ಇಂದು ಲೇಟ್ ಆಗಿದೆ, ನಾಳೆ ಲೇಟಾಗಿ ಬರುತ್ತೇನೆ, ಜ್ಯೂನಿಯರ್ ಸಂದೇಶಕ್ಕೆ ವಕೀಲೆ ಕಂಗಾಲು!

By Chethan Kumar  |  First Published Nov 13, 2024, 6:40 PM IST

ಕೆಲಸದಿಂದ ಲೇಟಾಗಿದೆ. ಹೀಗಾಗಿ ನಾಳೆ ಲೇಟಾಗಿ ಕೆಲಸಕ್ಕೆ ಬರುತ್ತೇನೆ. ಜ್ಯೂನಿಯರ್ ಅಡ್ವೋಕೇಟ್ ಕಳುಹಿಸಿದ ಮೆಸೇಜ್‌ಗೆ ಹಿರಿಯ ವಕೀಲೆ ಪಿತ್ತ ನೆತ್ತಿಗೇರಿದೆ. ಇದೀಗ ಈ ಸಂದೇಶ ಭಾರಿ ಚರ್ಚೆ ಹುಟ್ಟು ಹಾಕಿದೆ. ಪರ ವಿರೋಧಗಳು ಹುಟ್ಟಿಕೊಂಡಿದೆ. ಅಷ್ಟಕ್ಕೂ ಇಲ್ಲಿ ತಪ್ಪು, ಸರಿ ಯಾವುದು?
 


ನವದೆಹಲಿ(ನ.13) ಒಂದು ಸಂದೇಶ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಇವತ್ತು ಕಚೇರಿಯಲ್ಲಿ ಕೆಲಸದ ಕಾರಣ ಲೇಟಾಗಿದೆ. ಹೀಗಾಗಿ ನಾಳೆ ಲೇಟ್ ಆಗಿ ಕಚೇರಿಗೆ ಬರುತ್ತೇನೆ. ಇದು ಜ್ಯೂನಿಯರ್ ಅಡ್ವೋಕೇಟ್, ಹಿರಿಯ ವಕೀಲೆಗೆ ಕಳುಹಿಸಿದ ವ್ಯಾಟ್ಸ್ಆ್ಯಪ್ ಸಂದೇಶ. ಇದರಲ್ಲಿ ಚರ್ಚೆ ಮಾಡುವ ವಿಚಾರ ಏನಿದೆ ಎಂದು ಆಲೋಚಿಸುತ್ತಿದ್ದೀರಾ?. ಈ ಸಂದೇಶ ಹಿರಿಯ ವಕೀಲೆಯ ಪಿತ್ತ ನೆತ್ತಿಗೇರಿಸುವಂತೆ ಮಾಡಿದೆ. ಹೀಗಾಗಿ ಸೋಶಿಯಲ್ ಮೀಡಿಯಾ ಮೂಲಕ ಸಂದೇಶ ಹಂಚಿಕೊಂಡಿದ್ದಾರೆ. ಯಾವಾಗ ವಕೀಲೆ ಈ ಸಂದೇಶ ಹಂಚಿಕೊಂಡ ಬೆನ್ನಲ್ಲೇ ವಕೀಲೆ ವಿರುದ್ಧ ಟೀಕೆಗಳು ಕೇಳಿಬಂದಿದೆ. ಇದಕ್ಕೆ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇದೀಗ ಪರ ವಿರೋಧದ ಚರ್ಚೆ ಶುರುವಾಗಿದೆ.

ಹಾಯ್ ಸರ್ & ಮೇಡಂ, ನಾಳೆ ಕಚೇರಿಗೆ ನಾನು ಬಳಗ್ಗೆ 11.30ರ ಸುಮಾರಿಗೆ ಆಗಮಿಸುತ್ತೇನೆ. ಯಾಕೆಂದರೆ ಇದೀ ರಾತ್ರಿ 8.30ರ ಸಮಯ. ಈಗ ನಾನು ಕಚೇರಿ ಬಿಡುತ್ತಿದ್ದೇನೆ ಎಂದು ಸಂದೇಶ ಕಳುಹಿಸಲಾಗಿದೆ. ಆಕ್ರೋಶಗೊಂಡ ಹಿರಿಯ ವಕೀಲೆ ಆಯುಷಿ ದೋಷಿ ಈ ಕುರಿತು ಆಕ್ರೋಶದ ನುಡಿಗಳನ್ನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಸೇಜ್ ಪೋಸ್ಟ್ ಮಾಡಿದ ವಕೀಲೆ, ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಈ ಸಂದೇಶ ನನ್ನ ಜ್ಯೂನಿಯರ್ ಅಡ್ವೋಕೇಟ್ ಕಳುಹಿಸದ್ದಾರೆ. ಇಂದಿನ ಪೀಳಿಗೆಯ ಮಕ್ಕಳು ಬೇರೆ ಲೋಕದಲ್ಲಿದ್ದಾರೆ. ಸ್ವಲ್ಪ ತಡವಾಗಿದೆ ಎಂದು ನಾಳೆ ತಡವಾಗಿ ಬರುತ್ತೇನೆ ಎಂದು ಸಂದೇಶ ಕಳುಹಿಸುತ್ತಿದ್ದಾರೆ. ತಡವಾದ ಸಮಯವನ್ನು ಮ್ಯಾಚ್ ಮಾಡಲು ಹೀಗೆ ಮಾಡುತ್ತಿದ್ದಾರೆ. ಎಂತಾ ನಡೆ ಇದು. ನನಗೆ ಮಾತೇ ಬರುತ್ತಿಲ್ಲ ಎಂದು ಆಯುಷಿ ದೋಷಿ ಟ್ವೀಟ್ ಮಾಡಿದ್ದಾರೆ.

Latest Videos

ನಾ ಆಫೀಸ್ ಬರೋದಿಲ್ಲ, ಉದ್ಯೋಗಿಯ 1 ವಾರದ ದಿಢೀರ್ ರಜೆ ಕಾರಣ ಕೇಳಿ ಬಾಸ್ ಕಂಗಾಲು!

ಈ ಸಂದೇಶ ಹಂಚಿಕೊಂಡ ಬೆನ್ನಲ್ಲೇ ಹಿರಿಯ ವಕೀಲೆ ವಿರುದ್ಧ ಟೀಕೆ ವ್ಯಕ್ತವಾಗಿದೆ. ಹೆಚ್ಚು ಸಮಯ ಕೆಲಸ ಮಾಡಿಸುತ್ತಿದ್ದೀರೆ ಹೆಚ್ಚುವರಿ ಪಾವತಿ ಮಾಡುತ್ತಿಲ್ಲ. ಅವರು ಜೀತದಾಳು ಅಲ್ಲ, ಕೆಲಸದ ಸಮಯದಲ್ಲಿ ಕೆಲಸ ಅಷ್ಟೇ. ಉಳಿದ ಸಮಯ ಅವರ ವೈಯುಕ್ತಿಕ ಸಮಯ. ಈ ಸಮಯದಲ್ಲಿ ಕೆಲಸ ಮಾಡಿಸಲು ಹೆಚ್ಚು ಪಾವತಿಸಬೇಕು ಅಥವಾ ಅವರ ಬಳಿಕ ಮನವಿ ಮಾಡಿಕೊಳ್ಳಬೇಕು. ನೀವು ಹೆಚ್ಚಿನ ಸಮಯ ಕಚೇರಿಯಲ್ಲಿ ಕಳೆದು ಕೆಲಸ ಮಾಡಿದ್ದೀರಿ ಎಂದ ಮಾತ್ರಕ್ಕೆ ಜ್ಯೂನಿಯರ್ಸ್ ಕೂಡ ಅದೇ ರೀತಿ ಕೆಲಸ ಮಾಡಬೇಕು ಎಂದು ಯೋಚಿಸುವುದು ತಪ್ಪು ಎಂದು ಹಲವರು ಸಲಹೆ ನೀಡಿದ್ದಾರೆ.

 

I can’t believe my junior sent me this. Today’s kids are something else. He stayed late, so now he’s going to show up late to the office to "make up" for it. What a move!🫡🫡 i am speechless mahn. pic.twitter.com/iNf629DLwq

— Adv. Ayushi Doshi (@AyushiiDoshiii)

 

ಟೀಕೆಗಳು ಹೆಚ್ಚಾಗುತ್ತಿದಂತೆ ಆಯುಷಿ ದೋಷಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿ ಮೂಲ ಉದ್ದೇಶ ಅಥವಾ ಹಿಂದಿನ ಘಟನೆ ತಿಳಿದಿಲ್ಲದ ಕಾರಣ ಹಲವರು ಕಮೆಂಟ್ ಮಾಡಿದ್ದಾರೆ. ಜ್ಯೂನಿಯರ್ ಅಡ್ವೋಕೇಟ್‌ಗೆ ಒಂದು ದಿನದಲ್ಲಿ ಪೂರ್ಣಗೊಳಿಸಬೇಕಿದ್ದ ಕೆಲಸ ಮುಗಿಸಿ ಮೂರು ದಿನ ನೀಡಲಾಗಿದೆ. ಆದರೂ ಮುಗಿದಿಲ್ಲ. ಡೆಡ್‌ಲೈನ್ ಬಂದರೂ, ಹೆಚ್ಚುವರಿ ಸಮಯ ನೀಡಿದರೂ ಕೆಲಸ ಮುಗಿಸಿಲ್ಲ. ಹೀಗಾಗಿ ತಡವಾಗಿದೆ. ತಡವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ. ಮಾಡಿದ ಕೆಲಸ ನಿಗದಿತಿ ಅವಧಿಯಲ್ಲಿ ಪೂರ್ಣಗೊಳಿಸದ ಕಾರಣ ಅವರೇ ನಿಂತಿದ್ದಾರೆ. ಹೆಚ್ಚುವರಿ ಸಮಯದ ಪ್ರಶ್ನೆ ಇಲ್ಲಿಲ್ಲ. ಇದು 8 ಗಂಟೆಯಲ್ಲಿ ಮುಗಿಯುವ ಕೆಲಸವನ್ನು 24 ಗಂಟೆಯಾದರೂ ಮುಗಿಸಿಲ್ಲ ಅನ್ನೋದು ಇಲ್ಲಿನ ಮೂಲ ಪ್ರಶ್ನೆ ಎಂದು ಆಯುಷಿ ದೂಷಿ ಹೇಳಿದ್ದಾರೆ.

ಇದೀಗ ಚರ್ಚೆ ಶುರುವಾಗಿದೆ. ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದರೆ ಹೆಚ್ಚುವರಿ ಕಲಸ ಮಾಡಬೇಕೆ ಅಥವಾ ಮಾಡಬಾರದೇ? ಅವಧಿಯೊಳಗೆ ಕೆಲಸ ಪೂರ್ಣಗೊಳಿಸಿಲ್ಲ. ಹೀಗಾಗಿ ತಡವಾಗಿ ಕಚೇರಿಯಿಂದ ತೆರಳಿ ನಾಳೆ ಲೇಟಾಗಿ ಬರುತ್ತೇನೆ ಎನ್ನುವುದು ತಪ್ಪೇ? ಸರಿಯೇ ಹೀಗೆ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಕೆಲವರು ಸರಿ ಎಂದರೆ ಕೆಲವರು ತಪ್ಪು ಎಂದಿದ್ದಾರೆ.

ಮದುವೆಗೆ ರಜೆ ನಿರಾಕರಿಸಿದ ಬಾಸ್, ವರನ ನಿರ್ಧಾರಕ್ಕೆ ಕಕ್ಕಾಬಿಕ್ಕಿಯಾದ ಕಂಪನಿ

click me!