೇರೆ ಬೇರೆ ರೀತಿಯ ಕೊರೋನಾವೈರಸ್‌ಗಳಿಗೆ ತುತ್ತಾಗಿರುತ್ತಾರೆ. ಅದರಿಂದ ನೆಗಡಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಹೀಗಾಗಿ ಅವರಲ್ಲಿ ಟಿ ಸೆಲ್ಸ್ ಅಭಿವೃದ್ಧಿಯಾಗಿರುತ್ತವೆ. ಈ ಕೋಶಗಳು ಬೇರೆ ಬೇರೆ ರೀತಿಯ ಕೊರೋನಾ ವೈರಸ್‌ಗಳ ವಿರುದ್ಧ ತಕ್ಕಮಟ್ಟಿಗಿನ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತವೆ.
ತರಕಾರಿ ಹಣ್ಣು ತಿನ್ನಿ, ವಾಕ್ ಮಾಡಿ ಅನ್ನೋದೆಲ್ಲ ಹಳೇದಾಯ್ತು, ಹೊಸದೇನಿದೆ?
ಸಾರ್ಸ್-ಕೋವ್-2 ಕೊರೋನಾ ವೈರಸ್‌ನ ಸ್ಪೈಕ್ ಪ್ರೋಟೀನ್‌ಗಳಿಂದ ಇವು ಸಂಪೂರ್ಣ ರಕ್ಷಣೆ ನೀಡದಿದ್ದರೂ ಈ ವೈರಸ್‌ನಿಂದ ಉಂಟಾಗುವ ಹಾನಿಯ ತೀವ್ರತೆಯನ್ನು ಕಡಿಮೆ ಮಾಡುತ್ತವೆ. ಹೀಗಾಗಿ ಕೋವಿಡ್-19 ಪೀಡಿತ ಭಾರತೀಯರಲ್ಲಿ ಸಾವಿನ ಪ್ರಮಾಣ ಕಡಿಮೆ ಎಂದು ಅಧ್ಯಯನಕಾರರು ‘ಫ್ರಂಟಿಯರ್ ಇನ್ ಇಮ್ಯುನಾಲಜಿ’ ನಿಯತಕಾಲಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ.
ಭಾರತದಲ್ಲಿ ಕೊರೋನಾದಿಂದ ಸಂಭವಿಸುವ ಸಾವಿನ ಪ್ರಮಾಣ ಶೇ.1.5 ಇದ್ದರೆ, ಅಮೆರಿಕದಲ್ಲಿ ಶೇ.3ಕ್ಕಿಂತ ಹೆಚ್ಚಿದೆ. ಮೆಕ್ಸಿಕೋದಲ್ಲಿ ಶೇ.10ಕ್ಕಿಂತ ಹೆಚ್ಚಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ